ETV Bharat / sitara

'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ಟ್ರೇಲರ್​ನಲ್ಲಿ ಮಿಂಚಿದ ಸಲ್ಮಾನ್​!​ - 'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ಟ್ರೇಲರ್​

ಎಲ್ಲೆಡೆ ಕೊರೊನಾ 2ನೇ ಅಲೆಯ ಮಾತುಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಸಿನೆಮಾ ನಿರ್ದೇಶಕರು ಮಾತ್ರ ತಮ್ಮ ಆಶಾವಾದವನ್ನು ಕಳೆದುಕೊಂಡಿಲ್ಲ. ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅಭಿನಯದ 'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ಸಿನೆಮಾ ಕೊರೊನಾದ ನಡುವೆಯೂ ಬಿಡುಗಡೆಗೆ ಸಿದ್ಧವಾಗಿದೆ.

Salman Khan pledges to 'clean the city' from drugs, crime in action-packed 'Radhe' trailer
'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ಟ್ರೇಲರ್​ನಲ್ಲಿ ಮಿಂಚಿದ ಸಲ್ಮಾನ್​!​
author img

By

Published : Apr 22, 2021, 9:12 PM IST

ಮುಂಬೈ (ಮಹಾರಾಷ್ಟ್ರ): ಸಲ್ಮಾನ್ ಖಾನ್ ಅಭಿನಯದ ವರ್ಷದ ಬಹು ನಿರೀಕ್ಷಿತ ಸಿನಿಮಾವಾದ 'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ತನ್ನ ಟ್ರೈಲರ್ ಅನ್ನು ಗುರುವಾರ ಬಿಡುಗಡೆ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀವ್ಸ್​ಗಳನ್ನು ಪಡೆದುಕೊಂಡು ಮಿಂಚಿದೆ. ಭರ್ಜರಿಯಾದ ಆ್ಯಕ್ಷನ್​ ಸನ್ನಿವೇಶಗಳು ಈ ಟ್ರೇಲರ್​ನಲ್ಲಿದ್ದು, ದಿಶಾ ಪಟಾನಿ ನಾಯಕಿಯಾಗಿ ಖಾನ್​ ಜೊತೆ ಪರದೆ ಹಂಚಿಕೊಂಡಿದ್ದಾರೆ.

ನಟ ಖಾನ್​ ಅವರು ಟ್ವೀಟರ್​ನಲ್ಲಿ ಸಿನೆಮಾದ ಟ್ರೇಲರ್​ನ್ನು ಪೋಸ್ಟ್​ ಮಾಡಿದ್ದು, #ರಾಧೆ ಟ್ರೇಲರ್​' ​ ಸುಮಾರು 2 ನಿಮಿಷ 51 ಸೆಕೆಂಡ್​ಗಳ ಕಾಲವಿದೆ. ಇದರಲ್ಲಿ ಪ್ರಾರಂಭವಾಗುವ ಸನ್ನಿವೇಶ ಮುಂಬೈನಲ್ಲಿ ಕಂಡು ಬರುವ ಡ್ರಗ್​ ಮಾಫಿಯಾದ ಜೊತೆಗೆ ಹೆಚ್ಚುತ್ತಿರುವ ಕೊಲೆಯನ್ನು ಬಿಂಬಿಸುತ್ತದೆ ಎಂದು ಬರೆದು ಕೊಂಡಿದ್ದಾರೆ.

ಸಿನೆಮಾದಲ್ಲಿ ಸಲ್ಮಾನ್​ ಖಾನ್​ ಅವರು ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಮುಂಬೈ ನಗರಕ್ಕೆ ಅಂಟಿದ ಡ್ರಗ್ಸ್​ ಕಳಂಕವನ್ನು ತೊಡೆದುಹಾಕಲು ಹೀರೋ ಪ್ರಯತ್ನಿಸುತ್ತಾನೆ. ಚಿತ್ರದಲ್ಲಿನ ಒಂದು ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಜಾಕಿ ಶ್ರಾಫ್​ ಅಭಿನಯಿಸಿದ್ದಾರೆ. ಈ ಕಾರಣದಿಂದಾಗಿ ಸಿನೆಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಟ್ರೇಲರ್​ನಲ್ಲಿ ಹೀರೋ ಸಲ್ಮಾನ್​ ಖಾನ್​ ಮತ್ತು ವಿಲನ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣದೀಪ್​ ಹೂಡಾ ನಡುವೆ ಭರ್ಜರಿ ಫೈಟ್​ ಸೀನ್​ಗಳು ಕಂಡು ಬಂದಿದ್ದು, ಇವು ಪ್ರೇಕ್ಷಕರ ಮೈನವಿರೇಳಿಸುವಂತಿವೆ. ಇಷ್ಟೆಲ್ಲ ಕುತೂಹಲಗಳನ್ನು ಕಾಯ್ದಿರಿಸಿಕೊಂಡಿರುವ ಸಿನಿಮಾ ಮುಂದಿನ ತಿಂಗಳು ( ಮೇ, 13 ರಂದು) ಒಟಿಟಿ ಮತ್ತು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದ್ದು, ಇದರ ಒಟ್ಟಾರೆ ಝಲಕ್​ ಟ್ರೇಲರ್​ನಲ್ಲಿ ಪ್ರದರ್ಶಿಸಲಾಗಿದೆ.

ಈ ಚಿತ್ರಕ್ಕೆ ಪ್ರಭುದೇವ್​ ಅವರು ನಿರ್ದೇಶನ ಮಾಡಿದ್ದು, ಕೊರೊನಾ ಕಾಲಘಟ್ಟದ ನಂತರ ಅವಕಾಶ ಸಿಕ್ಕರೆ ಸಿನೆಮಾ ಥಿಯೇಟರ್​ಗಳಲ್ಲೇ ರಾಧೆ ತೆರೆಕಾಣಲಿದೆ. ಉಳಿದಂತೆ ಡಿಟಿಹೆಚ್​, ಒಟಿಟಿ ಫ್ಲಾಟ್​ಫಾರ್ಮ್​ಗಳಲ್ಲಿ ಹಣವನ್ನು ಪಾವತಿಸಿ ಸಿನಿಮಾ ನೋಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಓದಿ: ಐದು ತಿಂಗಳಲ್ಲಿ 'ಇಂಡಿಯನ್​ 2' ಚಿತ್ರದ ಶೂಟಿಂಗ್ ಮುಗಿಸುತ್ತೇವೆ: ನಿರ್ದೇಶಕ ಶಂಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.