ETV Bharat / sitara

ಹೃದಯ ಸಂಬಂಧಿ ಕಾಯಿಲೆ: ಸುಶಾಂತ್ ತಂದೆ ಆಸ್ಪತ್ರೆಗೆ ದಾಖಲು - ಏಷ್ಯನ್ ಆಸ್ಪತ್ರೆಯಲ್ಲಿ ಕೆ.ಕೆ.ಸಿಂಗ್ ಚಿಕಿತ್ಸೆ

ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ.ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

sushant and his father
ಸುಶಾಂತ್ ಹಾಗೂ ಅವರ ತಂದೆ
author img

By

Published : Dec 21, 2020, 8:05 PM IST

ನವದೆಹಲಿ: ಬಾಲಿವುಡ್ ನಟ, ದಿವಂಗತ ಸುಶಾಂತ್ ಸಿಂಗ್ ರಜಪೂತ್ ತಂದೆ ಕೆ.ಕೆ.ಸಿಂಗ್ ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಫರಿದಾಬಾದ್‌ನ ಏಷ್ಯನ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಕೆ.ಕೆ.ಸಿಂಗ್ ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಶೀಘ್ರದಲ್ಲೇ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಏಷ್ಯನ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಆಸ್ಪತ್ರೆಯಲ್ಲಿ ಕೆ.ಕೆ.ಸಿಂಗ್ ಇರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಬಾಲಿವುಡ್ ಡ್ರಗ್ಸ್ ಕೇಸ್​: ತಾರೆಯರ ಮೊಬೈಲ್​​ಗಳು​​ ಗುಜರಾತ್​ ಎಫ್​ಎಸ್​ಎಲ್​ಗೆ ರವಾನೆ

ಸುಶಾಂತ್ ಅಭಿಮಾನಿಗಳು ಕೆ.ಕೆ.ಸಿಂಗ್ ಅವರ ಫೋಟೋವನ್ನು ಹಂಚಿಕೊಳ್ಳುತ್ತಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತಿದ್ದಾರೆ. ಇನ್ನೂ ಕೆಲವರು ಸುಶಾಂತ್‌ ಸಾವಿಗೆ ನ್ಯಾಯ ದೊರಕಬೇಕು. ಇದರ ಜೊತೆ ಇಲ್ಲಿಯವರೆಗೆ ಆದ ಸಂಶೋಧನಾ ವರದಿಗಳನ್ನು ಬಹಿರಂಗಪಡಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.

ಸದ್ಯಕ್ಕೆ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲಾಗಿದೆ. ಆದರೂ ಈವರೆಗೆ ಒಮ್ಮತದ ಸುಶಾಂತ್ ಸಾವು ನಿಗೂಢವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.