ಹೈದರಾಬಾದ್ : ನಿರ್ಮಾಪಕ ಮಹೇಶ್ ಭಟ್ ಹಾಗೂ ಮುಖೇಶ್ ಭಟ್ಗೆ ವೈಮನಸ್ಸಿದೆ ಎಂಬ ವದಂತಿ ವಿಚಾರವಾಗಿ ನಟ ಇಮ್ರಾನ್ ಹಶ್ಮಿ ಪ್ರತಿಕ್ರಿಯಿಸಿದ್ದಾರೆ.
ಯಾವುದೂ ಶಾಶ್ವತವಲ್ಲ, ಎಲ್ಲದಕ್ಕೂ ಕೊನೆ ಎಂಬುದು ಇದ್ದೇ ಇರುತ್ತದೆ. ನಾನು ಇವರಿಬ್ಬರೊಂದಿಗೂ ಮಾತನಾಡುತ್ತೇನೆ. ಮುಂಬೈ ಸಾಗಾ ಚಿತ್ರೀಕರಣಕ್ಕೆ ಬರುವುದಕ್ಕೂ ಮುನ್ನ ಮುಖೇಶ್ ನನಗೆ ಕರೆ ಮಾಡಿ ಮಾತನಾಡಿದ್ದರು.
ಮಹೇಶ್ ಭಟ್ ಅವರೊಂದಿಗೂ ನಿರಂತರ ಸಂಪರ್ಕ ಹೊಂದಿದ್ದೇನೆ. ಅವರಿಬ್ಬರೂ ಮತ್ತೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಇಮ್ರಾನ್ ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಭಟ್ ಸಹೋದರರು 1987ರಲ್ಲಿ ತಮ್ಮ ವಿಶೇಶ್ ಪ್ರೊಡಕ್ಷನ್ ಫಿಲ್ಮ್ ಪ್ರೊಡಕ್ಷನ್ ಪ್ರಾರಂಭಿಸಿ 53 ಚಿತ್ರಗಳನ್ನು ನಿರ್ಮಾಣ ಮಾಡಿ ಸಿನಿರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಆದರೆ, ಇತ್ತೀಚೆಗೆ ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ.
ಇಮ್ರಾನ್ ಅವರ ಚೆಹ್ರೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕೋವಿಡ್ ಅಬ್ಬರ ಹೆಚ್ಚಿರುವುದರಿಂದ ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.