ಇಮ್ತಿಯಾಜ್ ಅಲಿ ನಿರ್ದೇಶನದ 'ಲವ್ ಆಜ್ ಕಲ್' ಸಿನಿಮಾ ಪ್ರೇಮಿಗಳ ದಿನಾಚರಣೆ (ಫೆ.14) ರಂದು ತೆರೆ ಮೇಲೆ ಕಾಣಿಸಿಕೊಳ್ಳಲಿದೆ. ಈ ನಡುವೆ ಚಿತ್ರ ನಿರ್ದೇಶಕರು ಹೊಸ ಸುದ್ದಿ ತಿಳಿಸಿದ್ದು ಸಿನಿ ಪ್ರೇಮಿಗಳ ಕುತೂಹಲ ಹೆಚ್ಚಿಸಿದ್ದಾರೆ.
ಈ ಚಿತ್ರದಲ್ಲಿ ನಟ ರಣ್ದೀಪ್ ಹೂಡಾ ಕೂಡಾ ಕಾಣಿಸಿಕೊಳ್ತಿದ್ದಾರೆ ಅನ್ನೋದೇ ಈ ಸರ್‌ಪ್ರೈಸ್. ರಣ್ದೀಪ್ ಈ ಚಿತ್ರದಲ್ಲಿ ಯಾವ ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಕುರಿತು ಅವರು ಸುಳಿವು ನೀಡಿದ್ದಾರೆ.

ಇತ್ತೀಚೆಗೆ 'ಲವ್ ಆಜ್ ಕಲ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಅದರಲ್ಲಿ ಚಿತ್ರದ ನಾಯಕ ಮತ್ತು ನಾಯಕಿ ಕಾರ್ತಿಕ್ ಆರ್ಯನ್ ಹಾಗೂ ಸಾರಾ ಅಲಿ ಖಾನ್ ಮಾತ್ರ ಕಾಣಿಸಿಕೊಂಡಿದ್ದರು. ಪ್ರೊಮೋಷನಲ್ ವಿಡಿಯೋದಲ್ಲಿಯೂ ರಣ್ದೀಪ್ ಹೂಡಾ ಕಾಣಿಸಿಕೊಂಡಿರಲಿಲ್ಲ.
ಆದರೆ ಇತ್ತೀಚೆಗೆ ನಿರ್ದೇಶಕರೇ ಚಿತ್ರದ ತುಣುಕೊಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ರಣ್ದೀಪ್ ಚಿತ್ರದ ನಿರೂಪಣೆ ಮಾಡುವಂತೆ ತೋರಿಸಲಾಗಿದೆ.
ಇಮ್ತಿಯಾಜ್ ಅಲಿ ಅವರ ಚಿತ್ರಗಳು ಕೇವಲ ಕಥೆಯಾಗಿ ಮಾತ್ರವಲ್ಲದೇ ಭಾವನಾತ್ಮಕವಾಗಿಯೂ ಇರುತ್ತದೆ ಎಂದು ರಣ್ದೀಪ್ ಹೂಡಾ ಇಮ್ತಿಯಾಜ್ ಅವರ ಚಿತ್ರದಲ್ಲಿ ನಟಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.