ETV Bharat / science-and-technology

ಸ್ಪೇಸ್‌ಎಕ್ಸ್ ರಾಕೆಟ್​ನಿಂದ ಅಯಾನುಗೋಳದಲ್ಲಿ ತಾತ್ಕಾಲಿಕ ರಂಧ್ರ ಸೃಷ್ಟಿ: ಬಾಹ್ಯಾಕಾಶ ಭೌತಶಾಸ್ತ್ರಜ್ಞ

author img

By

Published : Jul 25, 2023, 6:02 PM IST

SpaceX Falcon 9 rocket: ಜುಲೈ 19ರಂದು ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಉಡಾವಣೆ ಮಾಡಿದ್ದರಿಂದ ಭೂಮಿಯ ಅಯಾನುಗೋಳದಲ್ಲಿ ತಾತ್ಕಾಲಿಕ ರಂಧ್ರ ಬಿದ್ದಿದೆ ಎಂದು ಅಮೆರಿಕದ ಬಾಹ್ಯಾಕಾಶ ಭೌತಶಾಸ್ತ್ರಜ್ಞ ಜೆಫ್ ಬಾಮ್‌ಗಾರ್ಡ್ನರ್ ಅವರು, ಆಕಾಶದ ಚಿತ್ರಗಳನ್ನು ಅಧ್ಯಯನ ಮಾಡಿದ ನಂತರ ಈ ಹೇಳಿಕೆ ನೀಡಿದ್ದಾರೆ. ರಾಕೆಟ್ ಅಯಾನುಗೋಳದಲ್ಲಿ ಮಾಡಿದ ರಂಧ್ರವನ್ನು ಸೂಚಿಸುವ ಮಸುಕಾದ ಕೆಂಪು ಹೊಳಪು ಕಾಣುತ್ತಿದೆ ಎಂದು ಜೆಫ್ ಬಾಮ್‌ಗಾರ್ಡ್ನರ್ ಅವರು, ಸ್ಪೇಸ್​ ವೆದರ್ ಡಾಟ್ ಕಾಮ್​ಗೆ ಹೇಳಿಕೆ ನೀಡಿದ್ದಾರೆ.

SpaceX rocket makes a hole in ionosphere
ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್ ರಾಕೆಟ್​ನಿಂದ ಅಯಾನುಗೋಳದಲ್ಲಿ ತಾತ್ಕಾಲಿಕ ರಂಧ್ರ ಸೃಷ್ಟಿ: ಯುಎಸ್ ಬಾಹ್ಯಾಕಾಶ ಭೌತಶಾಸ್ತ್ರಜ್ಞ ಹೇಳಿಕೆ..

ನ್ಯೂಯಾರ್ಕ್ (ಅಮೆರಿಕ): ''ಈ ತಿಂಗಳ ಆರಂಭದಲ್ಲಿ ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಉಡಾವಣೆ ಮಾಡಿದ ಫಾಲ್ಕನ್ 9 ರಾಕೆಟ್ ಭೂಮಿಯ ಅಯಾನುಗೋಳದಲ್ಲಿ ತಾತ್ಕಾಲಿಕ ರಂಧ್ರವನ್ನು ಮಾಡಿದೆ'' ಎಂದು ಅಮೆರಿಕದ ಬಾಹ್ಯಾಕಾಶ ಭೌತಶಾಸ್ತ್ರಜ್ಞ ಜೆಫ್ ಬಾಮ್‌ಗಾರ್ಡ್ನರ್ ಹೇಳಿದ್ದಾರೆ.

ಫಾಲ್ಕನ್ 9 ಮರುಬಳಕೆ ಮಾಡಬಹುದಾದ ಎರಡು ಹಂತದ ರಾಕೆಟ್​ ಅನ್ನು ಪೇಲೋಡ್‌ಗಳು ಹಾಗೂ ಜನರನ್ನು ಭೂಮಿಯ ಕಕ್ಷೆಗೆ, ಅದರಾಚೆಗೆ ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಈ ರಾಕೆಟ್ ಅ​ನ್ನು ಜುಲೈ 19 ರಂದು ಕ್ಯಾಲಿಫೋರ್ನಿಯಾದ ವಾಂಡೆನ್‌ಬರ್ಗ್ ಬಾಹ್ಯಾಕಾಶ ಪಡೆ ಬೇಸ್‌ನಿಂದ ಉಡಾವಣೆ ಮಾಡಲಾಗಿತ್ತು.

