ETV Bharat / sitara

ಪ್ರಣೀತಾ ಸುಭಾಷ್ ಮದುವೆ ಶುಭಾಶಯ ಹೇಳಿದ ರಮ್ಯಾಗೆ ಪ್ರಶ್ನೆಗಳ ಸುರಿಮಳೆ

ಕೊರೊನಾ ಹಾಗೂ ಲಾಕ್​ಡೌನ್​ ಇರುವುದರಿಂದ ಸಿಂಪಲ್​ ಆಗಿ ಮದುವೆ ಆಗಿರುವುದಾಗಿ ಅವರು ಹೇಳಿದ್ದಾರೆ. ಆ ಪೋಸ್ಟ್​ಗೆ ಪ್ರತಿಕ್ರಿಯಿಸಿದ ರಮ್ಯಾ ಅವರು ಅಭಿನಂದನೆ ತಿಳಿಸಿದ್ದಾರೆ. ಕಂಗ್ರಾಜುಲೇಷನ್ಸ್​ ಪ್ರಣೀತಾ ಅಂತ ರಮ್ಯಾ ವಿಶ್ ಮಾಡಿದ್ದಾರೆ. ರಮ್ಯಾ ಮಾಡಿದ ಕಮೆಂಟ್​ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ..

author img

By

Published : Jun 1, 2021, 6:37 PM IST

 Netizens ask ramya about her marriage
Netizens ask ramya about her marriage

ಕನ್ನಡ ಹಾಗೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ಪ್ರಣೀತಾ ಸುಭಾಷ್ ಮದುವೆ, ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಉದ್ಯಮಿ ನಿತಿನ್​ ರಾಜು ಎಂಬುವರ ಜೊತೆ ಪ್ರಣೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಣೀತಾ ಮದುವೆಗೆ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಶುಭಾಶಯ ಹೇಳಿದ್ದಾರೆ. ಆದರೆ, ಪ್ರಣೀತಾ ಯಾರಿಗೂ ಗೊತ್ತಾಗದ ಹಾಗೆ ಗುಟ್ಟಾಗಿ ಮದುವೆ ಆದ ಬಳಿಕ, ಕೆಲವು ಫೋಟೋಗಳು ವೈರಲ್​ ಆಗಿವೆ. ಆಗ ಪ್ರಣಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಉತ್ತರ ನೀಡಿದ್ದಾರೆ.

ಕೊರೊನಾ ಹಾಗೂ ಲಾಕ್​ಡೌನ್​ ಇರುವುದರಿಂದ ಸಿಂಪಲ್​ ಆಗಿ ಮದುವೆ ಆಗಿರುವುದಾಗಿ ಅವರು ಹೇಳಿದ್ದಾರೆ. ಆ ಪೋಸ್ಟ್​ಗೆ ಪ್ರತಿಕ್ರಿಯಿಸಿದ ರಮ್ಯಾ ಅವರು ಅಭಿನಂದನೆ ತಿಳಿಸಿದ್ದಾರೆ. ಕಂಗ್ರಾಜುಲೇಷನ್ಸ್​ ಪ್ರಣೀತಾ ಅಂತ ರಮ್ಯಾ ವಿಶ್ ಮಾಡಿದ್ದಾರೆ. ರಮ್ಯಾ ಮಾಡಿದ ಕಮೆಂಟ್​ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮ ಮದುವೆ ಯಾವಾಗ ಎಂದು ಸ್ಯಾಂಡಲ್​ವುಡ್​ ಕ್ವೀನ್​ಗೆ ಅಭಿಮಾನಿಗಳು ಪ್ರಶ್ನೆ ಎಸೆದಿದ್ದಾರೆ. ನಿಮಗೆ ವಯಸ್ಸು ಹೆಚ್ಚುತ್ತಿದೆ. ಬೇಗ ಮದುವೆ ಆಗಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಲವರು, ಅದು ಅವರ ಜೀವನ, ಅವರ ಆಯ್ಕೆ. ನೀವು ಸುಮ್ಮನಿರಿ ಎಂದು ರಮ್ಯಾ ಪರವಾಗಿ ಕಮೆಂಟ್​ ಮಾಡಿದ್ದಾರೆ.

ಯಾರು ಏನೇ ಹೇಳಿದರೂ ರಮ್ಯಾ ಮಾತ್ರ ಮದುವೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.