ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾ, ರಿಲೀಸ್ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ಮೂರೇ ದಿನಕ್ಕೆ ಬಾಕ್ಸ್ ಆಫೀಸ್‌ನಲ್ಲಿ 23 ಕೋಟಿ ರೂಪಾಯಿ ಗಳಿಸಿದ ಹಿನ್ನೆಲೆ ಚಿತ್ರತಂಡ ಸಕ್ಸಸ್ ಖುಷಿಯನ್ನೂ ಹಂಚಿಕೊಂಡಿತ್ತು.
- " class="align-text-top noRightClick twitterSection" data="">
ಶ್ರೀಮುರಳಿ ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ 'ರತ್ನಾಕರ' ಎಂಬ ಪಾತ್ರ ಹೈಲೈಟ್ ಆಗಿದೆ. ರತ್ನಾಕರ ಎಂಬ ವೃದ್ಧನ ಪಾತ್ರದಲ್ಲಿ ಶ್ರೀಮುರಳಿ ಕಾಣಿಸಿಕೊಂಡಿರುವ ಈ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪಾತ್ರಕ್ಕಾಗಿ ಶ್ರೀಮುರಳಿ ಸಾಕಷ್ಟು ಶ್ರಮ ವಹಿಸಿದ್ರಂತೆ. ವೃದ್ಧನ ಪಾತ್ರಕ್ಕಾಗಿ ಐದು ಗಂಟೆಗಳ ಕಾಲ ಮೇಕಪ್ ಮಾಡಿಕೊಂಡು ಚಿತ್ರದಲ್ಲಿ ಗಮನ ಸೆಳೆದಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಈ ಹಾಡಿನಲ್ಲಿ ಯೋಗ, ನಾಟಿ ಔಷಧ, ದಾನ ಧರ್ಮ ಮಾಡುವ ಸನ್ನಿವೇಶಗಳು ಇವೆ. ಸುನೀಲ್ ಗುಜಗೊಂಡ ಈ ಹಾಡನ್ನು ಹಾಡಿದ್ದಾರೆ. ಅರ್ಜುನ್ ಜನ್ಯ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸದ್ಯ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.