ETV Bharat / sitara

ಬರೋಬ್ಬರಿ ಏಳು ವರ್ಷಗಳ ನಂತರ ಬಣ್ಣ ಹಚ್ತಾರಾ 'ಮೋಹಕ ತಾರೆ'?

ನಟಿ ರಮ್ಯಾ ಮತ್ತೆ ನಟನೆಯತ್ತ ಮುಖ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. 2012 ಜೂನ್ ತಿಂಗಳಿನಲ್ಲಿ ‘ದಿಲ್ ಕ ರಾಜ’ ಸಿನಿಮಾ ಕೆಲಸ ಪ್ರಾರಂಭವಾಗಿದ್ದು, ಇದೀಗ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

author img

By

Published : Oct 26, 2019, 11:28 AM IST

ರಮ್ಯಾ ಮತ್ತು ಪ್ರಜ್ವಲ್​​ ದೇವರಾಜು

ಸ್ಯಾಂಡಲ್​ವುಡ್​​ನ ಮೋಹಕ ತಾರೆ ರಮ್ಯಾ ಸ್ಯಾಂಡಲ್‌ವುಡ್‌ನ ಘಟಾನುಘಟಿಗಳ ಜೊತೆ ಅಭಿನಯಿಸಿ ಸೈ ಎನ್ನಿಸಿಕೊಂಡವರು. ಮಾಜಿ ಸಂಸದೆಯೂ ಆಗಿರುವ ರಮ್ಯಾ ನಟನೆಯಲ್ಲಿ ಬಿಡುಗಡೆಯಾದ ಕೊನೆಯ ಸಿನಿಮಾ ಕೋಡಿ ರಾಮಕೃಷ್ಣ ನಿರ್ದೇಶನದ 'ನಾಗರ ಹಾವು'. ಈ ಸಿನಿಮಾದ ಬಳಿಕ ಇವರ ನಟನೆಯ ಯಾವ ಚಿತ್ರವೂ ತೆರೆ ಕಂಡಿಲ್ಲ.

ಆದ್ರೆ ಇದೀಗ 'ಊರಿಗೊಬ್ಳೆ ಪದ್ಮಾವತಿ' ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ರಮ್ಯಾ ಮತ್ತೆ ನಟನೆಯತ್ತ ಮುಖ ಮಾಡ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. 2012 ಜೂನ್ ತಿಂಗಳಿನಲ್ಲಿ ‘ದಿಲ್ ಕ ರಾಜ’ ಸಿನಿಮಾ ಕೆಲಸ ಶುರುವಾಗಿದ್ದು, ಈ ಚಿತ್ರದಲ್ಲಿ ಪ್ರಜ್ವಲ್​ ದೇವರಾಜ್​​ ಜೊತೆ ರಮ್ಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆದ್ರೆ, ರಾಜಕೀಯ ಕೆಲಸಗಳ ಒತ್ತಡದಿಂದ ಈವರೆಗೆ ರಮ್ಯಾ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗದ ಕಾರಣ ದಿಲ್​​ ಕ ರಾಜನನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಾಗಲಿಲ್ಲ.

after long time sandalwood ramya return to film
ದಿಲ್​​ ಕ ರಾಜ ಪೋಸ್ಟರ್​​​

'ದಿಲ್​​​ ಕ ರಾಜ' ಈಗ ರಿಲೀಸ್​ಗೆ ರೆಡಿಯಾಗಿದೆ. ಸಿನಿಮಾ ಕೆಲಸ ಪೂರ್ಣಗೊಳ್ಳಲು ಕೇವಲ 8 ದಿನಗಳ ಶೂಟಿಂಗ್​ ಮಾತ್ರ ಬಾಕಿ ಉಳಿದಿದೆ. ಆದ್ರೆ 7 ವರ್ಷಗಳ ಹಿಂದಿನ ರಮ್ಯಾ ಮತ್ತು ಪ್ರಜ್ವಲ್ ಅವರ​ ದೇಹಸ್ಥಿತಿಗೂ ಈಗಿನದ್ದಕ್ಕೂ ತುಂಬಾ ವ್ಯತ್ಯಾಸವಿದೆ. ಇದರಿಂದ ಸಿನಿಮಾದಲ್ಲಿ ರಮ್ಯಾ ನಟಿಸ್ತಾರಾ? ಇಲ್ವಾ? ಈ ಸಿನಿಮಾ ಬಿಡುಗಡೆಯಾಗುತ್ತಾ ಅನ್ನೋದೇ ಕುತೂಹಲ.

after long time sandalwood ramya return to film
ಚಿತ್ರ ತಂಡ

ಇನ್ನೊಂದು ವಿಶೇಷ ಅಂದ್ರೆ, ನಿರ್ದೇಶಕ ಸೋಮನಾಥ್ ಪಿ ಪಾಟೀಲ್ ಸಿನಿಮಾದ ಟೀಸರ್​ ಬಿಡುಗಡೆ ಮಾಡಿದ್ದಾರೆ. ಇದ್ರಿಂದ ಕುತೂಹಲ ಮತ್ತಷ್ಟು ಹೆಚ್ಚಾಗಿದ್ದು ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

  • " class="align-text-top noRightClick twitterSection" data="">

ರಮ್ಯ ಅಭಿನಯದ ದಿಲ್ ಕ ರಾಜ ಟ್ರೈಲರ್ ಕುತೂಹಲ

ನಟಿ ಹಾಗೂ ಮಾಜಿ ಸಂಸದೆ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲೂ ಮಿಂಚಿದ ರಮ್ಯ (ದಿವ್ಯ ಸ್ಪಂದನ) ಅವರ ಹಳೆಯ ಸಿನಿಮಾ ದಿಲ್ ಕ ರಾಜ ಈಗ ಸದ್ದು ಮಾಡುತ್ತಿದೆ. ರಮ್ಯ ಹಾಗೂ ದಿಗಂತ್ ಅಭಿನಯದ ತೆಲುಗು ಪ್ರಸಿದ್ದ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ನಾಗರ ಹಾವು ಸಿನಿಮಾ ನಂತರ (2016) ರಮ್ಯ ಯಾವುದೇ ಸಿನಿಮಾ ಆಗಲಿ, ಸಿನಿಮಾ ಸಮಾರಂಭ ಆಗಲಿ ಕಾಣಿಸಿಕೊಳ್ಳಲಿಲ್ಲ.

