ಕೊರೊನಾ ಲಾಕ್ಡೌನ್ ಆದಾಗಿನಿಂದ ಅಬುಧಾಬಿಯ ಸ್ನೇಹಿತೆಯ ಮನೆಯಲ್ಲಿ ಉಳಿದುಕೊಂಡಿದ್ದ ಬಾಲಿವುಡ್ ನಟಿ ಮೌನಿ ರಾಯ್ ಕೊನೆಗೂ 4 ತಿಂಗಳ ಬಳಿಕ ವಿಮಾನ ಹತ್ತಿದ್ದಾರೆ.
ಫ್ಲೈಟ್ನಲ್ಲಿ ಕುಳಿತಿರುವ ಬೂಮರಿಂಗ್ ವಿಡಿಯೋವೊಂದನ್ನು ಮೌನಿರಾಯ್ ಸೋಮವಾರ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಷೇರ್ ಮಾಡಿಕೊಂಡಿದ್ದರು. ಈ ವೇಳೆ ಆಕೆ ಫೇಸ್ಶೀಲ್ಡ್ , ಮಾಸ್ಕ್ ಹಾಗೂ ಗ್ಲೌಸ್ ಹಾಕಿ ಕುಳಿತಿದ್ದಾರೆ. ಮೂಲಗಳ ಪ್ರಕಾರ ಮುಖ್ಯವಾದ ಕೆಲಸ ಇರುವುದರಿಂದ ಮೌನಿರಾಯ್ ಲಂಡನ್ಗೆ ತೆರಳಿದ್ದಾರೆ ಎನ್ನಲಾಗಿದೆ.
ಮ್ಯಾಗಜಿನ್ವೊಂದರ ಫೋಟೋಶೂಟ್ಗಾಗಿ ಮಾರ್ಚ್ನಲ್ಲಿ ಅಬುಧಾಬಿಗೆ ತೆರಳಿದ್ದ ಮೌನಿರಾಯ್ ಭಾರತದಲ್ಲಿ ಲಾಕ್ಡೌನ್ ಆಗಿದ್ದರಿಂದ ತಾವಿರುವ ಸ್ಥಳದಲ್ಲೇ ಉಳಿದುಕೊಂಡಿದ್ದರು. ಫೋಟೋಶೂಟ್ ಆದ ನಂತರ ಏಪ್ರಿಲ್ 15 ರಲ್ಲಿ ಮತ್ತೆ ನನಗೆ ಅಬುಧಾಬಿಯಲ್ಲೇ ಕೆಲಸ ಇದ್ದಿದ್ದರಿಂದ ಸ್ನೇಹಿತೆಯ ಮನೆಯಲ್ಲಿ ಉಳಿದಿದ್ದೆ ಆದರೆ ಎಲ್ಲಾ ಕಡೆ ಲಾಕ್ಡೌನ್ ಆಗಿ ಫ್ಲೈಟ್ಗಳು ಕ್ಯಾನ್ಸಲ್ ಆಗಬಹುದು ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ ಎನ್ನುತ್ತಾರೆ ಮೌನಿರಾಯ್.
ನಾನು ಅಬುಧಾಬಿಯಲ್ಲಿ ಉಳಿದಿದ್ದರೆ ನನ್ನ ಕುಟುಂಬ ಪಶ್ಚಿಮ ಬಂಗಾಳದಲ್ಲಿ ಇತ್ತು. ನಾನು ಪ್ರತಿದಿನ ಅವರೊಂದಿಗೆ ಸಂಪರ್ಕದಲ್ಲಿದ್ದೆ. ನಾನು ವಿದೇಶದಲ್ಲಿದ್ದರೂ ನನ್ನ ಮನಸ್ಸು ಮಾತ್ರ ಭಾರತದಲ್ಲೇ ಇತ್ತು. ಆದಷ್ಟು ಬೇಗ ಭಾರತಕ್ಕೆ ವಾಪಸಾಗುತ್ತೇನೆ ಎಂದು ಮೌನಿ ಭರವಸೆ ವ್ಯಕ್ತಪಡಿಸಿದರು. ಮೌನಿರಾಯ್ ಕರಿಯರ್ ವಿಚಾರಕ್ಕೆ ಬರುವುದಾದರೆ ಅಮಿತಾಬ್ ಬಚ್ಚನ್, ಆಲಿಯಾ ಭಟ್, ರಣಬೀರ್ ಕಪೂರ್ ಜೊತೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.