ETV Bharat / sitara

ಕಾಲಿನ ಶಸ್ತ್ರ ಚಿಕಿತ್ಸೆ ನಂತರ ಕೆಲಸಕ್ಕೆ ಮರಳಿದ ನಟ ರಣದೀಪ್ ಹೂಡ

ಕಳೆದ ತಿಂಗಳು ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ರಣದೀಪ್ ಹೂಡಾ ಕೆಲಸಕ್ಕೆ ಕಂ ಬ್ಯಾಕ್​ ಮಾಡಿದ್ದು, ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ರಾಧೆ ಚಿತ್ರದ ಡಬ್ಬಿಂಗ್ ಪ್ರಾರಂಭಿಸಿದ್ದಾರೆ.

author img

By

Published : Sep 16, 2020, 5:32 PM IST

ರಣದೀಪ್ ಹೂಡ
randeep hooda

ನವದೆಹಲಿ: ಕಳೆದ ತಿಂಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಿವುಡ್​ ನಟ ರಣದೀಪ್ ಹೂಡಾ ತಿಂಗಳುಗಳ ವಿರಾಮದ ನಂತರ ಕೆಲಸಕ್ಕೆ ಮರಳಿದ್ದು, ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ರಾಧೆ ಚಿತ್ರದ ಡಬ್ಬಿಂಗ್ ಪ್ರಾರಂಭಿಸಿದ್ದಾರೆ.

ರಣದೀಪ್​ ಹುಡಾ ಸ್ಟುಡಿಯೋದಲ್ಲಿ ಮೈಕ್​ ಮುಂದೆ ನಿಂತು ಡಬ್ಬಿಂಗ್​ ಮಾಡುತ್ತಿರುವ ತಮ್ಮ ಪೋಟೋವನ್ನು ಇನ್​ಸ್ಟಾ ಗ್ರಾಂನಲ್ಲಿ ಪೋಸ್ಟ್​ ಮಾಡುವ ಮೂಲಕ, ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರದ ಉಳಿದ ಕೆಲಸಗಳು ಶೀಘ್ರದಲ್ಲೇ ಪ್ರಾರಂಭವಾಗಬಹುದು ಎಂಬ ಸುಳಿವನ್ನು ಸಿನಿ ಪ್ರೇಕ್ಷಕರಿಗೆ ನೀಡಿದ್ದಾರೆ.

ಆಗಸ್ಟ್ 26 ರಂದು ಹುಡಾ ತೀವ್ರವಾದ ಕಾಲಿನ ನೋವಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೆ ಕೆಲಸಕ್ಕೆ ಮರಳಿರುವ ರಣದೀಪ್​ ಸೋಷಿಯಲ್ ಮೀಡಿಯಾದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಭುದೇವ ನಿರ್ದೇಶನ ಮಾಡಿರುವ ಈ ಆ್ಯಕ್ಷನ್‌ ಸಿನಿಮಾ ಈದ್‌ ಹಬ್ಬಕ್ಕೆ ಬಿಡುಗಡೆಯಾಗುತ್ತಿತ್ತು, ಆದರೆ ಕೋವಿಡ್​ ಲಾಕ್​ಡೌನ್​ ಪರಿಣಾಮ ಸಿನಿಮಾ ರಿಲೀಸ್​ ಮುಂದಕ್ಕೆ ಹೋಗಿದೆ. ಈ ಸಿನಿಮಾದಲ್ಲಿ ಸಲ್ಮಾನ್​ಗೆ ನಾಯಕಿಯಾಗಿ ದಿಶಾ ಪಟಾನಿ ನಟಿಸುತ್ತಿದ್ದಾರೆ. ಹಾಗೂ ಈ ಚಿತ್ರದಲ್ಲಿ ಜಾಕಿ ಶ್ರಾಫ್ ಮತ್ತು ರಂದೀಪ್ ಹೂಡಾ ಕೂಡ ಇದ್ದಾರೆ. ರಾಧೆ ಸಿನಿಮಾ ಸಲ್ಮಾನ್‌ ಖಾನ್‌ರ ಬಹು ನಿರೀಕ್ಷಿತ ಸಿನಿಮಾವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.