ಕನ್ನಡ ಚಿತ್ರರಂಗದ ದೊಡ್ಮನೆ ಮಗ ಪುನೀತ್ ರಾಜ್ಕುಮಾರ್ ನಿಧನರಾಗಿ ಒಂದೂವರೆ ತಿಂಗಳು ಆಗುತ್ತಿದೆ. ಆದರೆ, ರಾಜರತ್ನನ ಆ ನಗು ಹಾಗೂ ಒಳ್ಳೆಯ ಕೆಲಸಗಳು ಎಂದಿಗೂ ಅಮರ. ಇನ್ನು ಕನ್ನಡ ಚಿತ್ರರಂಗದಲ್ಲಿ ಯಾವುದೇ ಕಾರ್ಯಕ್ರಮ ಆಗಲಿ ಅಲ್ಲಿ ಮೊದಲಿಗೆ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಲಾಗುತ್ತದೆ. ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯ ಸ್ಟಾರ್ಗಳ ಜೊತೆಯೂ ಅಪ್ಪು ಸ್ನೇಹ ಹೊಂದಿದ್ದವರು.
ಹಾಗೆಯೇ ಟಾಲಿವುಡ್ ಯಂಗ್ ಟೈಗರ್ ಜ್ಯೂ.ಎನ್ಟಿಆರ್ ಜೊತೆ ಪುನೀತ್ ರಾಜ್ ಕುಮಾರ್ ಆತ್ಮೀಯ ಸ್ನೇಹ ಹೊಂದಿದ್ದರು. ಅಂತೆಯೇ ಇಂದು ಆರ್ಆರ್ಆರ್ ಚಿತ್ರದ ಪ್ರೆಸ್ ಮೀಟ್ ವೇಳೆ ಗೆಳೆಯನ ನೆನೆದು ಜ್ಯೂ.ಎನ್ಟಿಆರ್ ಭಾವುಕರಾದರು. ಅಪ್ಪು ನಟನೆಯ ಚಕ್ರವ್ಯೂಹ ಚಿತ್ರದ ಗೆಳೆಯಾ ಗೆಳೆಯಾ ಹಾಡನ್ನು ಹಾಡಿದರು. ಇದೇ ವೇಳೆ ಮಾತನಾಡಿ, ಪುನೀತ್ ಇಲ್ಲದ ಕರ್ನಾಟಕ ನನಗೆ ಶೂನ್ಯವಾಗಿ ಕಾಣುತ್ತಿದೆ. ಅವರು ಎಲ್ಲೇ ಇದ್ದರೂ ಅವರ ಆಶೀರ್ವಾದ ನನ್ನ ಮೇಲಿರುತ್ತೆ ಎಂದು ಭಾವುಕರಾದರು.
ನಾನು ಈ ಹಾಡನ್ನು ಪುನೀತ್ಗಾಗಿ ಎಂದಿಗೂ ಹೇಳಿರಲಿಲ್ಲ. ಇದೇ ಮೊದಲು ಮತ್ತು ಇದೇ ಕೊನೆ. ಈ ಹಾಡನ್ನು ಮತ್ತೆ ಹಾಡುವುದಿಲ್ಲ ಎಂದು ಗೆಳೆಯಾ ಗೆಳೆಯಾ ಎಂದು ಹಾಡಿ ಕಣ್ಣಾಲೆಗಳನ್ನು ತೇವ ಮಾಡಿಕೊಂಡರು. ಇನ್ನು ಎನ್ಟಿಆರ್ ಕುಟುಂಬಕ್ಕೂ ಹಾಗೂ ರಾಜ್ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಪುನೀತ್ ಅವರ ಪಾರ್ಥಿವ ಶರೀರದ ದರ್ಶನಕ್ಕೂ ಜ್ಯೂ.ಎನ್ಟಿಆರ್ ಆಗಮಿಸಿ, ಗೌರವನ ನಮನ ಸಲ್ಲಿಸಿದ್ದರು.
(ಇದನ್ನೂ ಓದಿ: 'ಮಾತೃ ಭಾಷೆ'ಯಲ್ಲಿ ಮಾತನಾಡಿದ ಯಂಗ್ ಟೈಗರ್ ಜೂ. ಎನ್ಟಿಆರ್)