ETV Bharat / science-and-technology

ಲೈವ್​ ಸ್ಟ್ರೀಮ್​​ Google Meetನಲ್ಲಿ ಪ್ರಶ್ನೋತ್ತರ, ಪೋಲ್ ವೈಶಿಷ್ಟ್ಯ: ವ್ಯಾಪಾರ, ಶೈಕ್ಷಣಿಕ ವಲಯಕ್ಕೆ ಅನುಕೂಲ

ಗೂಗಲ್ ಮೀಟ್ ಲೈವ್ ಸ್ಟ್ರೀಮ್ ವೀಡಿಯೊ ಕರೆಗಳ ಸಮಯದಲ್ಲಿ ಇನ್ನು ಮುಂದೆ ಪ್ರಶ್ನೋತ್ತರ (Q&A) ಮತ್ತು ಸಮೀಕ್ಷೆಯ ವೈಶಿಷ್ಟ್ಯಗಳು (poll features) ಸಿಗಲಿವೆ.

author img

By

Published : Jun 29, 2023, 4:17 PM IST

Google rolling out Q&A, poll features to Meet live streams

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಗೂಗಲ್ ಮೀಟ್​ ಆ್ಯಪ್​ನಲ್ಲಿ ಇನ್ನು ಮುಂದೆ ಪ್ರಶ್ನೋತ್ತರ (Q&A) ಮತ್ತು ಸಮೀಕ್ಷೆಯ ವೈಶಿಷ್ಟ್ಯಗಳು (poll features) ಬರಲಿವೆ. Google Meet ನ ಲೈವ್ ಸ್ಟ್ರೀಮ್ ಮೀಟ್​ಗಳಿಗೆ ಅನ್ವಯವಾಗುವಂತೆ ಪ್ರಶ್ನೋತ್ತರ ಮತ್ತು ಸಮೀಕ್ಷೆಯ ವೈಶಿಷ್ಟ್ಯಗಳು ಲಭ್ಯವಾಗಲಿವೆ ಎಂದು ಗೂಗಲ್ ತಿಳಿಸಿದೆ. ನೀವು ವೀಡಿಯೊ ಮೀಟಿಂಗ್ ಅನ್ನು ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದರೆ, ಮೀಟಿಂಗ್ ಹೋಸ್ಟ್‌ಗಳು ಈಗ ಪ್ರಶ್ನೋತ್ತರ ಮತ್ತು ಪೋಲ್ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸಬಹುದು ಎಂದು ಗೂಗಲ್ ಬುಧವಾರ ವರ್ಕ್‌ಸ್ಪೇಸ್ ಅಪ್‌ಡೇಟ್‌ಗಳ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದೆ. ಈ ಮೊದಲು, ಈ ವೈಶಿಷ್ಟ್ಯಗಳು ಸಾಂಪ್ರದಾಯಿಕ Meet ಮೀಟಿಂಗ್‌ಗಳಲ್ಲಿ ಮಾತ್ರ ಲಭ್ಯವಿದ್ದವು.

ಈ ವೈಶಿಷ್ಟ್ಯಗಳನ್ನು ಲೈವ್ ಸ್ಟ್ರೀಮ್ ಮೀಟಿಂಗ್‌ಗಳಿಗೆ ವಿಸ್ತರಿಸುವುದರಿಂದ ನಿಮ್ಮ ಸಭೆಗಳನ್ನು ಹೆಚ್ಚು ವೈಶಿಷ್ಟ್ಯ ಭರಿತ, ಸಹಯೋಗದ ಅನುಭವದೊಂದಿಗೆ ಆನಂದಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ತಿಳಿಸಿದೆ. Meet ನಲ್ಲಿನ ಪ್ರಶ್ನೋತ್ತರ ವೈಶಿಷ್ಟ್ಯವು ಪ್ರೇಕ್ಷಕರನ್ನು ಉತ್ತಮವಾಗಿ ತೊಡಗಿಸಿಕೊಳ್ಳಲು ಸುಲಭವಾದ ಮಾರ್ಗವನ್ನು ಒದಗಿಸುತ್ತದೆ ಮತ್ತು ಕೆಲಸದಲ್ಲಿ ಮತ್ತು ಶಾಲೆಯಲ್ಲಿ ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯ ಮಾಡಲಿದೆ.

