ETV Bharat / sitara

ಸೋಷಿಯಲ್ ಮೀಡಿಯಾ ಮೂಲಕ ಮತ್ತೆ ಚಿಗುರಿದ ರಮ್ಯ-ರಕ್ಷಿತ ಸ್ನೇಹ

ಬಹಳ ವರ್ಷಗಳಿಂದ ಮಾತುಕತೆ ಇಲ್ಲದ ರಮ್ಯ ಹಾಗೂ ರಕ್ಷಿತ ಸ್ನೇಹ ಮತ್ತೆ ಚಿಗುರಿದೆ ಎನ್ನಲಾಗುತ್ತಿದ್ದು ಅಭಿಮಾನಿಗಳು ಈ ಬಗ್ಗೆ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. ರಮ್ಯ ಹಾಕಿದ ಪೋಟೋವೊಂದಕ್ಕೆ ರಕ್ಷಿತ ಲೈಕ್ ಮಾಡಿದ್ದಾರೆ ಎನ್ನಲಾಗಿದೆ.

author img

By

Published : Jul 20, 2020, 9:31 AM IST

Ramya Rakshita friendship started again
ರಮ್ಯ-ರಕ್ಷಿತ ಸ್ನೇಹ

ರಮ್ಯ ಹಾಗೂ ರಕ್ಷಿತ, ಪಾರ್ವತಮ್ಮ ರಾಜ್​ಕುಮಾರ್​ ಅವರು ತಮ್ಮ ಬ್ಯಾನರ್ ಮೂಲಕ ರಾಜ್ಯದ ಜನತೆಗೆ ಪರಿಚಯ ಮಾಡಿಸಿದ ನಟಿಯರು. ಪುನೀತ್​ ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ 'ಅಪ್ಪು'ನಲ್ಲಿ ರಕ್ಷಿತ ಜೋಡಿಯಾಗಿದ್ದರೆ, ಎರಡನೇ ಚಿತ್ರ 'ಅಭಿ'ಯಲ್ಲಿ ಪುನೀತ್​ಗೆ ರಮ್ಯ ಜೋಡಿಯಾಗಿದ್ದರು.

ರಮ್ಯ-ರಕ್ಷಿತ ಒಟ್ಟಿಗೆ ಸೇರಿ 2006 ರಲ್ಲಿ 'ತನನಂ ತನನಂ' ಚಿತ್ರದಲ್ಲಿ ನಟಿಸಿದ್ದರು. ಇದು ಕವಿತಾ ಲಂಕೇಶ್ ನಿರ್ದೇಶನದ ಚಿತ್ರ. ಕ್ರಮೇಣ ರಕ್ಷಿತ, ನಿರ್ದೇಶಕ ಪ್ರೇಮ್ ಅವರನ್ನು ಮದುವೆ ಆಗಿ ಗೃಹಿಣಿ ಆದರು, ರಮ್ಯ ರಾಜಕೀಯ ಪ್ರವೇಶ ಮಾಡಿ ಲೋಕಸಭೆ ಕೂಡಾ ನೋಡಿ ಬಂದರು. ಇಬ್ಬರೂ ಪರಭಾಷೆಗಳಲ್ಲಿ ಕೂಡಾ ಮಿಂಚಿದವರು.

Ramya Rakshita friendship started again
ರಮ್ಯ, ರಕ್ಷಿತ, ಶರ್ಮಿಳಾ ಮಾಂಡ್ರೆ

ಈ ಇಬ್ಬರೂ ನಾಯಕಿಯರ ನಡುವೆ ಬಹಳ ವರ್ಷಗಳಿಂದ ಸಂಪರ್ಕ ಇರಲಿಲ್ಲ. ಆದರೆ ಇದೀಗ ಸೋಷಿಯಲ್ ಮೀಡಿಯಾ ಮುಖಾಂತರ ಇಬ್ಬರ ಸ್ನೇಹ ಮತ್ತೆ ಚಿಗುರಿದೆ. ಕೆಲವು ದಿನಗಳಿಂದ ರಮ್ಯ ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಆ್ಯಕ್ಟಿವ್ ಇದ್ದು ಪೋಟೋಗಳನ್ನು ಅಪ್​ಲೋಡ್ ಮಾಡುತ್ತಿದ್ದಾರೆ. ರಮ್ಯ ಹಾಕಿದ ಪೋಸ್ಟನ್ನು ರಕ್ಷಿತ ಲೈಕ್ ಮಾಡಿದ್ದಾರೆ. ಈ ಮೂಲಕ ಇಬ್ಬರ ಸ್ನೇಹ ಚಿಗುರಿದೆ. ಇದಕ್ಕೆ ಅಭಿಮಾನಿಗಳು ಸಹ ಸಂತೋಷ ವ್ಯಕ್ತಪಡಿಸಿದ್ದಾರೆ.

ರಮ್ಯ-ರಕ್ಷಿತ ಇಬ್ಬರೂ ಸಿನಿಮಾದಲ್ಲಿ ನಟಿಸುತ್ತಿಲ್ಲ. ಆದರೆ ಈಗ ರಮ್ಯ ಮತ್ತೆ ಸ್ಯಾಂಡಲ್​​ವುಡ್​​ಗೆ ವಾಪಸ್ ಬರುವ ತಯಾರಿಯಲ್ಲಿದ್ದಾರೆ. ಇತ್ತ ರಕ್ಷಿತ ತಮ್ಮ ಸಹೋದರ ರಾಣಾ ನಟನೆಯ 'ಏಕ್​ ಲವ್ ಯಾ' ಚಿತ್ರಕ್ಕೆ ಹಣ ಹೂಡುವ ಮೂಲಕ ನಿರ್ಮಾಪಕಿ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.