ಹೈದರಾಬಾದ್ : ಬಾಲಿವುಡ್ ನಟ ಶಾರುಖ್ ಖಾನ್ ಸುಮಾರು ಐದು ವರ್ಷಗಳ ನಂತರ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಶುಕ್ರವಾರ ರಾತ್ರಿ ಮುಂಬೈನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಅವರು ಪಠಾಣ್ ಚಿತ್ರದ ಚಿತ್ರೀಕರಣಕ್ಕೆ ಸ್ಪೇನ್ಗೆ ಹಾರಿದ್ದಾರೆ.
ಪಠಾಣ್ ಚಿತ್ರದ ಸದ್ಯದ ಚಿತ್ರೀಕರಣ ಸ್ಪೇನ್ನಲ್ಲಿ ನಡೆಯುತ್ತಿದ್ದು, ಶಾರೂಕ್ ಜೊತೆಯಲ್ಲಿ ಜಾನ್ ಅಬ್ರಹಾಂ ಮತ್ತು ಆತನ ಪತ್ನಿಯೂ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಜಾನ್ ಅಬ್ರಾಹಂ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ.
- " class="align-text-top noRightClick twitterSection" data="
">
ವಿಭಿನ್ನ ನಟನಾ ಶೈಲಿಯಿಂದ ಪ್ರಸಿದ್ಧರಾದ ಶಾರುಖ್ ಖಾನ್ ಏರ್ಪೋರ್ಟ್ನಲ್ಲಿ ಕಪ್ಪು ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಇದರ ಜೊತೆಗೆ ತಲೆಗೆ ಕಡು ನೀಲಿ ಬಣ್ಣದ ಸ್ಕಾರ್ಫ್ ಕಟ್ಟಿಕೊಂಡಿದ್ದರು. ಇದರೊಂದಿಗೆ ಶಾರುಖ್ ಮಾಸ್ಕ್ ಮತ್ತು ಫ್ಯಾನ್ಸಿ ಗ್ಲಾಸ್ ಕೂಡಾ ಶಾರುಖ್ ಧರಿಸಿದ್ದರು.
ಇದನ್ನೂ ಓದಿ: 'ಟೈಗರ್ 3' ಟೀಸರ್ ಬಿಡುಗಡೆ: ಏ. 21 ಕ್ಕೆ ಘರ್ಜಿಸಲು ಸಿದ್ಧರಾದ ಸಲ್ಮಾನ್ ಖಾನ್, ಕತ್ರಿನಾ ಕೈಫ್
ಈ ಹಿಂದೆಯೇ ಶಾರುಖ್ ಸ್ಪೇನ್ಗೆ ತೆರಳುತ್ತಾರೆ ಎಂದು ಹೇಳಲಾಗುತ್ತಿತ್ತು. ಈಗ ಶೂಟಿಂಗ್ ನಡೆಯುತ್ತಿರುವ ಪಠಾಣ್ ಚಿತ್ರದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸುವ ಯತ್ನದಲ್ಲಿ ಚಿತ್ರತಂಡವಿದೆ. ಮುಂದಿನ ವರ್ಷ ಜನವರಿ 25ರಂದು ಈ ಚಿತ್ರ ಬಿಡುಗಡೆಯಾಗಲಿದೆ.