ಡೇನಿಯಲ್ ಕ್ರೇಗ್ ಅಭಿನಯದ ಜೇಮ್ಸ್ ಬಾಂಡ್ ಸೀರೀಸ್ನ 'ನೋ ಟೈಮ್ ಟು ಡೈ' ಸಿನಿಮಾ ನಿಗದಿತ ದಿನಾಂಕಕ್ಕೂ ಮುನ್ನವೇ ತೆರೆ ಕಾಣುತ್ತಿದೆ. ಇದು ಹಾಲಿವುಡ್ನ ಬಹು ನಿರೀಕ್ಷಿತ ಸಿನಿಮಾವಾಗಿದೆ.
- " class="align-text-top noRightClick twitterSection" data="">
ನವೆಂಬರ್ 12 ರಂದು ಯುಕೆ ಹಾಗೂ ನವೆಂಬರ್ 20 ರಂದು ಅಮೆರಿಕದಲ್ಲಿ 'ನೋ ಟೈಮ್ ಟು ಡೈ' ಬಿಡುಗಡೆಯಾಗುತ್ತಿದೆ. ಜೇಮ್ಸ್ ಬಾಂಡ್ ಟ್ವಿಟ್ಟರ್ ಪೇಜ್ನಲ್ಲಿ ಸಿನಿಮಾ ದಿನಾಂಕದ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿದೆ. ಆದರೆ ಭಾರತದಲ್ಲಿ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಇದಕ್ಕೂ ಮುನ್ನ ಏಪ್ರಿಲ್ನಲ್ಲಿ ಈ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಕೊರೊನಾ ಭೀತಿಯಿಂದ ಬಿಡುಗಡೆ ದಿನಾಂಕವನ್ನು ನವೆಂಬರ್ 25 ಕ್ಕೆ ಮುಂದೂಡಲಾಗಿತ್ತು ಆದರೆ ಮತ್ತೆ ನಿಗದಿಪಡಿಸಿದ ದಿನಾಂಕಕ್ಕೂ ಮುನ್ನವೇ ಸಿನಿಮಾ ಬಿಡುಗಡೆಯಾಗುತ್ತಿದೆ.
-
The return of old friends in NO TIME TO DIE.
— James Bond (@007) June 13, 2020 " class="align-text-top noRightClick twitterSection" data="
In cinemas 12th November UK, 20th November US. pic.twitter.com/GkXugGEAba
">The return of old friends in NO TIME TO DIE.
— James Bond (@007) June 13, 2020
In cinemas 12th November UK, 20th November US. pic.twitter.com/GkXugGEAbaThe return of old friends in NO TIME TO DIE.
— James Bond (@007) June 13, 2020
In cinemas 12th November UK, 20th November US. pic.twitter.com/GkXugGEAba
'ನೋ ಟೈಮ್ ಟು ಡೈ' ಸ್ಪೈ-ಥ್ರಿಲ್ಲರ್ ಸಿನಿಮಾವಾಗಿದೆ. ಜೇಮ್ಸ್ ಬಾಂಡ್ ತಮ್ಮ ನಿವೃತ್ತಿಯ ದಿನಗಳನ್ನು ಜಮೈಕಾದಲ್ಲಿ ಎಂಜಾಯ್ ಮಾಡುವಾಗ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಜೇಮ್ಸ್ ಬಾಂಡ್ ಹಳೆಯ ಸ್ನೇಹಿತ ಫೆಲಿಕ್ಸ್ ಲೆಟರ್ ಬಾಂಡ್ ಸಹಾಯ ಕೇಳಿ ಬರುವುದರಿಂದ ಅವರಿಗೆ ನಿವೃತ್ತಿಯ ಜೀವನವನ್ನು ಸಂತೋಷದಿಂದ ಅನುಭವಿಸಲು ಅವಕಾಶವಾಗುವುದಿಲ್ಲ. ಸ್ನೇಹಿತನಿಗಾಗಿ ಅವರು ಮತ್ತೆ ಕೆಲಸ ಆರಂಭಿಸುವ ಕಥೆಯನ್ನು ಈ ಸರಣಿ ಒಳಗೊಂಡಿದೆ.
ಒಟ್ಟಿನಲ್ಲಿ ಜೇಮ್ಸ್ ಬಾಂಡ್ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.