ಸ್ಯಾನ್ ಫ್ರಾನ್ಸಿಸ್ಕೋ(ಯುಎಸ್): ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಆದ ಟ್ವಿಟರ್ ತನ್ನ ಬ್ಲೂ ಟಿಕ್ ಸೇವೆಯನ್ನು ವಿಸ್ತರಿಸಿದೆ. ಮಾಸಿಕ 8 ಡಾಲರ್ ಪಾವತಿಸಿದವರಿಗೆ ಅಂತರ್ಜಾಲದ ಹುಡುಕಾಟದಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.
ಈ ಹಿಂದೆ ಟ್ವೀಟ್ ಮಾಡಿದ್ದ ಕಂಪನಿ ಸಿಇಒ ಎಲಾನ್ ಮಸ್ಕ್, ಮಾಸಿಕವಾಗಿ ಹಣ ಪಾವತಿಸಿದ ಖಾತೆಗಳಿಗೆ ವಿಶೇಷ ವೈಶಿಷ್ಟ್ಯಗಳನ್ನುಕಲ್ಪಿಸಲಾಗುವುದು. ವೆಬ್ ಹುಡುಕಾಟದ ವೇಳೆ ಚಂದಾದಾರರಿಗೆ ವಿಶೇಷ ಪ್ರಾಸಸ್ತ್ಯ ನೀಡಲಾಗುವುದಲ್ಲದೇ ಈಜಿಯಾಗಿ ಸರ್ಚ್ ಮಾಡಲು ಅನುಕೂಲ ಮಾಡಿಕೊಡಲಾಗುವುದು ಎಂದು ಮಸ್ಕ್ ಹೇಳಿದ್ದರು. ಅದರಂತೆ ಕಂಪನಿ ಈಗ ತನ್ನ ನಿರ್ಧಾರವನ್ನು ಘೋಷಿಸಿದೆ.
ಅಲ್ಲದೇ ಚಂದಾದಾರರು ವೆಬ್ನಾದ್ಯಂತ 1080p ರೆಸಲ್ಯೂಶನ್ ಮತ್ತು 2GB ಫೈಲ್ ಗಾತ್ರದಲ್ಲಿ 60 ನಿಮಿಷದ ವಿಡಿಯೋಗಳನ್ನು ಇದೀಗ ಅಪ್ಲೋಡ್ ಮಾಡಬಹುದಾಗಿದೆ. ಆದರೆ ಎಲ್ಲಾ ವಿಡಿಯೋಗಳು ಕಂಪನಿಯ ನಿಯಮಗಳನ್ನು ಅನುಸರಿಸುವಂತಿರಬೇಕು ಎಂದು ಮಸ್ಕ್ ತಿಳಿಸಿದ್ದಾರೆ
ಇದನ್ನೂ ಓದಿ:ಮಸ್ಕ್ ಹಿಂದಿಕ್ಕಿದ ಬರ್ನಾಡ್.. ಅರ್ನಾಲ್ಟ್ ಈಗ ವಿಶ್ವದ ನಂ 1 ಶ್ರೀಮಂತ