ನವದೆಹಲಿ: ಪಲ್ಮನರಿ ಹೈಪರ್‌ಟೆನ್ಷನ್‌ಗೆ ಚಿಕಿತ್ಸೆ ನೀಡಲು ಬಳಸುವ ಸಿಲ್ಡೆನಾಫಿಲ್ ಔಷಧಿಗೆ ಅಮೆರಿಕದ ಆರೋಗ್ಯ ನಿಯಂತ್ರಕದಿಂದ ಅನುಮೋದನೆ ದೊರೆತಿರುವುದಾಗಿ ಝೈಡಸ್ ಲೈಫ್‌ಸೈನ್ಸ್ ಶನಿವಾರ ತಿಳಿಸಿದೆ. ಉತ್ಪನ್ನವನ್ನು ಮಾರಾಟ ಮಾಡಲು ಕಂಪನಿಯು ಯುಎಸ್ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಯುಎಸ್‌ಎಫ್‌ಡಿಎ) ನಿಂದ ಅನುಮೋದನೆ ಪಡೆದಿದೆ ಎಂದು ಔಷಧ ತಯಾರಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಲ್ಡೆನಾಫಿಲ್ ದ್ರವ ಔಷಧವನ್ನು ಶ್ವಾಸಕೋಶದಲ್ಲಿನ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ಶ್ವಾಸಕೋಶದಲ್ಲಿನ ರಕ್ತನಾಳಗಳನ್ನು ವಿಸ್ತರಿಸುವ ಮತ್ತು ರಿಲ್ಯಾಕ್ಸ್ ಮಾಡುತ್ತದೆ. ಇದರಿಂದ ರಕ್ತವು ಹೆಚ್ಚು ಸುಲಭವಾಗಿ ಹರಿಯುವಂತೆ ಮಾಡುತ್ತದೆ. ಶ್ವಾಸಕೋಶದಲ್ಲಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದರಿಂದ ಹೃದಯ ಮತ್ತು ಶ್ವಾಸಕೋಶಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ವ್ಯಾಯಾಮ ಮಾಡುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ಬ್ಯಾಡ್ಡಿ ಮೂಲದ ಉತ್ಪಾದನಾ ಘಟಕದಲ್ಲಿ ಔಷಧವನ್ನು ತಯಾರಿಸಲಾಗುವುದು ಎಂದು ಝೈಡಸ್ ಹೇಳಿದೆ. IQVIA ಡಾಟಾದ ಪ್ರಕಾರ, ದ್ಅರವ ಔಷಧಿ ಸಿಲ್ಡೆನಾಫಿಲ್ ಯುಎಸ್ನಲ್ಲಿ USD 65 ಮಿಲಿಯನ್ನಷ್ಟು ವಾರ್ಷಿಕ ಮಾರಾಟವನ್ನು ಹೊಂದಿದೆ.
ಇದನ್ನೂ ಓದಿ: ಅಮೆರಿಕ ವಿಜ್ಞಾನಿಗಳಿಂದ ರಕ್ತಪರೀಕ್ಷೆ ಮೂಲಕ ಕ್ಯಾನ್ಸರ್ ಪತ್ತೆ ವಿಧಾನ ಶೋಧ