ಹೈದರಾಬಾದ್: ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಚೆಹ್ರೆ' ಥಿಯೇಟರ್ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆಗಸ್ಟ್ 27 ಅನ್ನು ಚಲನಚಿತ್ರದ ಬಿಡುಗಡೆ ದಿನಾಂಕವಾಗಿ ಫಿಕ್ಸ್ ಮಾಡಿದ್ದಾರೆ. ಸಿನಿಮಾ ರಿಲೀಸ್ಗೆ ಇನ್ನೂ ಸಾಕಷ್ಟು ದಿನಗಳು ಬಾಕಿ ಇರುವಾಗ, ನಿರ್ಮಾಪಕರು ಮಂಗಳವಾರದಂದೇ ಟ್ರೈಲರ್ ಅನಾವರಣಗೊಳಿಸಿದ್ದಾರೆ.
ಚಿತ್ರವು ಕೆಲವು ತಿಂಗಳುಗಳಿಂದ ಬಿಡುಗಡೆಗೆ ಸಿದ್ಧವಾಗಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿತ್ತು. ಹೀಗಿದ್ದೂ, ಚಿತ್ರಮಂದಿರದಲ್ಲಿ ಬಿಡುಗಡೆಗೆ ಸರಿಯಾದ ಸಮಯಕ್ಕಾಗಿ ತಂಡವು ಕಾಯುತ್ತಿತ್ತು. ಚೆಹ್ರೆ ಸಿನೆಮಾದಲ್ಲಿ ಪ್ರೇಕ್ಷಕರು ಅಮಿತಾಬ್ ವಕೀಲರ ಪಾತ್ರವನ್ನು ನಿರ್ವಹಿಸುವುದನ್ನು ನೋಡಲಿದ್ದಾರೆ ಮತ್ತು ಇಮ್ರಾನ್ ಹಶ್ಮಿ ವ್ಯಾಪಾರ ಉದ್ಯಮಿ ಪಾತ್ರ ನಿರ್ವಹಿಸುವುದನ್ನು ಕಾಣಲಿದ್ದಾರೆ.
- " class="align-text-top noRightClick twitterSection" data="">
ನಿರ್ದೇಶಕ ರೂಮಿ ಜಾಫ್ರಿ ಈ ಹಿಂದೆ ಚೆಹ್ರೆ ಸಿನೆಮಾದಲ್ಲಿ ಅಮಿತಾಬ್ ಜಿ ಮತ್ತು ಇಮ್ರಾನ್ ಅವರನ್ನು ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಒಟ್ಟಿಗೆ ನೋಡುತ್ತಿರುವುದು ನನಗೆ ಹೃದಯ ತುಂಬಿ ಬರುತ್ತಿದೆ ಎಂದಿದ್ದರು.
ಈ ಚಿತ್ರದಲ್ಲಿ ರಿಯಾ ಚಕ್ರವರ್ತಿ ಕೂಡ ಕಾಣಿಸಿಕೊಂಡಿದ್ದಾರೆ. ಆಕೆಯ ಗೆಳೆಯ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಇದು ಆಕೆಯ ಮೊದಲ ಸಿನಿಮಾವಾಗಿದೆ. ಚಿತ್ರದ ಮೊದಲ ಪೋಸ್ಟರ್ ಮತ್ತು ಟೀಸರ್ ನಲ್ಲಿ ನಟಿ ಕಾಣಿಸಿಕೊಂಡಿರಲಿಲ್ಲ. ರೂಮಿ ಜಾಫ್ರಿ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ನಲ್ಲಿ ಅಣ್ಣು ಕಪೂರ್, ಕ್ರಿಸ್ಟಲ್ ಡಿಸೋಜಾ, ದೃತಿಮಾನ್ ಚಕ್ರವರ್ತಿ, ರಘುಬೀರ್ ಯಾದವ್ ಮತ್ತು ಸಿದ್ದಾಂತ್ ಕಪೂರ್ ಕೂಡ ನಟಿಸಿದ್ದಾರೆ.
ಓದಿ: ನಟಿ ಜಿಯಾ ಖಾನ್ ಅಂತ್ಯಕ್ರಿಯೆ ವೇಳೆ ಧರಿಸಿದ್ದ ಬಟ್ಟೆ ಹರಾಜಿಗಿಟ್ಟು ನೆಟಿಜನ್‌ಗಳ ಟ್ರೋಲ್ಗೆ ಗುರಿಯಾದ ನಟಿ ದೀಪಿಕಾ!