ETV Bharat / sitara

ಜೂನ್​ 29 ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಈ ಬಾರಿ ಅಧ್ಯಕ್ಷ ಪಟ್ಟ ಯಾರಿಗೆ..?

ಇದೇ ತಿಂಗಳ 29 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಾರ್ಷಿಕ ಚುನಾವಣೆ ನಡೆಯಲಿದೆ. ಕಳೆದ ವರ್ಷ ಎಸ್​.ಎ. ಚಿನ್ನೇಗೌಡರು ವಿತರಕ (ಡಿಸ್ಟ್ರಿಬ್ಯೂಟರ್​​) ವಲಯದಿಂದ ಆಯ್ಕೆಯಾಗಿದ್ದರು. ಇದೀಗ ಅವರ ಅಧಿಕಾರಾವಧಿ ಪೂರ್ಣಗೊಂಡಿದೆ.

author img

By

Published : Jun 20, 2019, 11:48 AM IST

ಚಲನಚಿತ್ರ ವಾಣಿಜ್ಯ ಮಂಡಳಿ

ಈ ಬಾರಿ ಪ್ರದರ್ಶಕ ವಲಯದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ. ನಿನ್ನೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿತ್ತು. ಈ ಬಾರಿ ಹಿರಿಯ ಪ್ರದರ್ಶಕ ಜೈ ರಾಜ್ ಅವರ ಹೆಸರಿನೊಂದಿಗೆ ಪ್ರದರ್ಶಕ, ನಿರ್ಮಾಪಕ, ನಟ, ರಾಕ್​​ಲೈನ್​​​ ವೆಂಕಟೇಶ್ ಹೆಸರು ಕೂಡಾ ಅಧ್ಯಕ್ಷ ಗಾದಿಗೆ ಕೇಳಿ ಬರುತ್ತಿದೆ.

jayraj
ಜೈರಾಜ್

ಆದರೆ, ಇಲ್ಲೊಂದು ಪ್ರಮುಖ ವಿಚಾರವಿದೆ. ರಾಕ್​​​​​​​​​​​​​​​​​​​​​​​ಲೈನ್ ವೆಂಕಟೇಶ್ ಮುಂದಿನ ದಿನಗಳಲ್ಲಿ ನಿರ್ಮಾಪಕರ ವಲಯದಿಂದ ಅಧ್ಯಕ್ಷ ಆಗಿ ಆಯ್ಕೆ ಆಗಬಹುದು. ಅವರಿಗೆ ಈಗ ಸಾಕಷ್ಟು ಕೆಲಸ ಇವೆ. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಉಸ್ತುವಾರಿ ಅವರ ಮೇಲಿದೆ. ದೊಡ್ಡ ಸಿನಿಮಾಗಳ ನಿರ್ಮಾಣ ಸಹ ಮಾಡುತ್ತಿದ್ದಾರೆ. ಇದರೊಂದಿಗೆ ರಾಕ್​​​​​​​​​​ಲೈನ್ ಮಾಲ್ ಕೂಡಾ ನಡೆಸುತ್ತಿದ್ದಾರೆ. ಆದ್ದರಿಂದ ಪ್ರದರ್ಶಕ ವಲಯದಿಂದ ಅವರು ಬರುವುದು ಸೂಕ್ತ ಅಲ್ಲ ಎಂಬ ಮಾತು ಕೇಳಿಬರುತ್ತಿದೆ.

