ETV Bharat / sitara

Adipurush: ಪ್ರಭಾಸ್‌ ಅಭಿನಯದ 'ಆದಿಪುರುಷ್' ಶೂಟಿಂಗ್‌ ಮುಕ್ತಾಯ

author img

By

Published : Nov 11, 2021, 5:09 PM IST

ಟಾಲಿವುಡ್ ನಟ, ಡಾರ್ಲಿಂಗ್‌ ಪ್ರಭಾಸ್‌ (Actor Prabhas) ಅಭಿನಯದ ಆದಿಪುರುಷ್(Adipurush) ಸಿನಿಮಾದ 103 ದಿನಗಳ ಶೂಟಿಂಗ್‌ ಮುಗಿದಿದೆ ಎಂದು ನಿರ್ದೇಶಕ ಓಂ ರಾವತ್‌ ಘೋಷಿಸಿದ್ದಾರೆ.

'Adipurush' shoot wrapped after 103 days
ಡಾರ್ಲಿಂಗ್‌ ಪ್ರಭಾಸ್‌ ಅಭಿನಯದ ಆದಿಪುರುಷ್ ಸಿನಿಮಾದ 103 ದಿನಗಳ ಶೂಟಿಂಗ್‌ ಮುಕ್ತಾಯ - ನಿರ್ದೇಶಕ ಓಂ ರಾವತ್‌ ಟ್ವೀಟ್‌

ಮುಂಬೈ: 103 ದಿನಗಳ ಚಿತ್ರೀಕರಣದ ನಂತರ ಡಾರ್ಲಿಂಗ್‌ ಪ್ರಭಾಸ್‌ ನಟನೆಯ (Actor Prabhas) ಬಹು ನಿರೀಕ್ಷಿತ ಆದಿಪುರುಷ್(Adipurush) ಚಿತ್ರದ ಶೂಟಿಂಗ್‌ ಮುಕ್ತಾಯವಾಗಿದೆ ಎಂದು ನಿರ್ದೇಶಕ ಓಂ ರಾವತ್ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಕೃತಿ ಸನನ್, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಓಂ ರಾವತ್‌, ಚಿತ್ರ ತಂಡದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆದಿಪುರುಷನ ಚಿತ್ರೀಕರಣದ ಅದ್ಭುತ ಪ್ರಯಾಣವು ಅಂತಿಮ ಗೆರೆ ತಲುಪಿದೆ. ನಾವು ರಚಿಸಿರುವ ಮ್ಯಾಜಿಕ್‌ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದನ್ನು ಕಾಯಲು ಇನ್ನು ಸಾಧ್ಯವಿಲ್ಲ ಎಂದಿದ್ದಾರೆ.

ಓಂ ರಾವತ್‌ ನಿರ್ದೇಶನದ 'ಆದಿಪುರುಷ್'(Adipurush) ಪೌರಾಣಿಕ ಚಲನಚಿತ್ರವಾಗಿದೆ. ಕಳೆದ ವರ್ಷದ ಬ್ಲಾಕ್‌ ಬಸ್ಟರ್ 'ತನ್ಹಾಜಿ: ದಿ ಅನ್‌ಸಂಗ್ ವಾರಿಯರ್' ನಂತರ ಈ ಚಿತ್ರವು ಓಂ ಅವರ ಹೊಸ ನಿರ್ದೇಶನದ ಸಾಹಸವಾಗಿದೆ. ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಸಿಂಗ್‌ ಲಕ್ಷ್ಮಣನಾಗಿ ಅಭಿನಯಿಸಿದ್ದಾರೆ. ನಟ ಕೃತಿ ಸೀತೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೈಫ್ ಅಲಿ ಖಾನ್‌ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಚಿತ್ರದ ನಿರ್ಮಾಣ ಆರಂಭಿಸಿದ್ದ ಓಂ, 2022ರ ಆಗಸ್ಟ್ 11ರಂದು ಆದಿಪುರುಷ್ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಭೂಷಣ್ ಕುಮಾರ್, ಓಂ, ಪ್ರಸಾದ್ ಸುತಾರ್ ಹಾಗೂ ರಾಜೇಶ್ ನಾಯರ್ ನಿರ್ಮಿಸಿರುವ ಚಿತ್ರವು ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.