ಆದರೆ ಅವರು ಅರ್ಧಕ್ಕೆ ನಿಲ್ಲಿಸಿದ ದಿಲ್ ಕ ರಾಜ ಪ್ರಜ್ವಲ್ ದೇವರಾಜ್ ಜೊತೆ ಸಿನಿಮಾ ಮಾತ್ರ ನೆನೆಗುದಿಯಲ್ಲೇ ಇತ್ತು. 2012 ಜೂನ್ ತಿಂಗಳಿನಲ್ಲಿ ದಿಲ್ ಕ ರಾಜ ಪ್ರಾರಂಭ ಆಗಿತ್ತು. ಕಲಬುರ್ಗಿ ಅಲ್ಲಿ ಇಂಜಿನಿಯರಿಂಗ್ ಓದಿದ ಸೋಮನಾಥ್ ಪಿ ಪಾಟೀಲ್ ಡಿ ಎಫ್ ಐ ವ್ಯಾಸಂಗ ಮಾಡಿ ಅವರ ನಿರ್ದೇಶನದ ಆಸೆಗೆ ಅವರ ಹೆತ್ತವರು ಸುಶೀಲಾ ಪಾಟಿಲ್ ಹಾಗೂ ಭರತ್ ರೆಡ್ಡಿ ಹಣ ಹೂಡಲು ಮುಂದಾಗಿದ್ದರು.

ನಾಗಿನೀಡು ತೆಲುಗಿನ ಗಬ್ಬರ್ ಸಿಂಗ್ ಮುಖ್ಯ ವಿಲನ್ ದಿಲ್ ಕ ರಾಜ ಚಿತ್ರಕ್ಕೆ ಆಯ್ಕೆ ಆಗಿದ್ದರು. ಅಭಿಮನ್ ರಾಯ್ ಸಂಗೀತ ಐದು ಹಾಡುಗಳ ಸಂಯೋಜನೆ ಸಹ ಮಾಡಲಾಗಿತ್ತು. ಅಜಯ್ ವಿನ್ಸೆಂಟ್ ಛಾಯಾಗ್ರಾಹಕ ಎಂದು ಸಹ ಗೊತ್ತು ಮಾಡಲಾಗಿತ್ತು.

ಆದರೆ ರಮ್ಯ ಅವರ ಕಾಂಗ್ರೆಸ್ಸ್ ಪಕ್ಷದ ಚಟುವಟಿಕೆ ಇಂದ ಸಿನಿಮಾ ಮುಂದೆ ಹೋಗುತ್ತಲೇ ಇತ್ತು. ರಮ್ಯ ಈ ಚಿತ್ರಕ್ಕೆ ಡೇಟ್ ಹೊಂದಿಸಿ ಕೊಟ್ಟಾಗಲೆಲ್ಲಾ ಇತ್ತ ಕಡೆ ಪ್ರಜ್ವಲ್ ದೇವರಾಜ್ ಲಭ್ಯವಿರಲಿಲ್ಲ. ಮಂಡ್ಯ ಲೋಕ ಸಭಾ ಚುನಾವಣೆ ಬೈ ಎಲೆಕ್ಷನ್ ರಮ್ಯ ಗೆದ್ದ ಮೇಲೆ ಈ ಚಿತ್ರದ ಸ್ಥಿತಿ ಬದಲಾಗಿ ಹೋಯಿತು.

ಈಗ 7 ವರ್ಷಗಳ ನಂತರ ದಿಲ್ ಕ ರಾಜ ಟ್ರೈಲರ್ ಇಂದ ಸದ್ದು ಮಾಡುತ್ತಿದೆ. ಕೇವಲ 8 ದಿವಸಗಳ ಕ್ಲೈಮಕ್ಸ್ ಚಿತ್ರೀಕರಣ ಆಗಬೇಕಿದೆ. ಅದಕ್ಕೆ ರಮ್ಯ ಅವರ ಉಪಸ್ಥಿತಿ ಅವಶ್ಯಕವಿದೆ. ಆದರೆ ರಮ್ಯ ಆಗಲಿ ಪ್ರಜ್ವಲ್ ದೇವರಾಜ್ ಆಗಲಿ ಈಗ ಬಹಳವಾಗಿ ಬದಲಾಗಿದ್ದಾರೆ.

ಬಿಡುಗಡೆ ಆಗಿರುವ ಟ್ರೈಲರ್ ಅಲ್ಲಿ ರಮ್ಯ ಅವರ ಭಾಗಕ್ಕೆ ಯಾವುದೇ ಸಂಭಾಷಣೆ ಇಲ್ಲ. ಸ್ವಲ್ಪ ಆಕ್ಷನ್ ಭಾಗವಿದೆ. ಆದರೆ ಚಿತ್ರ ಸಂಪೂರ್ಣ ಆಗಬೇಕು ಅಂದರೆ ರಮ್ಯ ಇರುತ್ತಾರ ಇಲ್ಲವ ಎಂಬುದು ಈಗ ಯಕ್ಷ ಪ್ರಶ್ನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.