ವಾಷಿಂಗ್ಟನ್ (ಯುಎಸ್): ವಿಶ್ವ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಮುಂಚೂಣಿಯಲ್ಲಿರುವ 'ಆಸ್ಕರ್ 2021' ಭವ್ಯ ಸಮಾರಂಭಕ್ಕೆ ಲಾಸ್ ಏಂಜಲೀಸ್ ಸಾಕ್ಷಿಯಾಯಿತು.
ಪ್ರಶಸ್ತಿ ಗೆದ್ದ ಸಾಧಕರು ಮತ್ತು ವಿಭಾಗ:
ಕ್ರಿಸ್ಟೋಫರ್ ಹ್ಯಾಂಪ್ಟನ್ ಮತ್ತು ಫ್ಲೋರಿಯನ್ ಝಿಲ್ಲರ್ ಅವರು 'ದಿ ಫಾದರ್' ಎಂಬ ಸಿನಿಮಾಕ್ಕೆ ಉತ್ತಮ ಅಡಾಪ್ಟೆಡ್ ಚಿತ್ರಕಥೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದಾರೆ. ಚಿತ್ರದಲ್ಲಿ ಆಂಥೋನಿ ಹಾಪ್ಕಿನ್ಸ್ ನಾಯಕನಾಗಿ ನಟಿಸಿದ್ದರು. ಇದು ತಂದೆ-ಮಗಳ ಸಂಬಂಧ ಬಿಂಬಿಸುವ ಸಿನಿಮಾ.
ಇನ್ನು ಎಮಿರಾಲ್ಡ್ ಫೆನ್ನೆಲ್ ಅವರು ತಮ್ಮ ಕಾಮಿಡಿ ಸಿನಿಮಾ 'ಪ್ರಾಮಿಸಿಂಗ್ ಯಂಗ್ ವುಮೆನ್'ನಲ್ಲಿ ಉತ್ತಮ ಚಿತ್ರಕಥೆ ಬರೆದಿದ್ದಕ್ಕಾಗಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅತ್ಯಾಚಾರಕ್ಕೆ ಬಲಿಯಾದ ತನ್ನ ಸ್ನೇಹಿತೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸುವ ಮಹಿಳೆಯಾಗಿ ಕ್ಯಾರಿ ಮುಲಿಗನ್ ನಟಿಸಿದ್ದಾರೆ. ಬೊ ಬರ್ನ್ಹ್ಯಾಮ್, ಅಲಿಸನ್ ಬ್ರೀ, ಕ್ಲಾನ್ಸಿ ಬ್ರೌನ್, ಜೆನ್ನಿಫರ್ ಕೂಲಿಡ್ಜ್, ಲಾವೆರ್ನೆ ಕಾಕ್ಸ್ ಮತ್ತು ಕೋನಿ ಬ್ರಿಟನ್ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಕ್ಲೋಯ್ ಝಾವೋ ಅವರು ತಮ್ಮ 'ನೋಮಾಡ್ಲ್ಯಾಂಡ್' ಸಿನಿಮಾಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಈ ಚಿತ್ರದಲ್ಲಿ 60 ವರ್ಷದ ಮಹಿಳೆಯು ಎಲ್ಲವನ್ನೂ ಕಳೆದುಕೊಂಡ ನಂತರ, ಅಮೆರಿಕಾದ ಪಶ್ಚಿಮಕ್ಕೆ ಪ್ರಯಾಣವನ್ನು ಪ್ರಾರಂಭಿಸುತ್ತಾಳೆ. ಬಳಿಕ ವ್ಯಾನ್ನಲ್ಲಿ ತನ್ನ ಜೀವನವನ್ನು ಪ್ರಾರಂಭಿಸುತ್ತಾಳೆ.
ಅತ್ಯುತ್ತಮ ಧ್ವನಿ ಪ್ರಶಸ್ತಿಯು 'ಸೌಂಡ್ ಆಫ್ ಮೆಟಲ್' ಸಿನಿಮಾ ಪಡೆದುಕೊಂಡಿದೆ. ನಿಕೋಲಸ್ ಬೆಕರ್, ಜೈಮ್ ಬಕ್ಷ್ಟ್, ಮಿಶೆಲ್ ಕೌಟೊಲೆಂಕ್, ಕಾರ್ಲೋಸ್ ಕೊರ್ಟೆಸ್ ಮತ್ತು ಫಿಲಿಪ್ ಬ್ಲಾಡ್ ಅವರು ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮೆಟಲ್ ಡ್ರಮ್ ಬಾರಿಸುವ ಸಂಗೀತಗಾರ ತನ್ನ ಶ್ರವಣ ಕಳೆದುಕೊಳ್ಳುತ್ತಾನೆ. ಬಳಿ ಆತ ಜೀವನ ಯಾವ ರೀತಿ ನಡೆಸುತ್ತಾನೆ ಎಂಬುದನ್ನು ತಿಳಿಸುತ್ತದೆ.