ಹೆಚ್ಚಿನ ಕಲಾವಿದರು ಜೈರಾಜ್ ಪರವಾಗಿದ್ದಾರೆ. ಜೈರಾಜ್ ಅಲಿಯಾಸ್ ಗುಬ್ಬಿ ಜಯರಾಜ್ ತುಮಕೂರಿನ ವ್ಯಕ್ತಿ. ಇವರು ಹಿರಿಯ ಪ್ರದರ್ಶಕರು. ಹಿರಿಯರು ಅನ್ನುವುದರ ಜೊತೆ ಕಾನೂನಿನ ಜ್ಞಾನ ಕೂಡಾ ಅವರಿಗಿದೆ. ಹಾಗಾಗಿ ವಾಣಿಜ್ಯ ಮಂಡಳಿ ವ್ಯಾಜ್ಯ ಮಂಡಳಿ ಆಗುವುದನ್ನು ತಡೆಗಟ್ಟುವ ಶಕ್ತಿ ಅವರಿಗಿದೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಜೂನ್ 25 ರಂದು ನಾಮಿನೇಶನ್ ವಾಪಸ್​​​​​​​​​​​​​​​​​​​​​ ಪಡೆಯುವ ದಿನ. ಒಂದು ವೇಳೆ ಯಾರಾದರೂ ನಾಮಿನೇಷನ್ ವಾಪಸ್ ಪಡೆದರೆ ಅದೇ ದಿನ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಯಾರು ಎಂಬುದು ತಿಳಿಯುತ್ತದೆ.

rockline
ರಾಕ್​​​ಲೈನ್​ ವೆಂಕಟೇಶ್​​​​​​​​​​​

ಉಪಾಧ್ಯಕ್ಷರ ಸ್ಥಾನಕ್ಕೆ ಉಮೇಶ್ ಬಣಕರ್, ಪ್ರಮಿಳಾ ಜೋಷಾಯ್​, ದಿನೇಶ್​​​​​​​ ಗಾಂಧಿ ಹೆಸರು ಕೇಳಿ ಬರುತ್ತಿದೆ. ಕಾರ್ಯದರ್ಶಿ ಸ್ಥಾನಕ್ಕೆ ಎನ್​​​​​.ಎಂ. ಸುರೇಶ್ ಹಾಗೂ ಭಾ.ಮ ಗಿರೀಶ್​​​​​​​​​​ ನಾಮಪತ್ರ ಸಲ್ಲಿಸಿದ್ದಾರೆ. ಖಜಾಂಚಿ ಸ್ಥಾನಕ್ಕೆ ಸಫೈರ್ ಮೂವೀಸ್ ವೆಂಕಟೇಶ್ ಹಾಗೂ ಚಾಮುಂಡೇಶ್ವರಿ ಸ್ಟುಡಿಯೋಸ್​​ನ ಶ್ರೀಮತಿ ರಾಜಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದಾರೆ.

ವಾಣಿಜ್ಯ ಮಂಡಳಿ ಚುನಾವಣೆ ಇದೆ 29 ರಂದು

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಾರ್ಷಿಕ ಚುನಾವಣೆ ಇದೆ ಜೂನ್ 29 ರಂದು ನಡೆಯಲಿದೆ. ಹಾಲಿ ಅಧ್ಯಕ್ಷ ಎಸ್ ಎ ಚಿನ್ನೇ ಗೌಡರು ವಿತರಕ ವಲಯದಿಂದ ಆಯ್ಕೆ ಆಗಿದ್ದರು. ಕಳೆದ ವರ್ಷ 28 ರಂದು ಅವರು ಚುಕ್ಕಾಣಿ ಹಿಡಿದಿದ್ದರು. ಈ ಬಾರಿ ಪ್ರದರ್ಶಕ ವಲಯದಿಂದ ಅಧ್ಯಕ್ಷ ಸ್ಥಾನಕ್ಕೆ ಕೂರಬೇಕು. ಈಗ ನಾಮಪತ್ರ ಸಲ್ಲುವಿಕೆಗೆ ನಿನ್ನೆ ಕಡೆಯ ದಿನವಾಗಿದೆ.

ಈ ಬಾರಿ ಹಿರಿಯ ಪ್ರದರ್ಶಕ ಜೈ ರಾಜ್ ಅವರ ಹೆಸರಿನ ಜೊತೆಗೆ ಪ್ರದರ್ಶಕ, ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಅವರ ಹೆಸರು ಸಹ ಅಧ್ಯಕ್ಷ ಗಾದಿಗೆ ಕೇಳಿ ಬರುತ್ತಿದೆ.

