ETV Bharat / sitara

ಮದ್ಯ ಖರೀದಿ ಬಗ್ಗೆ ವ್ಯಂಗ್ಯ ಮಾಡಿದ​ ನಟ ರಣದೀಪ್ ಹೂಡಾ!

ಇದೀಗ ದೇಶಾದ್ಯಂತ ಸಾರಾಯಿ ಅಂಗಡಿಗಳು ತೆರೆದಿರುವ ಕಾರಣ ಹಲವಾರು ರೀತಿಯಲ್ಲಿ ಟ್ರೋಲ್​​​ ಮಾಡಲಾಗುತ್ತಿದೆ. ಬಾಲಿವುಡ್​​ ನಟ ರಣದೀಪ್​ ಹೂಡಾ ಕೂಡ ತಮ್ಮದೊಂದು ಮೆಮೆ​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

author img

By

Published : May 5, 2020, 9:50 PM IST

On re-opening of liquor shops, Randeep turns his Extraction avatar in hilarious meme
ಮೆಮ್​​ ಮೂಲಕ ಮದ್ಯ ಖರೀದಿ ಬಗ್ಗೆ ವ್ಯಂಗ್ಯ ಮಾಡಿದ ಬಾಲಿವುಡ್​​ ನಟ

ಇತ್ತೀಚೆಗೆ ದೇಶಾದ್ಯಂತ ಮದ್ಯದಂಗಡಿಗಳು ತೆರೆಯಲು ಶುರು ಮಾಡಿವೆ. ಈ ಹಿನ್ನೆಲೆಯಲ್ಲಿ ಹಲವಾರು ಜೋಕ್​ಗಳು, ಟ್ರೋಲ್​ಗಳು ಕೂಡ ಆರಂಭವಾಗಿವೆ. ಇದೇ ಹಿನ್ನೆಲೆಯಲ್ಲಿ ಬಾಲಿವುಡ್​​ ನಟ ರಣದೀಪ್​ ಹೂಡಾ ಕೂಡ ತಮ್ಮದೊಂದು ಮೆಮೆ​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಇತ್ತೀಚೆಗೆ ತೆರೆ ಕಂಡ ತಮ್ಮ ಎಕ್ಸ್​​ಟ್ರಾಕ್ಷನ್​ ಸಿನಿಮಾದ ಒಂದು ಚಿತ್ರವನ್ನು ಬಳಸಿಕೊಂಡು ಈ ಮೆಮೆ​​ ಮಾಡಲಾಗಿದೆ. ರಣದೀಪ್​ ಹೂಡಾ ಸೋಷಿಯಲ್​​ ಮಿಡಿಯಾದಲ್ಲಿ ಪೋಸ್ಟ್​​ ಮಾಡಿರುವ ಫೋಟೋದಲ್ಲಿ ತನ್ನ ಎಡಗೈ ಮುರಿದುಕೊಂಡು, ಬಲಗೈಗೆ ಗಾಯಗಳಾಗಿವೆ ಹಾಗೂ ತಮ್ಮ ಮುಖ ಬಾಡಿದೆ.

ಈ ಹೋಲಿಕೆಯನ್ನು ಮದ್ಯದಂಗಡಿಯಿಂದ ಮದ್ಯವನ್ನು ಖರೀದಿ ಮಾಡಿಕೊಂಡು ಹೊರಬಂದ ನಂತರದ ಸಮಯಕ್ಕೆ ಹೋಲಿಕೆ ಮಾಡಲಾಗಿದೆ. ಅಂದ್ರೆ ಮದ್ಯ ಕೊಂಡುಕೊಳ್ಳುವುದು ಈ ವೇಳೆ ತುಂಬಾ ಕಷ್ಟದ ಕೆಲಸ ಎಂದು ವ್ಯಂಗ್ಯ ಮಾಡಿದ್ದಾರೆ.

ಲಾಕ್​ಡೌನ್​ ಸಡಿಲಿಕೆ ಮಾಡಿದ ನಂತ್ರ ಮೊದಲ ಬಾರಿಗೆ ವೈನ್​ ಶಾಪ್​ಗಳು ತೆರೆದಿದ್ದು, ಮದ್ಯ ಪ್ರಿಯರು ಸಾಲುಗಟ್ಟಿ ನಿಂತು ಮದ್ಯ ಖರೀದಿ ಮಾಡಿದ್ದಾರೆ. ಇದು ದೆಹಲಿಯಲ್ಲೂ ಕಾಣಿಸಿಕೊಂಡಿದ್ದು, ಕೆಲವು ಕಡೆ ಗಲಾಟೆಗಳು ಆದ ಕಾರಣ ವೈನ್​ ಶಾಪ್​ಗಳನ್ನು ಮುಚ್ಚಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.