ETV Bharat / sitara

ಶಾನೆ ಟಾಪಾಗವಳೆ.. ಬೆಣ್ಣೆ ನಗರಿಯ ಬೆಡಗಿ ಅದಿತಿ ಪ್ರಭುದೇವ ರೂಮ್​ ಹೇಗಿದೆ ಗೊತ್ತಾ? - Aditi Prabhudeva

ನಟಿ ಅದಿತಿ ಪ್ರಭುದೇವ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು. ಆರಂಭದಲ್ಲಿ ಕಿರುತೆರೆಯಲ್ಲಿ ಮಿಂಚಿ, ನಂತರ ಹಿರಿತೆರೆಗೆ ಕಾಲಿಟ್ಟರು. ಅವರ ಕೈಯಲ್ಲಿ ಸದ್ಯ ಸಾಲುಸಾಲು ಸಿನಿಮಾಗಳಿವೆ. ತಮ್ಮ ಬ್ಯುಸಿ ಕೆಲಸದ ಮಧ್ಯೆಯೂ ಅದಿತಿ ಅಭಿಮಾನಿಗಳಿಗೆ ತಮ್ಮ ರೂಮಿನ ಪರಿಚಯ ಮಾಡಿಕೊಟ್ಟಿದ್ದಾರೆ.

ಅದಿತಿ ಪ್ರಭುದೇವ ಹಂಚಿಕೊಂಡ ವಿಡಿಯೋ
kannada actor Aditi Prabhudeva bed Room
author img

By

Published : Sep 5, 2021, 10:20 AM IST

ಕನ್ನಡ ಚಿತ್ರರಂಗದಲ್ಲಿ ಕಿರುತೆರೆ ಮೂಲಕ ಹಿರಿತೆರೆಗೆ ಬಂದು ಸ್ಟಾರ್ ನಟ, ನಟಿಯಾರಾದ ಅನೇಕ ಸೆಲೆಬ್ರೆಟಿಗಳಿದ್ದಾರೆ. ಆದರಲ್ಲಿ ನಮ್ಮ ದಾವಣಗೆರೆಯ ಬೆಡಗಿ ಅದಿತಿ ಪ್ರಭುದೇವ ಕೂಡ ಒಬ್ಬರು. ಕಿರುತೆರೆಯಿಂದ ನಟನೆ ಶುರು ಮಾಡಿದ ಅದಿತಿ, ಸದ್ಯಕ್ಕೆ ಸ್ಯಾಂಡಲ್​ವುಡ್ ನಲ್ಲಿ ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ.

'ತೋತಾಪುರಿ',' ಓಲ್ಡ್ ಮಾಂಕ್', 'ಒಂಬತ್ತನೇ ದಿಕ್ಕು', 'ತ್ರಿಬಲ್ ರೈಡಿಂಗ್', 'ಅದೊಂದಿತ್ತು ಕಾಲ' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅದಿತಿ ಪ್ರಭುದೇವ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್​ ಆಗಿದ್ದಾರೆ.

ಕೆಲ ದಿನಗಳ ಹಿಂದೆ ಅದಿತಿ ಪ್ರಭುದೇವ ತಮ್ಮ ಹುಟ್ಟೂರಾದ ದಾವಣಗೆರೆ ಮನೆಯಲ್ಲಿ ಹಸುಗಳಿಗೆ ಮೇವು ಹಾಕಿ, ಹಾಲು ಕರೆದು, ಸಗಣಿ ಬಾಚಿ, ಹೊಲದಲ್ಲಿ ತಾವೇ ಟ್ರ್ಯಾಕ್ಟರ್ ಏರಿ ಬಿತ್ತನೆ ಮಾಡಿದ್ದ ವಿಡಿಯೋ ಭಾರೀ ಸದ್ದು ಮಾಡಿತ್ತು. ಇದೀಗ ಅದಿತಿ ತಾವು ಇರುವ ಮನೆಯ ರೂಮ್ ಹೇಗಿದೆ ಅನ್ನೋದನ್ನ ಅಭಿಮಾನಿಗಳಿಗೆ ತಿಳಿಸಿಕೊಟ್ಟಿದ್ದಾರೆ.

