ETV Bharat / sitara

'ನಿಖಿಲ್ ಎಲ್ಲಿದಿಯಪ್ಪ' ಹೆಸರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು: ಸಿನಿಮಾ ಮಾಡಲು ಮುಂದಾದ ನಿರ್ಮಾಪಕರು

'ನಿಖಿಲ್ ಎಲ್ಲಿದಿಯಪ್ಪ' ಎಂಬ ಹೆಸರಿನಲ್ಲಿ ಸಿನಿಮಾ ಮಾಡುವುದಾಗಿ ಕೆಲವು ನಿರ್ಮಾಪಕರು ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. ಆದರೆ ಚುನಾವಣೆ ಮುಗಿದ ನಂತರ ಈ ಬಗ್ಗೆ ಚರ್ಚಿಸುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಹೇಳಿದ್ದಾರೆ.

author img

By

Published : Apr 8, 2019, 6:14 PM IST

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ

ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ ಅದರಲ್ಲೂ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಫರ್ಧಿಸುತ್ತಿದ್ದಾರೆ ಎಂದು ತಿಳಿದಾಗಿನಿಂದ ಚುನಾವಣಾ ಕಣ ಸಾಕಷ್ಟು ರಂಗೇರಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ

ಇನ್ನು ನಿಖಿಲ್ 'ಜಾಗ್ವಾರ್' ಸಿನಿಮಾ ಆಡಿಯೋ ಬಿಡುಗಡೆಯ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಯ್ತು. ಅಂದಿನಿಂದ 'ನಿಖಿಲ್​​​ ಎಲ್ಲಿದಿಯಪ್ಪ' ಎಂಬ ಪದ ಟ್ರೋಲಿಗರ ಬಾಯಿಗೆ ಆಹಾರವಾಯ್ತು. ಈಗ ಪುಟ್ಟ ಮಗುವಿನ ಬಾಯಲ್ಲೂ ಈ ಪದ ನಲಿದಾಡುತ್ತಿದೆ. ಇನ್ನು ಇದೇ ಹೆಸರಿನಲ್ಲಿ ಸಿನಿಮಾ ಮಾಡ್ತೀವಿ ಅಂತ ಕೆಲವು ನಿರ್ಮಾಪಕರು ಫಿಲ್ಮ್ ಚೇಂಬರ್ ಮೊರೆ ಹೋಗಿದ್ದಾರೆ. ಇಷ್ಟೇ ಅಲ್ಲ, ಜೋಡೆತ್ತು, ಕಳ್ಳೆತ್ತು, ಸುಮಲತಾ, ಮಂಡ್ಯ ಹೆಣ್ಣು ಎಂಬ ಹೆಸರಿಗೂ ಡಿಮ್ಯಾಂಡ್ ಬಂದಿದೆ​​​. ಈ ಹೆಸರಿನ ಸಿನಿಮಾ ಮಾಡಲು ಟೈಟಲ್ ರಿಜಿಸ್ಟರ್ ಮಾಡಲು ನಿರ್ಮಾಪಕರು ಫಿಲ್ಮ್ ಚೇಂಬರ್​​​ನಲ್ಲಿ ಮನವಿ ಮಾಡಿದ್ದಾರೆ.

ipl nikhil
ಐಪಿಎಲ್ ಮ್ಯಾಚ್​​ನಲ್ಲಿ 'ನಿಖಿಲ್ ಎಲ್ಲಿದಿಯಪ್ಪ' ಪೋಸ್ಟರ್​​​​​

ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಇದನ್ನು ನಿರಾಕರಿಸಿದ್ದಾರೆ. ಇದು ಚುನಾವಣೆಗೆ ಸಂಬಂಧಿಸಿದ ವಿಚಾರವಾಗಿರುವುದಿಂದ ಸದ್ಯಕ್ಕೆ ಚುನಾವಣೆ ಮುಗಿಯುವವರೆಗೂ ಈ ಬಗ್ಗೆ ಮಾತನಾಡುವುದಿಲ್ಲ. ನಂತರ ಕಥೆ ಕೇಳಿ ಈ ಟೈಟಲ್ ಕೊಡುವುದೋ ಬೇಡವೋ ಎಂಬುದನ್ನು ಕಾರ್ಯಕಾರಿ ಸಭೆ ಕರೆದು ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಚಿನ್ನೇಗೌಡ ಈಟಿವಿ ಭಾರತ್​​ಗೆ ತಿಳಿಸಿದ್ದಾರೆ.

Intro:ಲೋಕಸಭಾ ಚುನಾವಣೆ ಅರಂಭಕ್ಕೂ ಮುನ್ನವೇ ಮಂಡ್ಯದಲ್ಲಿ ಚುನಾವಣಾ ಕಾವು ರಂಗೇರಿತ್ತು. ಇನ್ನೂ ಚುನಾವಣೆ ಇಂಡಿಯಾಗ ಇಲ್ಲ ಮಂಡ್ಯಗಾ ನಡಿತಿರೋದು ಅನ್ನುವಷ್ಟು ಮಟ್ಟಕ್ಕೆ ಮಂಡ್ಯ ಆಖಾಡ ರಂಗೇರಿತ್ತು.ಇನ್ನೂ ಸುಮಲತಾ ಅಂಬರೀಶ್ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಗೋತಾಗಿದ್ದೆ ತಡ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ ತೋಡಗಿದವು.ಅದ್ರೆ ಟ್ರೋಲಿಗರು ಅವಿಡಿಯೋಗಳನ್ನು ಟ್ರೋಲ್ ಮಾಡೊಕೆ ಶುರು ಮಾಡಿದ್ರು.ಆ ಟ್ರೋಲ್ ಗಳಲ್ಲಿ ಸಖತ್ ಫೇಮಸ್ ಆದ ಡೈಲಾಗ್ ಅಂದ್ರೆ " ನಿಖಿಲ್ ಎಲ್ಲಿದ್ಯಪ್ಪ" .

