ETV Bharat / science-and-technology

ಟ್ವಿಟರ್ ಯೂಟರ್ನ್: ಪೇ ಮಾಡದಿದ್ದರೂ ಅನೇಕರಿಗೆ ಮರಳಿ ಸಿಕ್ಕ ಬ್ಲೂಟಿಕ್! - ಬ್ಲೂ ಟಿಕ್ ಮರಳಿ ಬಂದಿವೆ

ಪಾವತಿ ಮಾಡಿದವರಿಗೆ ಮಾತ್ರ ಬ್ಲೂಟಿಕ್ ನೀಡಲಾಗುವುದು ಎಂದು ಹೇಳಿದ್ದ ಎಲೋನ್ ಮಸ್ಕ್​ ಟ್ವಿಟರ್​ನಲ್ಲಿನ ಎಲ್ಲ ಸಾಂಪ್ರದಾಯಿಕ ಬ್ಲೂಟಿಕ್​ಗಳನ್ನು ರದ್ದು ಮಾಡಿದ್ದರು. ಆದರೆ ಇದೀಗ ಹಲವಾರು ಖ್ಯಾತನಾಮರ ಟ್ವಿಟರ್ ಖಾತೆಗೆ ಬ್ಲೂಟಿಕ್ ಮರಳಿ ಕಾಣಿಸಿಕೊಂಡಿದೆ.

Blue tick reappears for many influential users on Twitter

author img

By

Published : Apr 23, 2023, 3:04 PM IST

ನವದೆಹಲಿ : ಟ್ವಿಟರ್‌ನಲ್ಲಿ ನಡೆಯುತ್ತಿರುವ ಬ್ಲೂ ಟಿಕ್ ಪ್ರಹಸನವು ಈಗ ಮತ್ತೊಂದು ಟ್ವಿಸ್ಟ್ ತೆಗೆದುಕೊಂಡಿದೆ. ಹಲವಾರು ಪ್ರಖ್ಯಾತ ಮತ್ತು ಪ್ರಭಾವಿ ಟ್ವಿಟರ್​ ಬಳಕೆದಾರರ ಬ್ಲೂಟಿಕ್ ಮರಳಿ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ. ಟ್ವಿಟರ್​ನ ಪೇಡ್ ಸಬ್​ಸ್ಕ್ರೈಬರ್ ಆಗಿರದಿದ್ದರೂ ಸಹ ಇವರಿಗೆ ಬ್ಲೂ ಟಿಕ್ ಮರಳಿ ಬಂದಿವೆ. ಏಪ್ರಿಲ್ 20ರ ನಂತರ ಸಾಂಪ್ರದಾಯಿಕವಾಗಿ ನೀಡಲಾದ ಬ್ಲೂಟಿಕ್​ಗಳನ್ನು ತೆಗೆದು ಹಾಕಲಾಗುವುದು ಎಂದು ಇತ್ತೀಚೆಗೆ ಮಸ್ಕ್ ಘೋಷಿಸಿದ್ದರು.

ತಮಗೆ ಟ್ವಿಟರ್ ಬ್ಲೂ ಟಿಕ್ ಉಚಿತವಾಗಿ ಮರಳಿ ಸಿಕ್ಕಿದೆ ಎಂದು ಅಮೆರಿಕದ ಪತ್ರಕರ್ತ ಮ್ಯಾಟ್ ಬೈಂಡರ್ ಟ್ವೀಟ್ ಮಾಡಿದ್ದಾರೆ. ಎಲೋನ್ ಮಸ್ಕ್ ನನಗೆ ಉಚಿತವಾಗಿ ಬ್ಲೂಟಿಕ್ ನೀಡಿದ್ದಾರೆ. ಹಾಗಂತ ನಾನು ಹಾಲಿವುಡ್ ಸೆಲೆಬ್ರಿಟಿಯೂ ಆಗಿಲ್ಲ ಎಂದು ಅವರು ಹೇಳಿದ್ದಾರೆ. ಭಾರತೀಯ ಪತ್ರಕರ್ತೆ ನಿಧಿ ರಜ್ದಾನ್ ಅವರಿಗೆ ಕೂಡ ಬ್ಲೂ ಟಿಕ್ ಮರಳಿ ಬಂದಿದೆ. ಯಾವುದೋ ಕಾರಣಕ್ಕೆ ನನಗೆ ಬ್ಲೂಟಿಕ್ ಮರಳಿ ಸಿಕ್ಕಿದೆ, ಆದರೆ ಅದನ್ನು ಪಡೆಯಲು ನಾನು ಹಣ ಪಾವತಿಸಿಲ್ಲ ಎಂದು ನಿಧಿ ಟ್ವೀಟ್ ಮಾಡಿದ್ದಾರೆ. ಇದಲ್ಲದೆ, ಅಮೇರಿಕದ ಮಾಧ್ಯಮ ಸಂಸ್ಥೆ ನ್ಯೂಯಾರ್ಕ್ ಟೈಮ್ಸ್ ಗೆ ಕೂಡ ಟಿಕ್ ಮಾರ್ಕ್ ಪುನಃ ಸಿಕ್ಕಿದೆ.