ಅಮೆರಿಕದ ಬಾಹ್ಯಾಕಾಶ ಭೌತಶಾಸ್ತ್ರಜ್ಞ ಜೆಫ್ ಬಾಮ್‌ಗಾರ್ಡ್ನರ್ ಹೇಳಿದ್ದೇನು?: ಜೆಫ್ ಬಾಮ್‌ಗಾರ್ಡ್ನರ್ ಅವರ ಪ್ರಕಾರ, ಉಡಾವಣೆಯ ನಂತರ ಅರಿಜೋನಾದ ಆಕಾಶದ ಚಿತ್ರಗಳನ್ನು ಅಧ್ಯಯನ ಮಾಡಿದರು. ಇದು ರಾಕೆಟ್‌ನ ಹಿನ್ನೆಲೆಯಲ್ಲಿ ಮಸುಕಾದ ಕೆಂಪು ಹೊಳಪನ್ನು ತೋರಿಸಿತು. ರಾಕೆಟ್​ನಿಂದ ಅಯಾನುಗೋಳದಲ್ಲಿ ರಂಧ್ರ ಬಿದ್ದಿದೆ ಎಂದು ಖಚಿತಪಡಿಸುತ್ತದೆ. ರಾಕೆಟ್‌ಗಳು ಭೂಮಿಯ ಮೇಲ್ಮೈಯಿಂದ 200 ರಿಂದ 300 ಕಿಮೀ ಎತ್ತರದಲ್ಲಿ ತಮ್ಮ ಎಂಜಿನ್‌ಗಳನ್ನು ಸುಡುತ್ತಿರುವಾಗ ಅಯಾನುಗೋಳದಲ್ಲಿ ರಂಧ್ರ ಸೃಷ್ಟಿಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ ಎಂದು ಅವರು ಸ್ಪೇಸ್​ ವೇದರ್​ ಡಾಟ್ ಕಾಮ್​ಗೆ ತಿಳಿಸಿದ್ದಾರೆ.

ನಾನು ಜುಲೈ 19ರ ಉಡಾವಣೆಯಿಂದ ತುಣುಕನ್ನು ಪರಿಶೀಲಿಸಿದ್ದೇನೆ. ಇದು ದಿನದ ಆ ಸಮಯದಲ್ಲಿ ಎಫ್ - ರೀಜನ್ ಶಿಖರದ ಬಳಿ 286 ಕಿಲೋಮೀಟರ್‌ನಲ್ಲಿ ಎರಡನೇ ಹಂತದ ಎಂಜಿನ್ ಉರಿಯುತ್ತಿರುವುದನ್ನು ತೋರಿಸುತ್ತದೆ. ಹಾಗಾಗಿ, ಅಯಾನುಗೋಳದ ರಂಧ್ರ ಮಾಡಲ್ಪಟ್ಟಿರುವ ಸಾಧ್ಯತೆಯಿದೆ ಎಂದರು. ಅಯಾನುಗಳು ಎಂದು ಕರೆಯಲ್ಪಡುವ ಚಾರ್ಜ್ಡ್ ಕಣಗಳಿಂದ ತುಂಬಿದ ಬಾಹ್ಯಾಕಾಶವು ಪ್ರಾರಂಭವಾಗುವ ವಾತಾವರಣದ ಪದರ ಎಂದು ನಾಸಾ ಅಯಾನುಗೋಳವನ್ನು ವ್ಯಾಖ್ಯಾನಿಸುತ್ತದೆ. ಇದು ಮೇಲ್ಮೈಯಿಂದ ಸುಮಾರು 50 ರಿಂದ 400 ಮೈಲುಗಳ ನಡುವೆ ವ್ಯಾಪಿಸಿದೆ.

ಏನಿದು ಅಯಾನುಗೋಳ?: ಅಯಾನುಗೋಳವು ಭೂಮಿಯ ಮೇಲಿನ ವಾತಾವರಣದ ಅಯಾನೀಕೃತ ಭಾಗವಾಗಿದೆ. ಭೂಕಾಂತೀಯ ಬಿರುಗಾಳಿಗಳು ಅರೋರಾಗಳಿಗೆ ಕಾರಣವಾಗುತ್ತವೆ. ಸೌರ ಪ್ಲಾಸ್ಮಾ ಅಯಾನುಗಳೊಂದಿಗೆ ಪ್ರತಿಕ್ರಿಯಿಸಿ ಆಕಾಶದಲ್ಲಿ ಕಂಡುಬರುವ ಅದ್ಭುತವಾದ ಬಣ್ಣಗಳನ್ನು ಸೃಷ್ಟಿಸುತ್ತದೆ. ಕಳೆದ ವರ್ಷ, ಸ್ಪೇಸ್‌ಎಕ್ಸ್ ರಾಕೆಟ್ ದಕ್ಷಿಣ ಕೆರೊಲಿನಾದ ಮೇಲೆ 'ಸ್ಪೇಸ್ ಜೆಲ್ಲಿಫಿಶ್' ಫೈರ್‌ಬಾಲ್ ಅನ್ನು ರಚಿಸಿತು. ಸ್ಪೇಸ್‌ಎಕ್ಸ್ ರಾಕೆಟ್‌ಗಳ ಉಡಾವಣೆಯ ನಂತರ ಆಕಾಶದಲ್ಲಿ ಮಂಜಿನ ದೀಪಗಳು ಈ ಹಿಂದೆ ಹಲವು ಬಾರಿ ಕಂಡುಬಂದಿವೆ.

