ಮುಂಬೈ: ಹಿಂದಿ ಬಿಗ್ಬಾಸ್ ಸೀಸನ್ 14ರ ವಿನ್ನರ್ ಕಿರುತೆರೆ ನಟಿ ರುಬಿನಾ ದಿಲೈಕ್ 'ಅರ್ಧ್' ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
'ಅರ್ಧ್' ಸಂಗೀತ ಸಂಯೋಜಕ ಮತ್ತು ಗಾಯಕ ಪಲಾಶ್ ಮುಚ್ಚಲ್ ಅವರ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಚಿತ್ರವಾಗಿದೆ. ದಿಲೈಕ್ಗೆ ಜನಪ್ರಿಯ ಕಿರುತೆರೆ ನಟ ತೇಜ್ವಾನಿ ಮತ್ತು ಹಂಗಮಾ 2 ರ ನಟ ರಾಜ್ಪಾಲ್ ಯಾದವ್ ಚಿತ್ರದಲ್ಲಿ ಜೊತೆಯಾಗಲಿದ್ದಾರೆ.
ಓದಿ : ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ಬೋಲ್ಡ್ ಬ್ಯೂಟಿ ನೇಹಾ ಧೂಪಿಯಾ
ತನ್ನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಚಿತ್ರ ತಂಡದ ಫೋಟೋ ಹಂಚಿಕೊಂಡಿರುವ ಮುಚ್ಚಲ್, ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಅರ್ಧ್ ಚಿತ್ರ ಮುಂದಿನ ಸೆಪ್ಟೆಂಬರ್ನಲ್ಲಿ ಸೆಟ್ಟೇರಲಿದೆ.
- " class="align-text-top noRightClick twitterSection" data="Psychiatric Patients At Increased Risk
">Psychiatric Patients At Increased Risk
ಬಿಗ್ಬಾಸ್ ಸೀಸನ್ 14 ರ ವಿನ್ನರ್ ಆಗುವ ಮೊದಲೇ ದಿಲೈಕ್ ಕಿರುತೆರೆಯಲ್ಲಿ ತನ್ನದೇ ಚಾಪು ಮೂಡಿಸಿದ್ದರು. ಝೀ ಟಿವಿಯ ಚೋಟಿ ಬಾಹು ಮತ್ತು ಶಕ್ತಿ, ಕಲರ್ಸ್ ಟಿವಿಯ ಅಸ್ತಿತ್ವ ಕೆ ಎಹ್ಸಾಸ್ ಕಿ ಸೇರಿದಂತೆ ಖ್ಯಾತ ಟಿವಿ ಶೋಗಳಲ್ಲಿ ದಿಲೈಕ್ ಕಾಣಿಸಿಕೊಂಡಿದ್ದಾರೆ.