Body:ಎಸ್ ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ವೇಳೆ ಕುಮಾರಸ್ವಾಮಿ ಸ್ಟೇಜ್ ಮೇಲೆ ನಿಖಿಲ್ ನ‌ಅಹ್ವಾನಿಸಲು ನಿಖಿಲ್ ಎಲ್ಲಿದ್ಯಪ್ಪ ಎಂದು ಕರೆದಿದ್ರು .ಈಗ ಈ ಡೈಲಾಗ್ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಟ್ರೋಲ್ ಆಗ್ತಿದ್ದು ಸಖತ್ ಸೌಂಡ್ ಮಾಡ್ತಿದ್ರೆ. ಅಲ್ಲದೆ ಈಗ" ನಿಖಿಲ್ ಎಲ್ಲಿದ್ಯಪ್ಪ " ಎಂಬ ಟೈಟಲ್ ಕೊಡಿ ಸಿನಿಮಾ ಮಾಡ್ತಿವಿ ನಾವು ಎಂದು ಕೆಲವು ನಿರ್ಮಾಪಕರು ಫಿಲ್ಮ್ ಚೇಂಬರ್ ಮೊರೆಹೊಗಿದ್ದಾರೆ.ಅಲ್ಲದೆ ಸುಮಲತಾ ಪರ ಪ್ರಚಾರ ಮಾಡಲು ಆರಂಭಿಸಿದ ದಿನ ದರ್ಶನ್ ನಾನು ಮತ್ತುವಯಶ್ ಜೋಡೆತ್ತು ಎಂದು ಹೇಳಿದ್ರು.ಇನ್ನೂ ಇದಕ್ಕೆ ಖಾರವಾಗೇ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೊಡೆತ್ತಲ್ಲ ಕಳೆತ್ತು ಎಂದು ಹೇಳಿದ್ರು .ಈಗ ಜೊಡೆತ್ತು.ಹಾಗೂ ಕಳ್ಳೆತ್ತು.ಸುಮಲತಾ ಹಾಗೂ ಮಂಂಡ್ಯ ಹೆಣ್ಣು ಎಂಬ ಟೈಟಲ್ ಗೂ ಭಾರಿ ಡಿಮ್ಯಾಂಡ್ ಬಂದಿದ್ದು‌. ನಿರ್ಮಾಪಕರುಗಳು ಈ ಟೈಟಲ್ ಗಳನ್ನು ಕೇಳಿಕೊಂಡು ಚೇಂಬರ್ ಅಲ್ಲಿ ಮನವಿ ಸಲ್ಲಿಸಿದ್ದಾರೆ.

Conclusion:ಅದರೆ ಈ ಟೈಟಲ್ ಅನ್ನು ಸದ್ಯಕ್ಕೆ ಕೊಡಲು ಸಾಧ್ಯವಿಲ್ಲ ಎಂದು ಚೇಂಬರ್ ನ ಅಧ್ಯಕ್ಷರಾದ ಚಿನ್ನೇಗೌಡ್ರು ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.ಎಸ್ ಈ ಟೈಟಲ್ ವಿಚಾರವಾಗಿ ಈ ಟಿವಿ ಭಾರತ್ ಜೊತೆ ಮಾತನಾಡಿದ ಚಿನ್ನೇಗೌಡ್ರು.ಸದ್ಯಕ್ಕೆ ನಾವು ಈ ಟೈಟಲ್ ಕೊಡೋದಿಲ್ಲ.ಯಾಕಂದ್ರೆ.ನಿಖಿಲ್ ಎಂಬ ಹೆಸರು ಉಲ್ಲೇಕವಾಗಿದೆ‌.ಅಲ್ಲದೆ ಮಂಡ್ಯದಲ್ಲಿ ನಿಖಿಲ್ ಎಮ್ ಪಿ ಚುನಾವಣೆಗೆ ಸ್ಪರಧಿಸಿದ್ದಾರೆ ಈಗಾಗಿ ಮೇ ೨೩ ನಂತ್ರ ಬನ್ನಿ ಎಂದು ನಿರ್ಮಾಪಕರಿಗೆ ತಿಳಿಸಿರುವುದಾಗಿ ಚಿನ್ನೆಗೌಡ್ರು ಹೇಳಿದ್ರು.ಅಲ್ಲದೆ ಈ‌ ಟೈಟಲ್ ಗಳ ವಿಚಾರವಾಗಿ ಕಾರ್ಯಕಾರಿ ಸಮಿತಿ ಸಭೆ ಕರೆದು ಚರ್ಚಿಸಿ ಈ ಟೈಟಲ್ ಗಳನ್ನು ಕೊಡುವುದರಿಂದ ಎನೂ ತೊಂದರೆ ಇಲ್ಲ ಅಂದ್ರೆ ಮಾತ್ರ ಕೊಡುತ್ತೇವೆ.ಅಲ್ಲದೆ ಆ‌ಟೈಟಲ್ ಗಳಿಗೆ ಪೂರಕವಾದ ಕಥೆ ಇದ್ರೆ ಮಾತ್ರ ಆಟೈಟಲ್ ಗಳನ್ನು ಕೊಡುತ್ತೇವೆ ಎಂದು ಚಿನ್ನೇ ಗೌಡ್ರು ತಿಳಿಸಿದ್ರು.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.