ETV Bharat / sitara

ಪುರುಷೋತ್ತಮ ಸಿನಿಮಾದಲ್ಲಿ ಜಿಮ್ ರವಿಗೆ ಜೋಡಿಯಾದ ಅಪೂರ್ವ - ಜಜಿಮ್ ರವಿ ಪುರುಷೋತ್ತಮ ಸಿನಿಮ

ಫೆಬ್ರವರಿಯಲ್ಲಿ ಪ್ರಾರಂಭವಾದ `ಪುರುಷೋತ್ತಮ' ಚಿತ್ರದ ಚಿತ್ರೀಕರಣ, ಆ ನಂತರ ಮೈಸೂರಿನಲ್ಲಿ ಮುಂದುವರೆದಿದೆ. ಮೈಸೂರಿನ ಹಲವು ಪ್ರದೇಶಗಳಲ್ಲಿ 40ಕ್ಕೂ ಹೆಚ್ಚು ದಿನಗಳ ಕಾಲ ಸತತ ಚಿತ್ರೀಕರಣ ನಡೆದಿದೆ. ಎರಡು ಹಾಡುಗಳ ಮತ್ತು ಒಂದಿಷ್ಟು ಮಾತಿನ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಬಹುಶಃ ರಾಜ್ಯದಲ್ಲಿ ಜನತಾ ಕರ್ಫ್ಯೂ ಘೋಷಣೆಯಾಗದಿದ್ದರೆ, ಚಿತ್ರೀಕರಣವನ್ನು ಮುಗಿಸಿಕೊಂಡೇ ಬರುವ ಯೋಚನೆ ಚಿತ್ರತಂಡಕ್ಕಿತ್ತಂತೆ..

Gym ravi
Gym ravi
author img

By

Published : May 3, 2021, 5:59 PM IST

ಕನ್ನಡದಲ್ಲಿ 130ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಕಲಾವಿದರಾಗಿ ಗುರುತಿಸಿಕೊಂಡು, ಇದೀಗ `ಪುರುಷೋತ್ತಮ' ಚಿತ್ರದ ಮೂಲಕ ಜಿಮ್ ರವಿ ಹೀರೊ ಆಗಿದ್ದು ಗೊತ್ತೇ ಇದೆ. ಎರಡು ತಿಂಗಳ ಹಿಂದೆ ರವಿ ಅವರ ಜಿಮ್‌ನಲ್ಲೇ ಚಿತ್ರದ ಮುಹೂರ್ತವಾಗಿ, ಚಿತ್ರೀಕರಣ ಪ್ರಾರಂಭವಾಗಿತ್ತು.

ಆದರೆ, ಆ ಸಂದರ್ಭದಲ್ಲಿ ಚಿತ್ರದ ನಾಯಕಿಯ ಆಯ್ಕೆಯಾಗಿರಲಿಲ್ಲ. ಇದೀಗ ಹೊಸ ವಿಷಯವೇನೆಂದರೆ, ಅಪೂರ್ವ ನಾಯಕಿಯಾಗಿ ಆಯ್ಕೆಯಾಗಿರುವುದಷ್ಟೇ ಅಲ್ಲ, ತಮ್ಮ ಕೆಲಸವನ್ನು ಬಹುತೇಕ ಮುಗಿಸಿದ್ದಾರೆ.

ಫೆಬ್ರವರಿಯಲ್ಲಿ ಪ್ರಾರಂಭವಾದ `ಪುರುಷೋತ್ತಮ' ಚಿತ್ರದ ಚಿತ್ರೀಕರಣ, ಆ ನಂತರ ಮೈಸೂರಿನಲ್ಲಿ ಮುಂದುವರೆದಿದೆ. ಮೈಸೂರಿನ ಹಲವು ಪ್ರದೇಶಗಳಲ್ಲಿ 40ಕ್ಕೂ ಹೆಚ್ಚು ದಿನಗಳ ಕಾಲ ಸತತ ಚಿತ್ರೀಕರಣ ನಡೆದಿದೆ.

ಎರಡು ಹಾಡುಗಳ ಮತ್ತು ಒಂದಿಷ್ಟು ಮಾತಿನ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಬಹುಶಃ ರಾಜ್ಯದಲ್ಲಿ ಜನತಾ ಕರ್ಫ್ಯೂ ಘೋಷಣೆಯಾಗದಿದ್ದರೆ, ಚಿತ್ರೀಕರಣವನ್ನು ಮುಗಿಸಿಕೊಂಡೇ ಬರುವ ಯೋಚನೆ ಚಿತ್ರತಂಡಕ್ಕಿತ್ತಂತೆ.

ಆದರೆ, ಅಷ್ಟರಲ್ಲಿ ಜನತಾ ಕರ್ಫ್ಯೂ ಘೋಷಣೆಯಾದ ಹಿನ್ನೆಲೆ ಚಿತ್ರತಂಡದವರು ಚಿತ್ರೀಕರಣ ನಿಲ್ಲಿಸಿ, ಬೆಂಗಳೂರಿಗೆ ವಾಪಸಾಗಿದ್ದಾರೆ. ತಾವು ಇದುವರೆಗೂ ನಟಿಸಿರುವ ಚಿತ್ರಗಳಿಗಿಂತ ಮೆಚ್ಯುರ‍್ಡ್ ಆದ ಪಾತ್ರ ಈ ಸಿನಿಮಾದಲ್ಲಿದೆ ಎಂದು ಹೇಳಿಕೊಂಡಿದ್ದಾರೆ ಅಪೂರ್ವ.

ತಮ್ಮ ವಯಸ್ಸಿಗಿಂತ ಮೀರಿದ ಪಾತ್ರವನ್ನ ಈ ಚಿತ್ರದಲ್ಲಿ ನಿರ್ವಹಿಸಿದ್ದಾರಂತೆ. `ಪುರುಷೋತ್ತಮ' ಚಿತ್ರವನ್ನು ಅಮರ್‌ನಾಥ್ ಬರೆದು ನಿರ್ದೇಶಿಸುತ್ತಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.