ಬೆಂಗಳೂರು: ಬಿಡುವು ಸಿಕ್ಕಾಗಲೆಲ್ಲ ಕಾಡು ಸುತ್ತುವುದು ಅಂದ್ರೆ ಯಜಮಾನ ದರ್ಶನ್ಗೆ ಎಲ್ಲಿಲ್ಲದ ಕ್ರೇಜ್. ಇದೀಗ ರಾಬರ್ಟ್ ಶೂಟಿಂಗ್ ಮುಗಿಸಿರುವ ಅವರು ಕ್ಯಾಮರಾ ಹಿಡಿದು ಉತ್ತರಾಖಂಡ ಸುತ್ತಾಲ್ ಅರಣ್ಯದಲ್ಲಿ ಸಂಚರಿಸಿ ವಾಪಸ್ ಬಂದಿದ್ದಾರೆ.
ಕರ್ನಾಟಕ ಅರಣ್ಯ ರಾಯಭಾರಿ ಆಗಿದ್ದ ದರ್ಶನ್, ಛಾಯಾಗ್ರಹಕರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದಾಗಿರುವ ಉತ್ತರಾಖಂಡದ ಸುತ್ತಾಲ್ ವನ್ಯಜೀವಿ ಪ್ರದೇಶಕ್ಕೆ ಲೀಲಾ ಅಪ್ಪಾಜಿ ಹಾಗೂ ಪ್ರಸಿದ್ಧ ಬರ್ಡ್ ಫೋಟೋಗ್ರಾಫರ್ ರಾಹುಲ್ ಶರ್ಮಾ ಮತ್ತವರ ಟೀಮ್ ಜೊತೆ ಅರಣ್ಯದಲ್ಲಿ ಒಂದು ವಾರ ಕ್ಯಾಂಪ್ ಹಾಕಿ ಬಂದಿದ್ದಾರೆ.
ದರ್ಶನ್ ಪಕ್ಷಿಗಳನ್ನ ಸೆರೆ ಹಿಡಿಯುವುದರಲ್ಲಿ ಬ್ಯುಸಿಯಾಗಿದ್ದ ಫೋಟೋ ಒಂದು ರಿವೀಲ್ ಆಗಿದ್ದು, ಉತ್ತರಾಖಂಡದ ಸುತ್ತಾಲ್ ಕಾಡಿನಲ್ಲಿ ದರ್ಶನ್ ಆ್ಯಂಡ್ ಟೀಮ್ ಒಂದು ವಾರ ಈ ಫೋಟೋಗ್ರಫಿ ಕ್ಷಣಗಳನ್ನ ಸಂಭ್ರಮಿಸಿದ್ದಾರೆ. ಕ್ಯಾಂಪ್ ಮುಗಿಸಿಕೊಂಡು ಸದ್ಯ ಅವರು ಬೆಂಗಳೂರಿಗೆ ವಾಪಸ್ ಬಂದಿದ್ದಾರೆ.