ಹೈದರಾಬಾದ್: ತೆಲುಗು ರೆಬೆಲ್ ಸ್ಟಾರ್ ಪ್ರಭಾಸ್ 1650 ಎಕರೆ ಅರಣ್ಯ ಭೂಮಿಯನ್ನು ದತ್ತು ಪಡೆದುಕೊಂಡಿದ್ದಾರೆ. ರಾಜ್ಯಸಭಾ ಸಂಸದ ಜೋಗಿನಪಲ್ಲಿ ಸಂತೋಷ್ ಕುಮಾರ್ ಅವರ ಆಶ್ರಯದಲ್ಲಿ ಈ ಕಾರ್ಯ ನಡೆಯಿತು.
ಪ್ರಭಾಸ್ ದುಂಡಿಗಲ್ ಬಳಿಯ ಖಾಜಿಪಲ್ಲಿ ಅರ್ಬನ್ ಫಾರೆಸ್ಟ್ ಬ್ಲಾಕನ್ನು ದತ್ತು ಪಡೆದಿದ್ದಾರೆ. ಅರ್ಬನ್ ಇಕೋ ಪಾರ್ಕನ್ನು ಪ್ರಭಾಸ್ ತಂದೆ ಯು.ವಿ.ಎಸ್.ರಾಜು ಅವರ ಸ್ಮರಣಾರ್ಥ ಹೆಸರಿಸಲಾಗುತ್ತಿದೆ.
ಪ್ರಭಾಸ್ ಈಗಾಗಲೇ 2 ಕೋಟಿ ದೇಣಿಗೆ ನೀಡಿದ್ದು, ಮುಂದಿನ ಅವಶ್ಯಕತೆಗಳನ್ನು ಆಧರಿಸಿ ಹೆಚ್ಚಿನ ಕೊಡುಗೆ ನೀಡಲಿದ್ದಾರೆ.
ಪ್ರಭಾಸ್ ಮತ್ತು ಸಂಸದ ಸಂತೋಷ್ ಅವರೊಂದಿಗೆ ಅರಣ್ಯ ಸಚಿವರು ಪರಿಸರ ಉದ್ಯಾನವನಕ್ಕೆ ಅಡಿಪಾಯ ಹಾಕಿದ್ದು, ತಾತ್ಕಾಲಿಕ ವೀಕ್ಷಣಾ ಕೇಂದ್ರದಿಂದ ಅವರು ಅರಣ್ಯವನ್ನು ವೀಕ್ಷಿಸಿದರು.
ರಿಸರ್ವ್ ಫಾರೆಸ್ಟ್ಗಳನ್ನು ದತ್ತುಪಡೆದುಕೊಳ್ಳಲು ಇನ್ನೂ ಕೆಲವನ್ನು ಪ್ರೇರೇಪಿಸುವುದಾಗಿ ಸಂಸದ ಜೋಗಿನಪಲ್ಲಿ ಸಂತೋಷ್ ಕುಮಾರ್ ಹೇಳಿದರು.