ತರಗತಿಯ ವಿಷಯದ ಕುರಿತು ಪ್ರಶ್ನೆಗಳನ್ನು ಕೇಳಲು ಮತ್ತು ಶಿಕ್ಷಕರಿಂದ ಉತ್ತರಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ರಚನಾತ್ಮಕ ಮಾರ್ಗವಾಗಿ ಶಿಕ್ಷಕರು Q&A ವೈಶಿಷ್ಟ್ಯವನ್ನು ಬಳಸಬಹುದು. ಮತ್ತೊಂದೆಡೆ, ವ್ಯವಹಾರಗಳು ಈ ವೈಶಿಷ್ಟ್ಯವನ್ನು ಬಳಸಿಕೊಂಡು ಸಭೆಗಳನ್ನು ಹೆಚ್ಚು ಒಳಗೊಳ್ಳುವಂತೆ ಮಾಡಲು ಸಹಾಯ ಮಾಡುತ್ತದೆ, ಎಲ್ಲರಿಗೂ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡುತ್ತದೆ. ಅಲ್ಲದೆ, ಭಾಗವಹಿಸುವವರು ಕರೆಯ ಮಧ್ಯೆ ಅಡ್ಡಿಯಾಗದಂತೆ ತಮ್ಮ ನೆಚ್ಚಿನ ಪ್ರಶ್ನೆಗಳನ್ನು ಸಲ್ಲಿಸಬಹುದು ಮತ್ತು ಅಪ್‌ವೋಟ್ ಮಾಡಬಹುದು.

ಸಮೀಕ್ಷೆಗಳು (polls) ಪ್ರೇಕ್ಷಕರ ನಾಡಿಮಿಡಿತವನ್ನು ತ್ವರಿತವಾಗಿ ಅಳೆಯುವ ಮಾರ್ಗವಾಗಿವೆ. ಹೆಚ್ಚಿನ ಚರ್ಚೆಯ ಅಗತ್ಯವಿರುವ ವಿಷಯಗಳನ್ನು ಗುರುತಿಸಲು ಅಥವಾ ಸಭೆಯ ವಿಷಯದ ಬಗ್ಗೆ ತಿಳುವಳಿಕೆಯನ್ನು ಪರೀಕ್ಷಿಸಲು ಬಳಕೆದಾರರು ಸಮೀಕ್ಷೆಗಳನ್ನು ಬಳಸಬಹುದು.

ಅಂದರೆ ವ್ಯಾಪಾರಕ್ಕಾಗಿ ಇದನ್ನು ಬಳಸುವವರು ತಮ್ಮ ಸಹೋದ್ಯೋಗಿಗಳಿಂದ ನೈಜ ಸಮಯದಲ್ಲಿ ಸುಲಭವಾಗಿ ಪ್ರತಿಕ್ರಿಯೆ ಪಡೆಯಬಹುದು, ಶಿಕ್ಷಕರು ತಾವು ಕಲಿಸಿದ್ದು ಮಕ್ಕಳಿಗೆ ಅರ್ಥವಾಗುತ್ತಿದೆಯಾ ಅಥವಾ ಇಲ್ಲವಾ ಎಂಬುದನ್ನು ತಿಳಿಯಲು ರಿಮೋಟ್ ಆಗಿ ಸೇರಿರುವ ವಿದ್ಯಾರ್ಥಿಗಳನ್ನು ರಸಪ್ರಶ್ನೆ ಮಾಡಬಹುದು ಮತ್ತು ಮಾರಾಟ ತಂಡಗಳು (ಸೇಲ್ಟ್​ ಟೀಮ್) ತಮ್ಮ ಮಾರಾಟ ಪ್ರಸ್ತುತಿಗಳನ್ನು ನಿರೀಕ್ಷಿತ ಗ್ರಾಹಕರಿಗೆ ಹೆಚ್ಚು ತೊಡಗಿಸಿಕೊಳ್ಳುವ ರೀತಿಯಲ್ಲಿ ಮತ್ತು ಸಂವಾದಾತ್ಮಕವಾಗಿ ಮಾಡಬಹುದು ಎಂದು ಕಂಪನಿ ಹೇಳಿದೆ.

Google Meet ಎಂಬುದು ಗೂಗಲ್​ನ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಆಗಿದೆ. ಆಡಿಯೋ ಮತ್ತು ವೀಡಿಯೊ ಕರೆಗಳ ಮೂಲಕ ಸಂಪರ್ಕ ಸಾಧಿಸಲು ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಇದು ಉತ್ತಮ ಮಾರ್ಗವಾಗಿದೆ. ಇದು ಗೂಗಲ್ ಹ್ಯಾಂಗ್​ಔಟ್ಸ್​ನ ರೂಪಾಂತರವಾಗಿದೆ. ಗೂಗಲ್ ಮೀಟ್ ಇದು ವೆಬ್‌ನಲ್ಲಿ ಲಭ್ಯವಿದೆ. ಆ್ಯಂಡ್ರಾಯ್ಡ್​ ಮತ್ತು iOS ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಕೂಡ ಲಭ್ಯವಿದೆ.

ಇದನ್ನೂ ಓದಿ : ಲಂಡನ್​ನಲ್ಲಿ OpenAI ಕಚೇರಿ ಆರಂಭ: ಸಂಶೋಧನೆ, ಸಾಮರ್ಥ್ಯ ವೃದ್ಧಿಗೆ ಒತ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.