ಮಸ್ಕ್ ಕಳೆದ ವರ್ಷ ಲಾಸ್ ಏಂಜಲೀಸ್ ಮೇಲಿನ ದೀಪಗಳ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಏಕೆಂದರೆ ವೇಗವಾಗಿ ಚಲಿಸುವ ರಾಕೆಟ್‌ಗಳು ಮತ್ತು ಅವುಗಳ ನಿಷ್ಕಾಸ ಹೊಗೆ ಅಯಾನುಗೋಳದ ಅಯಾನೀಕರಣವನ್ನು ಬದಲಾಯಿಸುತ್ತವೆ. ರಾಕೆಟ್‌ಗಳು ಪ್ರಯಾಣ ಮಾಡುವಾಗ ನೀರು ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಸಿಂಪಡಿಸುತ್ತವೆ. ಇದು ಸ್ಥಳೀಯ ಅಯಾನೀಕರಣವನ್ನು ಶೇಕಡಾ 70 ರಷ್ಟು ಕಡಿಮೆ ಮಾಡುತ್ತದೆ.

ಅಯಾನುಗೋಳದಲ್ಲಿ ರಂಧ್ರದಿಂದ ಜಿಪಿಎಸ್ ವ್ಯವಸ್ಥೆಗಳ ಮೇಲೆ ಪರಿಣಾಮ: ಅಯಾನುಗೋಳದಲ್ಲಿನ ರಂಧ್ರದ ಸೃಷ್ಟಿಯಾಗಿರುವುದರಿಂದ ಕೆಂಪು ಬಣ್ಣವು ಆಮ್ಲಜನಕ ಅಯಾನುಗಳು ರಾಕೆಟ್ ನಿಷ್ಕಾಸ ಹೊಗೆಯೊಂದಿಗೆ ಪ್ರತಿಕ್ರಿಯಿಸುವ ಪರಿಣಾಮವಾಗಿದೆ. ಕೆಂಪು ಅರೋರಾಗಳಂತೆಯೇ ಅದೇ ತರಂಗಾಂತರದಲ್ಲಿ ಬೆಳಕನ್ನು ಬಿಡುಗಡೆ ಮಾಡುತ್ತದೆ ಎಂದು ನ್ಯೂಸ್‌ವೀಕ್ 2017ರಲ್ಲಿ ವರದಿ ಮಾಡಿತ್ತು. ಫಾಲ್ಕನ್ 9 ರಾಕೆಟ್‌ನ ಪಥವು 560 ಮೈಲಿ ಅಗಲವಾದ ರಂಧ್ರವನ್ನು ಸೃಷ್ಟಿಸಿತು. ಏಕೆಂದರೆ ಅದು ಎರಡರಿಂದ ಮೂರು ಗಂಟೆಗಳವರೆಗೆ ಆಘಾತ ಹೆಚ್ಚಿಸಿತು. ಭೂಮಿಯ ಮೇಲ್ಮೈಗೆ ಸಮಾನಾಂತರವಾಗಿ ಪ್ರಯಾಣಿಸುತ್ತದೆ ಎಂದು ಆರ್ಸ್ ಟೆಕ್ನಿಕಾ 2018ರಲ್ಲಿ ವರದಿ ಮಾಡಿತ್ತು. ಅಯಾನುಗೋಳದಲ್ಲಿನ ರಂಧ್ರವು ಜಿಪಿಎಸ್ ವ್ಯವಸ್ಥೆಗಳ ಮೇಲೆ ಕೆಲವು ಪರಿಣಾಮಗಳನ್ನು ಬೀರಿತು, ಕೆಲವು ಅಡಿಗಳಷ್ಟು ಸ್ಥಳದ ನಿಖರತೆಯನ್ನು ಬದಲಾಯಿಸಿತ್ತು.

ಇದನ್ನೂ ಓದಿ: Chandrayaan-3: ಚಂದ್ರಯಾನ - 3 ನೌಕೆಯ ಐದನೇ ಹಂತದ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ, ಆಗಸ್ಟ್​ 1ಕ್ಕೆ 6ನೇ ಪ್ರಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.