ETV Bharat / science-and-technology
ಹೊಸ ಇತಿಹಾಸ ಸೃಷ್ಟಿಸುತ್ತೇವೆ; ಟ್ವಿಟರ್ ಸಿಇಒ ಲಿಂಡಾ ಯಾಕರಿನೊ - ಟ್ವಿಟರ್ ಇತಿಹಾಸ ಸೃಷ್ಟಿಸಲಿದೆ
ಟ್ವಿಟರ್ಗಿಂತ ಯಾವುದು ಇಲ್ಲ. ಇದು ಜನರಿಗಾಗಿ ನಮ್ಮೆಲ್ಲರಿಗಾಗಿ. ನಾನು ನಿಮ್ಮೆಲ್ಲರಿಗಾಗಿ ಇಲ್ಲಿದ್ದೇನೆ ಎಂದು ಯಾಕರಿನೊ ತಿಳಿಸಿದ್ದಾರೆ.

ನವದೆಹಲಿ: ಟ್ವಿಟರ್ಗಿಂತ ಬೇರೆ ಯಾವುದೇ ಫ್ಲಾಟ್ಫಾರ್ಮ್ಗಳು ಇಂದು ಶಕ್ತಿಯುತವಾಗಿಲ್ಲ. ಟ್ವಿಟರ್ ಇತಿಹಾಸ ಸೃಷ್ಟಿಸಲಿದೆ ಎಂದು ಟ್ವಿಟರ್ ಹೊಸ ಸಿಇಒ ಲಿಂಡಾ ಯಕರಿನೊ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಸ್ಕ್ ಟ್ವಿಟರ್ ಸ್ಥಾನದಿಂದ ಕೆಳಗಿಳಿದ ಬಳಿ ಲಿಂಡಾ ಯಕರಿನೊ ಅವರನ್ನು ನೇಮಕ ಮಾಡಿದ್ದಾರೆ. ಈ ವಾರದ ಆರಂಭದಿಂದ ಹುದ್ದೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಈ ವೇಳೆ ಮಾತನಾಡಿರುವ ಅವರು, ಇಂದು ಯಾವುದೇ ಫ್ಲಾಟ್ಫಾರ್ಮ್ಗಳು ಟ್ವಿಟರ್ನಷ್ಟು ಪ್ರಬಲವಾಗಿಲ್ಲ. ನಾನು ಈ ವಾರ ಭೇಟಿ ಮಾಡಿದ ಜನರಿಗೆ ಇದಕ್ಕಿಂತ ಅದ್ಬುತ ಸ್ಥಳವಿಲ್ಲ. ಹೀಗೆ ಇರಿ, ನಾವು ಇತಿಹಾಸ ಸೃಷ್ಟಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಟ್ವಿಟರ್ನ ಯೋಜನೆಗಳು ಸ್ಪಟಿಕದಷ್ಟೇ ಶುದ್ಧವಾಗಿದೆ. ಪ್ರತಿಯೊಬ್ಬರನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಕ್ರಿಯೆಟರ್, ಅಧ್ಯಕ್ಷೀಯ ಅಭ್ಯರ್ಥಿಗಳು, ಪ್ರತಿಯೊಬ್ಬರು ನಡುವೆ ಇದ್ದಾರೆ ಎಂದು ಯಕೊರಿನೊ ತಿಳಿಸಿದ್ದಾರೆ.
ಈ ಹಿಂದೆ ಎನ್ಬಿಸಿ ಯುನಿವರ್ಸಲ್ನ ಜಾಗತಿಕ ಜಾಹೀರಾತು ಮತ್ತು ಭಾಗಿದಾರರ ಅಧ್ಯಕ್ಷರಾಗಿ ಯಾಕರಿನೊ ಸೇವೆ ಸಲ್ಲಿಸಿದ್ದರು. ಯಕರಿನೊ ಟ್ವಿಟರ್ ಪ್ರವೇಶಿಸುತ್ತಿದ್ದಂತೆ ತಮ್ಮ ಹಳೆಯ ಸಹೋದ್ಯೋಗಿಯಾಗಿದ್ದ ಎನ್ಬಿಸಿ ಯುನಿರ್ಸಲ್ ಕಾರ್ಯಕಾರಿ ಉಪಾಧ್ಯಕ್ಷರನ್ನು ಕೂಡ ಟ್ವಿಟರ್ನಲ್ಲಿ ನೇಮಕ ಮಾಡಿದ್ದಾರೆ.
