ಅನಾರೋಗ್ಯದಿಂದ ಈಗಷ್ಟೇ ಚೇತರಿಸಿಕೊಂಡಿರುವ ಕಿಚ್ಚ ಸುದೀಪ್ ಮೂರು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
‘ವಿಕ್ರಾಂತ್ ರೋಣ’ ನಂತರ ಸುದೀಪ್ ತಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದರೆ, ಪರಭಾಷೆಯ ಚಿತ್ರಗಳಲ್ಲಿ ಸುದೀಪ್ ಅವರ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಪ್ರಮುಖವಾಗಿ, ರಾಮ್‌ಚರಣ್ ತೇಜ ಅಭಿನಯದ ತಮಿಳು ನಿರ್ದೇಶಕ ಶಂಕರ್ ಅವರ ಪ್ಯಾನ್ ಇಂಡಿಯಾ ಚಿತ್ರವೊಂದರಲ್ಲಿ ಸುದೀಪ್ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.
ಇದರ ಹಿಂದೆಯೇ, ಅಲ್ಲು ಅರ್ಜುನ್ ಅಭಿನಯದ ಹೊಸ ತೆಲಗು ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುವುದಕ್ಕೆ ಕಿಚ್ಚ ಅವರಿಗೆ ಆಫರ್ ನೀಡಲಾಗಿದೆಯಂತೆ. ಇದೆಲ್ಲಕ್ಕಿಂತ ಹೆಚ್ಚಾಗಿ, ‘ಆದಿಪುರುಷ್’ ಎಂಬ ರಾಮಾಯಣವನ್ನಾಧರಿಸಿದ ಚಿತ್ರದಲ್ಲಿ ಪ್ರಭಾಸ್, ರಾಮನಾಗಿ ಅಭಿನಯಿಸುತ್ತಿದ್ದು, ರಾವಣನಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಿನಿಮಾದಲ್ಲಿ ವಿಭಿಷಣನ ಪಾತ್ರ ಮಾಡುವ ಆಫರ್ ಸುದೀಪ್‌ಗೆ ಬಂದಿದೆಯಂತೆ.
ಆದರೆ ಇದ್ಯಾವುದರ ಬಗ್ಗೆಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ನಟ ಸುದೀಪ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.