- ಉತ್ತಮ ಪೋಷಕ ನಟ ಪ್ರಶಸ್ತಿ - ಡೇನಿಯಲ್ ಕಾಲೂಯ (ಜೂಡಾಸ್ ಆ್ಯಂಡ್ ದಿ ಬ್ಕ್ಯಾಕ್ ಮೆಸ್ಸಿಹ್ ಸಿನಿಮಾ)
- ಉತ್ತಮ ಪೋಷಕ ನಟಿ ಪ್ರಶಸ್ತಿ -ಯೌನ್ ಯುಹ್ ಜಂಗ್ (ಮಿನಾರಿ)
- ಬೆಸ್ಟ್ ಡಾಕ್ಯುಮೆಂಟರಿ ಫೀಚರ್ - ಮೈ ಆಕ್ಟೊಪಸ್ ಟೀಚರ್
- ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್- ಕಾಲೆಟ್
- ಬೆಸ್ಟ್ ಲೈವ್ ಆಕ್ಷನ್ ಶಾರ್ಟ್- ಟು ಡಿಸ್ಟಾಂಟ್ ಸ್ಟ್ರೇಂಜರ್
- ಬೆಸ್ಟ್ ಆ್ಯನಿಮೇಟೆಡ್ ಶಾರ್ಟ್- ಇಫ್ ಅನಿತಿಂಗ್ ಹ್ಯಾಪೆನ್ಸ್ ಐ ಲವ್ ಯೂ
- ಉತ್ತಮ ಮೇಕಪ್-ಕೇಶ ವಿನ್ಯಾಸ - 'ಮ ರೈನಿಸ್ ಬ್ಯಾಕ್ ಬಾಟಮ್' ಸಿನಿಮಾ
- ಉತ್ತಮ ವಸ್ತ್ರ ವಿನ್ಯಾಸ - 'ಮ ರೈನಿಸ್ ಬ್ಯಾಕ್ ಬಾಟಮ್' ಸಿನಿಮಾ
- ಬೆಸ್ಟ್ ವಿಶ್ಯುವಲ್ ಎಫೆಕ್ಟ್ - ಟೆನೆಟ್
- ದಿ ಬೆಸ್ಟ್ ಇಂಟರ್ನ್ಯಾಷನಲ್ ವಿಶೇಷ (ಫೀಚರ್) ಫಿಲ್ಮ್ - 'ಅನದರ್ ರೌಂಡ್'
- ಬೆಸ್ಟ್ ಆ್ಯನಿಮೇಟೆಡ್ - 'ಸೋಲ್'
- ಬೆಸ್ಟ್ ಪ್ರೊಡಕ್ಷನ್ ಡಿಸೈನ್ - ಮ್ಯಾಂಕ್
- ಬೆಸ್ಟ್ ಸಿನಿಮಾಟೊಗ್ರಾಫಿ - ಮ್ಯಾಂಕ್
- ಬೆಸ್ಟ್ ಸಿನಿಮಾ ಎಡಿಟಿಂಗ್ - ಸೌಂಡ್ ಆಫ್ ಮೆಟಲ್
- ಜೀನ್ ಹರ್ಷೋಲ್ಟ್ ಮಾನವೀಯ ಪ್ರಶಸ್ತಿ: ಟೈಲರ್ ಪೆರಿ
- ಬೆಸ್ಟ್ ಒರಿಜಿನಲ್ ಸ್ಕೋರ್ - ಸೋಲ್
ಇನ್ನು ಭಾರತೀಯ ಸಿನಿಮಾ ರಂಗ ಇಲ್ಲಿಯವರೆಗೆ ನಾಲ್ಕು ಬಾರಿ ಆಸ್ಕರ್ ಪ್ರಶಸ್ತಿ ಪಡೆದಿದೆ.