ಇದರ ಜೊತೆಗೆ ಅಮೆರಿಕಾದ ಲಾಭೋದ್ದೇಶವಿಲ್ಲದ ಮಾಧ್ಯಮ ಸಂಸ್ಥೆಯಾಗಿರುವ NPR (ನ್ಯಾಷನಲ್ ಪಬ್ಲಿಕ್ ರೇಡಿಯೋ)ನ ಬಳಕೆಯಲ್ಲಿಲ್ಲದ ಟ್ವಿಟರ್​ ಖಾತೆಗೆ ಬ್ಲೂ ಟಿಕ್ ಕಾಣಿಸಿಕೊಂಡಿದೆ. ಭಾರತದಲ್ಲಿ, ಬಾಲಿವುಡ್ ಸ್ಟಾರ್ ಶಾರುಖ್ ಖಾನ್, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಹಾಸ್ಯನಟ ವೀರ್ ದಾಸ್ ಸೇರಿದಂತೆ ಹಲವಾರು ಜನಪ್ರಿಯ ಸೆಲೆಬ್ರಿಟಿಗಳಿಗೆ ಟ್ವಿಟರ್ ಬ್ಲೂ ಟಿಕ್ ಮರಳಿ ಬಂದಿರುವುದು ವಿಶೇಷ. ಟ್ವಿಟರ್ ಬ್ಲೂ ಅನ್ನು ಫೆಬ್ರವರಿ 8 ರಂದು ಭಾರತದಲ್ಲಿ ಪ್ರಾರಂಭಿಸಲಾಯಿತು. ಈಗ ಟ್ವಿಟರ್​ ಬ್ಲೂ ಟಿಕ್ ಪಡೆಯಬೇಕಾದರೆ ವೆಬ್‌ನಲ್ಲಿ ರೂ 650 ಮತ್ತು ಮೊಬೈಲ್ ಸಾಧನಗಳಲ್ಲಿ ರೂ 900 ರ ಮಾಸಿಕ ಚಂದಾದಾರಿಕೆ ಶುಲ್ಕ ಪಾವತಿಸಬೇಕಾಗುತ್ತದೆ.

ಟ್ವಿಟರ್​ನಲ್ಲಿ ಬ್ಲೂಟಿಕ್ ಪಡೆಯುವುದು ಎಂದರೆ ಬಳಕೆದಾರರಿಗೆ ಅದೊಂದು ರೀತಿಯ ಹೆಮ್ಮೆಯ ವಿಷಯವಾಗಿದೆ. ಅದನ್ನು ಕೆಲವರು ತಮ್ಮ ಅಂತಸ್ತಿಕೆಯ ಸಂಕೇತವಾಗಿಯೂ ಪರಿಗಣಿಸುತ್ತಾರೆ. ಆದರೆ ಸಾಕಷ್ಟು ಫಾಲೋವರ್​ಗಳಿದ್ದರೂ ಅಂಥ ಹಲವಾರು ಬಳಕೆದಾರರಿಗೆ ಬ್ಲೂಟಿಕ್ ನೀಡಲಾಗುತ್ತಿಲ್ಲ ಎಂದು ವರ್ಷಗಳಿಂದ ಬಳಕೆದಾರರು ದೂರುತ್ತಲೇ ಇದ್ದಾರೆ. ಟ್ವಿಟರ್ ಬ್ಲೂಟಿಕ್ ನೀಡುವ ವಿಷಯದಲ್ಲಿ ತಾರತಮ್ಯ ಮಾಡುತ್ತದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಏತನ್ಮಧ್ಯೆ ಎಲೋನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತರ ಸಾಂಪ್ರದಾಯಿಕವಾಗಿ ನೀಡಲಾದ ಎಲ್ಲ ಬ್ಲೂಟಿಕ್ ಗಳನ್ನು ಹಿಂಪಡೆಯುವುದಾಗಿ ಹೇಳಿ, ಹಾಗೆಯೇ ಮಾಡಿದ್ದರು. ಇನ್ನು ಮುಂದೆ ಹಣ ಪಾವತಿಸಿ ಸಬ್​ಸ್ಕ್ರೈಬ್ ಆದವರಿಗೆ ಮಾತ್ರ ಟಿಕ್ ನೀಡಲಾಗುವುದು ಎಂದು ನಿಯಮ ಘೋಷಿಸಿದ್ದರು. ಆದರೆ ಈಗ ವಿಶ್ವದ ಹಲವಾರು ಪ್ರಖ್ಯಾತ ಹಾಗೂ ಸೆಲೆಬ್ರಿಟಿಗಳ ಟ್ವಿಟರ್​ ಖಾತೆಯ ಬ್ಲೂಟಿಕ್​ ಉಚಿತವಾಗಿಯೇ ಮರಳಿ ಬಂದಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಚಾಟ್​ಜಿಪಿಟಿಗಿಂತ ಪ್ರಬಲ AI ತಯಾರಿಸಲಿದೆ ’ಗೂಗಲ್​ ಡೀಪ್​ ಮೈಂಡ್​’

ETV Bharat Logo

Copyright © 2024 Ushodaya Enterprises Pvt. Ltd., All Rights Reserved.