ಅದಿತಿ ಪ್ರಭುದೇವ ಹಂಚಿಕೊಂಡ ವಿಡಿಯೋ

ಅದಿತಿ ಶೇರ್​ ಮಾಡಿರುವ ಈ ವಿಡಿಯೋದಲ್ಲಿ ಮೊದಲಿಗೆ ರೂಮ್​ ಒಳಗೆ ಎಂಟ್ರಿ ಕೊಟ್ಟಾಗ ಕಾಣುವುದು ಚೆಂದದ ಗೊಂಬೆ. ಬಳಿಕ ಮುದ್ದಿನ ನಾಯಿಗಳ ಜೊತೆ ಇರುವ ಫೋಟೋ, ಗಡಿಯಾರ, ಮೇಣದ ಬತ್ತಿ ಹಾಗು ಹಾಡುಗಳನ್ನ ಕೇಳಲು ಬ್ಲ್ಯೂ ಟೂತ್ ಜೊತೆಗೆ ಮುಖಕ್ಕೆ ಬಳಸುವ ಮೇಕ್​ಅಪ್​ ಸಾಮಗ್ರಿಗಳನ್ನು ನಾವು ನೋಡಬಹುದು.

ಸಿನಿಮಾ ಪ್ರಚಾರ, ಸುದ್ದಿಗೋಷ್ಟಿ ಹಾಗು ಖಾಸಗಿ ಕಾರ್ಯಕ್ರಮಗಳಲ್ಲಿ ವಿಭಿನ್ನ ಉಡುಪುಗಳಿಂದ ಗಮನ ಸೆಳೆಯುವ ಅದಿತಿ ಪ್ರಭುದೇವ, ತಮ್ಮ ರೂಮ್​ನಲ್ಲಿ ಯಾವೆಲ್ಲಾ ಬಗೆಯ ಬಟ್ಟೆಗಳನ್ನ ಹೊಂದಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಎಷ್ಟೇ ಒತ್ತಡ ಇದ್ರೂ ಕೂಡ ತಾವು ರಿಲ್ಯಾಕ್ಸ್ ಮಾಡುವ ಜಾಗ ಅಂದ್ರೆ ರೂಮ್ ಅಂತಾ ತಮ್ಮ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ಕೃಷಿ ಕುಟುಂಬದಿಂದ ಬಂದ ಅದಿತಿ ಪ್ರಭುದೇವ, ಈ ಚೆಂದದ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಜೊತೆಗೆ ಪ್ರಪಂಚದಲ್ಲಿ ಮನೆ ಕಟ್ಟುವ ಪ್ರತಿಯೊಬ್ಬ ಕಟ್ಟಡ ಕಾರ್ಮಿಕರಿಗೂ ಈ ವಿಡಿಯೋ ಅರ್ಪಣೆ ಮಾಡಿದ್ದಾರೆ. ಯಾಕಂದ್ರೆ, ಚಿಕ್ಕದಾಗಿರಬಹುದು ಅಥವಾ ದೊಡ್ಡದಾಗಿರಬಹದು, ನಮ್ಮದೇ ಆದ ಪುಟ್ಟ ಮನೆ ಹೊಂದಬೇಕು ಎಂಬ ಕನಸು ಎಲ್ಲರಿಗೂ ಇರುತ್ತದೆ. ಈ ಕನಸನ್ನು ಈಡೇರಿಸಲು ಕಟ್ಟಡ ಕಾರ್ಮಿಕರು ಪ್ರೀತಿಯಿಂದ ಕೆಲಸ ಮಾಡ್ತಾರೆ, ಅಂಥವರಿಗೆ ಈ ವಿಡಿಯೋವನ್ನ ಅರ್ಪಣೆ ಮಾಡುತ್ತೀನಿ ಅಂತಾ ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.