ETV Bharat / sitara

ನಟ ವಿಶಾಲ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್​​..!

ತಮಿಳು ನಟ ಹಾಗೂ ರಾಕಿಂಗ್ ಸ್ಟಾರ್ ಯಶ್ ಆತ್ಮೀಯ ಸ್ನೇಹಿತ ವಿಶಾಲ್​ಗೆ ಕಾನೂನಿನ ಕಂಟಕ ಎದುರಾಗಿದೆ. ಈ ನಟನ ವಿರುದ್ಧ ಜಾಮೀನು ರಹಿತ ಅರೆಸ್ಟ್​ ವಾರೆಂಟ್​ ಜಾರಿಯಾಗಿದೆ.

author img

By

Published : Aug 3, 2019, 1:34 PM IST

ಚಿತ್ರಕೃಪೆ: ಇನ್​ಸ್ಟಾಗ್ರಾಂ

ಕಾಲಿವುಡ್ ಸೂಪರ್ ಸ್ಟಾರ್ ವಿಶಾಲ್​ ಒಡೆತನದ ಪ್ರೊಡಕ್ಷನ್ ಹೌಸ್ 'ವಿಶಾಲ್ ಫಿಲ್ಮ್​ ಫ್ಯಾಕ್ಟರಿ' ವಿರುದ್ಧ ತೆರೆಗೆ ಇಲಾಖೆ ಕಾನೂನು ಸಮರ ಸಾರಿದೆ. ಈ ಸಂಸ್ಥೆಯ ಉದ್ಯೋಗಿಗಳ ಸಂಬಳದಿಂದ ಕಡಿತಗೊಳಿಸಿರುವ ಟಿಡಿಎಸ್​​ ಹಣವನ್ನು ಕಳೆದ ಐದು ವರ್ಷದಿಂದ ಸರ್ಕಾರಕ್ಕೆ ಪಾವತಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಆದಾಯ ತೆರೆಗೆ ಇಲಾಖೆ ಚೆನ್ನೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್- IIನಲ್ಲಿ ವಿಶಾಲ್ ವಿರುದ್ಧ ಧಾವೆ ಹೂಡಿತ್ತು. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್​ ನೀಡಿದ ನೋಟಿಸ್​​ಗೆ ವಿಶಾಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ವಿಚಾರಣೆಗೂ ಹಾಜರಾಗಿರಲಿಲ್ಲ.

ವಿಚಾರಣೆಗೆ ಪದೇ ಪದೆ ಗೈರು ಆಗುತ್ತಿರುವ ವಿಶಾಲ್ ವಿರುದ್ಧ ಗರಂ ಆಗಿರುವ ನ್ಯಾಯಾಧೀಶೆ ಎಸ್​.ಮಲರ್​ಮತಿ ಜಾಮೀನು ರಹಿತ ಬಂಧನದ ವಾರೆಂಟ್​ ಹೊರಡಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.