ಬಾಲಿವುಡ್ ಅಂಗಳದಲ್ಲಿ ಗಾಸಿಪ್ ಸುದ್ದಿಗಳಿಗೆ ಬರವೇ ಇಲ್ಲ ಬಿಡಿ. ಆ ನಟ ಈ ನಟನನ್ನು ಬೈದ್ರು. ಈ ನಟ ಆ ನಿರ್ದೇಶಕನ ಮೇಲೆ ಹರಿಹಾಯ್ದರು ಅಂತ ಹಲವಾರು ವದಂತಿಗಳು ಬರ್ತಾನೆ ಇರ್ತಾವೆ. ಈ ಪಟ್ಟಿಗೆ ಹೊಸದೊಂದು ಸುಳ್ಳು ಸುದ್ದಿ ಸೇರ್ಪಡೆಯಾಗಿದೆ. ಆ ಸುಳ್ಳು ಸುದ್ದಿ ಏನಪ್ಪ ಅಂದ್ರೆ, ನಟ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಜೊತೆ ದೊಡ್ಡ ಜಗಳವಾಗಿದೆ ಅಂತ ವೆಬ್ ಸೈಟ್ ಒಂದು ಸುದ್ದಿಯನ್ನು ಹರಿಬಿಟ್ಟಿತ್ತು.
ಆದ್ರೆ ಈ ಸುದ್ದಿಗೆ ಕಿಲಾಡಿ ಅಕ್ಷಯ್ ಸಕ್ಕತ್ತಾಗಿಯೇ ಟಾಂಗ್ ಕೊಟ್ಟಿದ್ದಾರೆ. ನಿಜವಾಗಿ ಅಕ್ಷಯ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ನಡುವೆ ಜಗಳವೇ ಆಗಿಲ್ಲ. ಆದ್ರೆ ಆ ಸುಳ್ಳು ಸುದ್ದಿಗೆ ಟಾಂಗ್ ಕೊಡಲು ಅಕ್ಷಯ್ ಮತ್ತು ಶೆಟ್ರು ಸೇರಿಕೊಂಡು ಒಂದು ನಾಟಕೀಯ ಜಗಳವನ್ನು ಹಾಡಿದ್ದಾರೆ.
-
#BreakingNews - A fallout which might just make your day 🙃 pic.twitter.com/gH2jgTQqhT
— Akshay Kumar (@akshaykumar) November 12, 2019 " class="align-text-top noRightClick twitterSection" data="
">#BreakingNews - A fallout which might just make your day 🙃 pic.twitter.com/gH2jgTQqhT
— Akshay Kumar (@akshaykumar) November 12, 2019#BreakingNews - A fallout which might just make your day 🙃 pic.twitter.com/gH2jgTQqhT
— Akshay Kumar (@akshaykumar) November 12, 2019
ಈ ನಾಟಕದ ಜಗಳಕ್ಕೆ ಕತ್ರಿನಾ ಕೈಫ್ ಆಕ್ಷನ್ ಕಟ್ ಹೇಳಿದ್ದಾರೆ. ಹೌದು ಈ ಬಗ್ಗೆ ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಾಕಿದ್ದಾರೆ. ಆ ವಿಡಿಯೋದಲ್ಲಿ ಮೊದಲಿಗೆ ಕತ್ರಿನಾ ಕೈಫ್ ಕಾಣಿಸಿಕೊಂಡು ಸುಳ್ಳು ಸುದ್ದು ಹರಿಬಿಟ್ಟ ವೆಬ್ ಸೈಟ್ ಸುದ್ದಿಯನ್ನು ತೋರಿಸಿ ಈಗ ಲೈವ್ ನೋಡಿ ಎಂದು ಹೇಳುತ್ತಾರೆ. ಆಮೇಲೆ ಅಕ್ಷಯ್ ಮತ್ತು ರೋಹಿತ್ ಶೆಟ್ಟಿ ಜಗಳವಾಡುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಸುದ್ದಿಯಾಗಿದೆ.
ಒಟ್ಟಾರೆ ಸುಳ್ಳು ಸುದ್ದಿ ಹರಿಬಿಡುವ ಮಾಧ್ಯಮಗಳಿಗೆ ಕಿಲಾಡಿತನದಿಂದಲೇ ನಟ ಅಕ್ಷಯ್ ಉತ್ತರ ಕೊಟ್ಟಿದ್ದಾರೆ.