ಟ್ವಿಟರ್ನ ಮೊದಲ ವಾರದ ನಶೆಯಲ್ಲಿದ್ದೇನೆ. ಟ್ವಿಟರ್ಗಿಂತ ಯಾವುದು ಇಲ್ಲ. ಇದು ಜನರಿಗಾಗಿ ನಮ್ಮೆಲ್ಲರಿಗಾಗಿ. ನಾನು ನಿಮ್ಮೆಲ್ಲರಿಗಾಗಿ ಇಲ್ಲಿದ್ದೇನೆ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಯಾಕರಿನೊ ಟ್ವಿಟರ್ಗೆ ಸೇರಿದ ಸಮಯದಲ್ಲಿ ಏಪ್ರಿಲ್ನಲ್ಲಿ ಅಮೆರಿಕದ ಜಾಹೀರಾತು ಮಾರಾಟ ಶೇ59ರಷ್ಟು ಕುಸಿದಿದೆ. ಮೇ ತಿಂಗಳಲ್ಲೂ ಕೂಡ ಇದರಲ್ಲಿ ಹೆಚ್ಚಿನ ಬೆಳವಣಿಗೆ ಕಂಡಿಲ್ಲ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಟ್ವಿಟರ್ನ ಅಮೆರಿಕ ಜಾಹೀರಾತು ಆದಾಯ ಏಪ್ರಿಲ್1 ರಿಂದ ಐದು ವಾರ ಕಾಲ ಮತ್ತು ಮೇ ಮೊದಲ ವಾರದಲ್ಲಿ 88 ಮಿಲಿಯನ್ ಡಾಲರ್ ಇದೆ. ಈ ವರ್ಷದ ಆರಂಭಕ್ಕೆ ಹೋಲಿಕೆ ಮಾಡಿದರೆ, ಶೇ 59ರಷ್ಟು ಕುಸಿದಿದೆ.
ಆಂತರಿಕ ಮುನ್ಸೂಚನೆಗಳು ತಿಳಿಸುವಂತೆ, ಕಂಪನಿ ಯೋಜನೆಗಳು ಜಾಹೀರಾತು ಮಾರಾಟ ಕಡಿಮೆಯಾಗುತ್ತಿದೆ. ಹೊಸ ಮುಖ್ಯ ಕಾರ್ಯದರ್ಶಿಗೆ ಇದು ದೊಡ್ಡ ಸವಾಲಿನ ಸಮಯವಾಗಿದೆ ಎಂದಿದ್ದಾರೆ.
ಕಳೆದ ತಿಂಗಳು ಮಾತನಾಡಿದ್ದ ಯಾಕರೊನೊ, ನಾವು ಟ್ವಿಟರ್ 2.0 ನಿರ್ಮಾಣದ ತಯಾರಿ ನಡೆಸುತ್ತಿದ್ದು, ಮಸ್ಕ್ ಮತ್ತು ಲಕ್ಷಾಂತರ ಫ್ಲಾಟ್ಫಾರ್ಮ್ ಬಳಕೆದಾರರ ಜೊತೆ ವ್ಯಾಪಾರ ಬದಲಾವಣೆ ನಡೆಸುತ್ತೇವೆ. ತಮ್ಮ ಅನುಭವದಿಂದ ಟ್ವಿಟರ್ಗೆ ಹೊಸತನ ತರಲು ಎದುರು ನೋಡುತ್ತಿದ್ದೇನೆ. ಟ್ವಿಟರ್ 2.0 ಅನ್ನು ನಿರ್ಮಿಸಲು ಇಡೀ ತಂಡದೊಂದಿಗೆ ನಾನು ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಟ್ವಿಟರ್ 2.0 ಅನ್ನು ನಿರ್ಮಿಸಲು ಮತ್ತು ಮಸ್ಕ್ ಜೊತೆ ಲಕ್ಷಾಂತರ ಪ್ಲಾಟ್‌ಫಾರ್ಮ್ ಬಳಕೆದಾರರೊಂದಿಗೆ ವ್ಯಾಪಾರವನ್ನು ನಿರ್ವಹಿಸಲು ಸಿದ್ಧಳಾಗಿದ್ದೇನೆ ಎಂದು ತಿಳಿಸಿದ್ದರು.
ಉತ್ತಮ ಭವಿಷ್ಯ ರೂಪಿಸಲು ನಿಮ್ಮ ದೂರದೃಷ್ಟಿಗಳಿಂದ ನಾನು ಉತ್ಸುಕಳಾಗಿದ್ದೇನೆ. ಈ ದೃಷ್ಟಿಕೋನವನ್ನು ಟ್ವಿಟರ್ ಮತ್ತು ವ್ಯವಹಾರಗಳಿಗೆ ಪರಿವರ್ತಿಸಲು ಸಹಾಯ ಮಾಡಲು ಉತ್ಸಕಳಾಗಿದ್ದೇನೆ ಎಂದು ಟ್ವೀಟ್ ಕೂಡ ಮಾಡಿ ತಿಳಿಸಿದ್ದರು.
ಇದನ್ನೂ ಓದಿ: ಕಂಟೆಂಟ್ ಕ್ರಿಯೇಟರ್ಗಳೊಂದಿಗೆ ಬಳಕೆದಾರರ ಇಮೇಲ್ ಐಡಿ ಶೇರ್: ಟ್ವಿಟರ್ ಘೋಷಣೆ