ಹೈದರಾಬಾದ್: ಬಾಲಿವುಡ್ ನಟಿಯರು ಪ್ರಶಸ್ತಿ ಸಮಾರಂಭಗಳು ಮತ್ತು ಪಾರ್ಟಿಗಳಿಗೆ ಧರಿಸುವಂತಹ ಬಟ್ಟೆಗಳು ಅವರನ್ನು ಕೆಲವೊಮ್ಮೆ ಮುಜುಗರವನ್ನುಂಟು ಮಾಡುವ ಪರಿಸ್ಥಿತಿ ತಂದು ಬಿಡುತ್ತವೆ. ಅಂತಹದ್ದೇ ಸ್ಥಿತಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಎದುರಾಗಿತ್ತು.
ಶಿಲ್ಪಾ ಶೆಟ್ಟಿ ಇತ್ತೀಚೆಗೆ ನಡೆದ ಪ್ರಶಸ್ತಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ನಟಿ ಉದ್ದನೆಯ ಬಿಳಿ ಬಣ್ಣದ ಗೌನ್ ಧರಿಸಿ ಸಮಾರಂಭದಲ್ಲಿ ಭಾಗವಹಿಸಿದ್ದರು.
- " class="align-text-top noRightClick twitterSection" data="
">
ಆಗ ಮಾಧ್ಯಮದವರನ್ನು ಭೇಟಿಯಾಗಲು ಶಿಲ್ಪಾ ಮುಂದಾದಾಗ ಅವರ ಡ್ರೆಸ್ ಕಾಲಿಗೆ ಸಿಕ್ಕಿಹಾಕಿಕೊಂಡಿತ್ತು. ಈ ವೇಳೆ ಶಿಲ್ಪಾ ಬ್ಯಾಲೆನ್ಸ್ ಮಾಡಿ ಬೀಳದಂತೆ ತಮ್ಮನ್ನು ರಕ್ಷಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಶಿಲ್ಪಾ ಶೆಟ್ಟಿ ತಮ್ಮ ಉಡುಪಿನ ಕಾರಣದಿಂದ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಅನೇಕ ಘಟನೆಗಳು ನಡೆದಿವೆ. ಕೇವಲ ಶಿಲ್ಪಾ ಶೆಟ್ಟಿ ಮಾತ್ರವಲ್ಲದೆ ಹಲವು ನಟಿಯರು ಕೂಡ ಇಂತಹ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ.
ಇದನ್ನೂ ಓದಿ: 1000 ಸಂಚಿಕೆ ಪೂರ್ಣಗೊಳಿಸಿದ 'ಕೌನ್ ಬನೇಗಾ ಕರೋಡ್ಪತಿ': ಭಾವುಕರಾಗಿ ಕಣ್ಣೀರಿಟ್ಟ ಬಿಗ್ ಬಿ