ವಿಚಾರ ಏನಪ್ಪಾ ಅಂದರೆ ರಾಕ್ ಲೈನ್ ವೆಂಕಟೇಶ್ ಮುಂದಿನ ದಿನಗಳಲ್ಲಿ ನಿರ್ಮಾಪಕರ ವಲಯದಿಂದಲೇ ಅಧ್ಯಕ್ಷ ಆಗಬಹುದು, ಅವರಿಗೆ ಬೇಜಾನ್ ಕೆಲಸ ಸಹ ಇದೆ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಉಸ್ತುವಾರಿ ಅವರ ಮೇಲಿದೆ, ದೊಡ್ಡ ಸಿನಿಮಾಗಳ ನಿರ್ಮಾಣ ಸಹ ಮಾಡುತ್ತಿದ್ದಾರೆ. ರಾಕ್ ಲೈನ್ ಮಾಲ್ ಸಹ ನಡೆಸುತ್ತಿದ್ದಾರೆ. ಪ್ರದರ್ಶಕ ವಲಯದಿಂದ ಅವರು ಬರುವುದು ಸೂಕ್ತ ಅಲ್ಲ ಅಂತ ಮಾತು ಕೇಳಿಬರುತ್ತಿದೆ.

ಹೆಚ್ಚಿನ ಒಲವು ಇರುವ ಜೈರಾಜ್ ಅಲಿಯಾಸ್ ಗುಬ್ಬಿ ಜಯರಾಜ್ ತುಮಕೂರಿನ ವ್ಯಕ್ತಿ. ಹಿರಿಯ ಪ್ರದರ್ಶಕರು. ಹಿರಿಯರು ಅನ್ನುವುದರ ಜೊತೆ ಕಾನೂನಿನ ಜ್ಞಾನ ಸಹ ಅವರಿಗೆ ಇದೆ. ಹಾಗಾಗಿ ವಾಣಿಜ್ಯ ಮಂಡಳಿ ವ್ಯಾಜ್ಯ ಮಂಡಳಿ ಆಗುವುದನ್ನು ತಡೆಗಟ್ಟಬಹುದು ಎಂಬ ಮಾತು ಸಹ ಕೇಳಿಬರುತ್ತಿದೆ.

ಇನ್ನೂ ಇದೆ ಜೂನ್ 25 ರಂದು ನಾಮಿನೇಶನ್ ವಾಪಸ್ಸು ಪಡೆಯುವ ದಿನ. ಅಂದು ರಾಕ್ ಲೈನ್ ವೆಂಕಟೇಶ್ ಅಥವಾ ಜೈ ರಾಜ್ ಎಂದು ಸಹ ತಿಳಿದು ಹೋಗುತ್ತದೆ.

ಉಪಾಧ್ಯಕ್ಷರ ಸ್ಥಾನಕ್ಕೆ ಉಮೇಶ್ ಬಣಕರ್, ಪ್ರಮಿಳ ಜೋಶೈ, ದಿನೇಷ್ ಗಾಂಧಿ ಅವರ ಹೆಸರು ಕೇಳಿ ಬರುತ್ತಿದೆ. ಕಾರ್ಯದರ್ಶಿ ಸ್ಥಾನಕ್ಕೆ ಎನ್ ಎಂ ಸುರೇಶ್ ಹಾಗೂ ಬಾ ಮ ಗಿರೀಷ್ ನಾಮಪತ್ರ ಸಲ್ಲಿಸಿದ್ದಾರೆ. ಖಜಾಂಚಿ ಸ್ಥಾನಕ್ಕೆ ಸಫೈರ್ ಮೂವೀಸ್ ವೆಂಕಟೇಶ್ ಹಾಗೂ ಚಾಮುಂಡೇಶ್ವರಿ ಸ್ಟುಡಿಯೋ ಶ್ರೀಮತಿ ರಾಜಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದಾರೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.