ETV Bharat / sitara

ಖ್ಯಾತ ತಮಿಳು ನಿರ್ದೇಶಕ ಕೆ.ವಿ.ಆನಂದ್ ವಿಧಿವಶ

ರಾಷ್ಟ್ರ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಹಾಗೂ ತಮಿಳು ನಿರ್ದೇಶಕ ಕೆ.ವಿ.ಆನಂದ್ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.

author img

By

Published : Apr 30, 2021, 8:57 AM IST

Famous director KV Anand passed away
ಖ್ಯಾತ ತಮಿಳು ನಿರ್ದೇಶಕ ಕೆ.ವಿ. ಆನಂದ್ ವಿಧಿವಶ

ಚೆನ್ನೈ (ತಮಿಳುನಾಡು): ಖ್ಯಾತ ತಮಿಳು ನಿರ್ದೇಶಕ, ಛಾಯಾಗ್ರಾಹಕ ಕೆ.ವಿ.ಆನಂದ್ (54) ಹೃದಯಾಘಾತದಿಂದಾಗಿ ಇಂದು ಬೆಳಗ್ಗೆ ಚೆನ್ನೈನಲ್ಲಿ ನಿಧನರಾಗಿದ್ದಾರೆ.

ಆನಂದ್ ಅವರು 1994ರಲ್ಲಿ 'ಥೆನ್ಮಾವಿನ್​ ಕೊಂಬತ್​' ಎಂಬ ಮಲಯಾಳಂ ಚಿತ್ರಕ್ಕೆ ಛಾಯಾಗ್ರಾಹಕರಾಗಿ ತಮ್ಮ ಸಿನಿ ಜೀವನ ಪ್ರಾರಂಭಿಸಿದ್ದರು. ಈ ಚಿತ್ರದಲ್ಲಿನ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದರು.

ಇದನ್ನೂ ಓದಿ: ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು: ನಟ ಸುದೀಪ್

2005ರಲ್ಲಿ ತಮಿಳಿನ 'ಕನಾ ಕಂದೇನ್​' ಸಿನಿಮಾ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದರು. ಬಳಿಕ ಕವನ್, ಕಪ್ಪಾನ್, ಅಯಾನ್​ನಂತಹ ಪ್ರಸಿದ್ಧ ಚಿತ್ರಗಳು ಇವರ ನಿರ್ದೇಶನದಲ್ಲಿ ಮೂಡಿ ಬಂದಿವೆ. ಇವರ ನಿಧನದ ವಿಚಾರ ಕೇಳಿ ತಮಿಳು-ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.