ETV Bharat / sitara

ಕೋವಿಡ್​ 19 ಭೀತಿ... ಬಿ-ಟೌನ್​ ಮಂದಿ ಏನಂದ್ರು ಗೊತ್ತಾ! - ನಟ ಅನುಪಮ್​ ಕೇರ್

ಹಿರಿಯ ಚಲನಚಿತ್ರ ನಿರ್ದೇಶಕ ಮಹೇಶ್ ಭಟ್ ಅವರು ಕಠಿಣ ಸಂದರ್ಭಗಳನ್ನು ಎದುರಿಸುವ ಮಾರ್ಗಗಳ ಬಗ್ಗೆ ಕವಿತೆ ಬರೆದರೆ, ಅನುಪಮ್ ಖೇರ್ ಸೋಮವಾರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸಾಂಕ್ರಾಮಿಕ ಪರಿಸ್ಥಿತಿಗಳಲ್ಲಿ ಅಭಿಮಾನಿಗಳು ಶಾಂತವಾಗಿರಲು ಕೋರಿದ್ದಾರೆ.

Anupam Kher
ಮಹೇಶ್ ಭಟ್
author img

By

Published : Mar 16, 2020, 6:31 PM IST

ಮುಂಬೈ: ಜಾಗತಿಕವಾಗಿ ಕೋವಿಡ್​ -19 ಪ್ರಕರಣಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಬಾಲಿವುಡ್​ ಮಂದಿ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ವೈರಸ್​ ಕುರಿತಂತೆ ಜಾಗೃತಿ ಮೂಡಿಸಿದ್ದಾರೆ. ಯಾರ್ಯಾರು ಏನಂದ್ರು ಅದರ ಕುರಿತಾದ ಒಂದು ವರದಿ ನಿಮಗಾಗಿ

"ಏಕ್ ಬಾರ್ ಜೋ ಶುರು ಹೋ ಜಾಯೆ, ಖೌಫ್-ಸೆ-ಖೌಫ್ ಕಾ ಫಿಲಾನಾ. ಬಹೂತ್ ಮುಷ್ಕಿಲ್ ಹೋ ಜಾತಾ ಹೈ, ಫಿರ್ ಉಸ್ಕಾ ಟೆಹೆರ್ನಾ" ಎಂದು ಸಡಕ್​ ಸಿನಿಮಾ ನಿರ್ದೇಶಕ ಮಹೇಶ್​ ಭಟ್ ಟ್ವಿಟರ್​ನಲ್ಲಿ ಕೊರೊನಾ ಬಗೆಗಿನ ​ಕವಿತೆಯೊಂದನ್ನ ಹಂಚಿಕೊಂಡಿದ್ದಾರೆ.

ನಟ ಅನುಪಮ್​ ಕೇರ್​ ತಮ್ಮ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಕೊರೊನಾ ಬಗ್ಗೆ ಸಂದೇಶವಿರುವ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. "ಕೆಲವೊಮ್ಮೆ ನಿಮ್ಮೊಳಗೆ ಒಂದು ನಿರ್ದಿಷ್ಟ ರೀತಿಯ ಭೀತಿ ಇದ್ದಾಗ ನಾವು ಭಯಪಡುವುದು ಸಹಜ. ಭಯ ಬಿಟ್ಟು ಒಂದು ನಡಿಗೆ ಹೋಗಿ, ಇದು ನಾರ್ಮಲ್​ ಆಗಿರಲು ಸಹಕಾರಿಯಾಗುತ್ತದೆ. ಭಯದ ಹೊರತಾಗಿಯೂ ಜೀವನ ಮುಂದುವರಿಯಬೇಕಾಗಿದೆ ... #LoveInTheTimesOfCorona ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಇನ್ನು ಬಾಲಿವುಡ್​ ಬ್ಯೂಟಿ ಮಲೈಕಾ ಅರೋರಾ, ತನ್ನ ಕಿಟಕಿಯಿಂದ ಕುಳಿತು ತನ್ನ ಮುದ್ದಿನ ನಾಯಿಯೊಂದಿಗೆ ಸೂರ್ಯನನ್ನು ಕಾಣೋ ಫೋಟೋ ಶೇರ್​ ಮಾಡಿದ್ದು, "ಕೊರೊನಾ ಸಮಯದಲ್ಲಿ ಪ್ರೀತಿ # covid19 #selfquarantine #caspernme ಎಂಬ ಶೀರ್ಷಿಕೆಯನ್ನೂ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.