ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟ ಆದಿತ್ಯ ಸೀಲ್ ಅವರು ತಮ್ಮ ಪ್ರೇಯಸಿ, ನಟಿ ಅನುಷ್ಕಾ ರಂಜನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು(Aditya Seal-Anushka Ranjan Wedding), ವಿವಾಹ ಸಂಭ್ರಮದಲ್ಲಿ ಆಲಿಯಾ ಭಟ್, ಆಥಿಯಾ ಶೆಟ್ಟಿ, ವಾಣಿ ಕಪೂರ್, ರಿಯಾ ಚರ್ಕವರ್ತಿ, ನಟಿ ಭೂಮಿ ಪೆಡ್ನೇಕರ್, ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಸೇರಿ ಅನೇಕ ಬಿ-ಟೌನ್ ತಾರೆಯರು ಪಾಲ್ಗೊಂಡಿದ್ದರು.
ತಿಳಿ ನೇರಳೆ ಬಣ್ಣದ ಲೆಹೆಂಗಾದಲ್ಲಿ ವಧು ಅನುಷ್ಕಾ ರಂಜನ್, ಬಳಿ-ಹಳದಿ ಮಿಶ್ರಿತ ಶೆರ್ವಾನಿ ಧರಿಸಿ, ಬಿಳಿ ಪೇಟ ತೊಟ್ಟು ವರ ಆದಿತ್ಯ ಸೀಲ್ ಯಾವ ರಾಜಕುಮಾರನಿಗೂ ಕಮ್ಮಿ ಇಲ್ಲ ಎಂಬಂತೆ ರೆಡಿಯಾಗಿದ್ದರು.
ವಧು ಅನುಷ್ಕಾ ರಂಜನ್ರ ಆಪ್ತ ಸ್ನೇಹಿತೆಯಾಗಿರುವ ನಟಿ ಆಲಿಯಾ ಭಟ್ ಹಳದಿ ಸೀರೆ ಹಾಗೂ ಹಳದಿ ಲೆಹೆಂಗಾದಲ್ಲಿ ಗೊಂಬೆಯಂತೆ ಕಾಣುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ.
ನಟ ಸುನಿಲ್ ಶೆಟ್ಟಿ ಮಗಳು, ನಟಿ ಆಥಿಯಾ ಶೆಟ್ಟಿ ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದು, ನಟಿ ವಾಣಿ ಕಪೂರ್ ಬಿಳಿ ಬಣ್ಣದ ಲೆಹೆಂಗಾದಲ್ಲಿ ಮಿಂಚಿದರು.
ಸುಶಾಂತ್ ಸಿಂಗ್ ಡೆತ್ ಕೇಸ್ ಸಂಬಂಧದ ಡ್ರಗ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ನಟಿ ರಿಯಾ ಚರ್ಕವರ್ತಿ ಕೂಡ ತಿಳಿ ಹಳದಿ ಲೆಹೆಂಗಾ ಧರಿಸಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಆದಿತ್ಯ ಮತ್ತು ಅನುಷ್ಕಾ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. 'ವೆಡ್ಡಿಂಗ್ ಪುಲಾವ್', 'ಬಟ್ಟಿ ಗುಲ್ ಮೀಟರ್ ಚಾಲು' ಚಿತ್ರಗಳಲ್ಲಿ ಅನುಷ್ಕಾ ನಟಿಸಿದ್ದರು.
'ತುಮ್ ಬಿನ್ 2', 'ಸ್ಟೂಡೆಂಟ್ ಆಫ್ ದಿ ಇಯರ್ 2' ಸಿನಿಮಾಗಳಲ್ಲಿ ಆದಿತ್ಯ ನಟಿಸಿದ್ದಾರೆ. ಇವರಿಬ್ಬರೂ ಫಿಟ್ರಾತ್ (Fittrat) ಎಂಬ ವೆಬ್ ಶೋನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.