ETV Bharat / sitara

ಮರ್ದಿನಿ ಚಿತ್ರದ ಮೂಲಕ ಚಂದನವನಕ್ಕೆ ಹೊಸಬರ ಎಂಟ್ರಿ

ಇದೊಂದು ಹೀರೋಯಿನ್ ಓರಿಯೆಂಟೆಡ್​​ ಕಥೆ ಆಗಿದ್ದು, ಮಾಡೆಲಿಂಗ್​​ ಕ್ಷೇತ್ರದಲ್ಲಿ ಮಿಂಚಿದ ರಿತನ್ಯ ಗೌಡ ಈ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ‌ರಾಜಕುಮಾರ್ ಸಂತೋಷಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಅಕ್ಷಯ್ ಈ ಚಿತ್ರದ ಮೂಲಕ ‌ನಾಯಕ ನಟನಾಗಿ‌ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

mardinin cinema shooting is going well
ಮರ್ದಿನಿ ಚಿತ್ರದ ಮೂಲಕ ಚಂದನವನಕ್ಕೆ ಹೊಸಬರ ಎಂಟ್ರಿ
author img

By

Published : Jan 23, 2021, 2:17 PM IST

ಮರ್ದಿನಿ ಎಂಬ ಕ್ಯಾಚೀ ಟೈಟಲ್ ಇಟ್ಟುಕೊಂಡು ಹೊಸಬರ ಟೀಮ್ ಒಂದು ಗಾಂಧಿನಗಕ್ಕೆ ಎಂಟ್ರಿ ಕೊಟ್ಟಿದೆ. ಇದೊಂದು ನಾಯಕಿ ಓರಿಯೆಂಟೆಡ್​​ ಕಥೆ ಆಗಿದ್ದು, ಮಾಡೆಲಿಂಗ್​​ ಕ್ಷೇತ್ರದಲ್ಲಿ ಮಿಂಚಿದ ರಿತನ್ಯ ಗೌಡ ಈ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ.

rithanya gowda
ರಿತನ್ಯ ಗೌಡ

ಹೋಟೆಲ್ ಮ್ಯಾನೆಜ್‌ಮೆಂಟ್​ನಲ್ಲಿ ಗೋಲ್ಡ್ ಮೆಡಲ್, ಕರಾಟೆಯಲ್ಲಿ‌ ಬ್ಲ್ಯಾಕ್ ‌ಬೆಲ್ಟ್ ಹಾಗೂ ಗೋಲ್ಡ್ ಮೆಡಲ್ ಪಡೆದಿರುವ ಅಕ್ಷಯ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ‌ರಾಜಕುಮಾರ್ ಸಂತೋಷಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಅಕ್ಷಯ್ ಈ ಚಿತ್ರದ ಮೂಲಕ ‌ನಾಯಕ ನಟನಾಗಿ‌ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಅಕ್ಷಯ್ ಅವರೇ ಚಿತ್ರಕಥೆ ಬರೆದಿದ್ದಾರೆ. ಹಿಂದೆ ದೇವರಂತ ಮನುಷ್ಯ ಚಿತ್ರವನ್ನು ನಿರ್ದೇಶಿಸಿದ್ದ ಕಿರಣ್‌ ಕುಮಾರ್ ವಿ‌ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಸ್ಪೆನ್ಸ್ ಕಮ್ ಥ್ರಿಲ್ಲರ್ ಜೊತೆಗೆ ಆ್ಯಕ್ಷನ್ ಧಮಾಕಾ ಇರುವ ಈ ಚಿತ್ರದಲ್ಲಿ, ಶ್ವಾನವೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ.

akshay
ಅಕ್ಷಯ್

ಅಕ್ಷಯ್, ರಿತನ್ಯ ಗೌಡ ಅಲ್ಲದೇ ಮನೋಹರ್, ಭಾಗ್ಯಲಕ್ಷ್ಮೀ ಗೌಡ, ಮೈಸೂರು ಮಾಲತಿ, ಮಧು, ಸಂತೋಷ್ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಹಿತನ್ ಹಾಸನ್ ಸಂಗೀತ ನೀಡುತ್ತಿದ್ದಾರೆ. ಶಿವಸಾಗರ್ ಛಾಯಾಗ್ರಹಣ, ಎಂ.ಎನ್.ವಿಶ್ವ ಸಂಕಲನ, ಪ್ರೇಂ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಹಸನಿರ್ದೇಶನವಿರುವ ಈ ಚಿತ್ರಕ್ಕೆ ಗಜೇಂದ್ರ ಸಂಭಾಷಣೆ ಬರೆದಿದ್ದಾರೆ.

ಸದ್ದಿಲ್ಲದೇ ಮರ್ದಿನಿ ಚಿತ್ರತಂಡವು ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ ಹತ್ತು ದಿನಗಳ ಚಿತ್ರೀಕರಣ ಮುಗಿಸಿದೆ. ಇನ್ನೂ ಇಪ್ಪತ್ತೈದು ದಿನಗಳ ಚಿತ್ರೀಕರಣ ಬಾಕಿಯಿದ್ದು, ಮಾರ್ಚ್​ನಲ್ಲಿ ಉಳಿದ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾಗೆ ಕಿಚ್ಚ ಸುದೀಪ್‌ ಅವರ ಆಶೀರ್ವಾದವಿದ್ದು,‌ ಅಂಕಿತ ಫಿಲಂಸ್ ಲಾಂಛನದಲ್ಲಿ ಭಾರತಿ ಜಗದೀಶ್, ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: ಕೊನೆಗೂ ಅನೌನ್ಸ್​​ ಆಯ್ತು ಬಿಗ್​ ಬಾಸ್ ಆರಂಭದ ದಿನ​​!

ಈ ಹೊಸಬರ ಚಿತ್ರತಂಡಕ್ಕೆ ಕಿಚ್ಚ ಸುದೀಪ್​​ ಶುಭಾಶಯ ಕೋರಿ ಆಶೀರ್ವಾದ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.