ETV Bharat / science-and-technology

ಪ್ರಸೆಂಟೆಡ್ ಕಂಟೆಂಟ್​​ಗೆ ಆ್ಯಕ್ಸೆಸ್: Google Meet ಹೊಸ ಫೀಚರ್

ಮೀಟಿಂಗ್‌ಗಳಲ್ಲಿ ಪ್ರಸ್ತುತಪಡಿಸಲಾದ ವಿಷಯಕ್ಕೆ ಸಂಬಂಧಪಟ್ಟ ಆಕರಗಳನ್ನು ಹಂಚಿಕೊಳ್ಳಲು ಅದರ ಬಳಕೆದಾರರಿಗೆ ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಗೂಗಲ್ ಮೀಟ್ ಪರಿಚಯಿಸುತ್ತಿದೆ. ಬಳಕೆದಾರರು ಮತ್ತೊಂದು ವಿಂಡೋಗೆ ಬದಲಾಯಿಸದೇ ಆ ವಿಷಯ ವಸ್ತುವನ್ನು ನೇರವಾಗಿ ಪ್ರವೇಶ ಮಾಡಬಹುದಾಗಿದೆ.

author img

By

Published : Jan 30, 2023, 12:41 PM IST

Google Meet users can now share access to presented content

ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ತನ್ನ ವಿಡಿಯೋ ಸಂವಹನ ಸೇವೆ 'Google Meet' ಗೆ ಹೊಸ ವೈಶಿಷ್ಠ್ಯವನ್ನು ಪರಿಚಯಿಸುತ್ತಿದೆ. ಹೊಸ ವೈಶಿಷ್ಠ್ಯದ ಮೂಲಕ ಬಳಕೆದಾರರು ತಾವು ಪ್ರಸ್ತುತ ಪಡಿಸುತ್ತಿರುವ ವಿಷಯ ವಸ್ತುವನ್ನು ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿರುವವರು ಹಾಗೂ ಕ್ಯಾಲೆಂಡರ್ ಗೆಸ್ಟ್ ಲಿಸ್ಟ್​ನಲ್ಲಿ ಇರುವ ಎಲ್ಲರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಲಿದೆ.

ವಿಷಯವಸ್ತುವನ್ನು ಮಂಡನೆ ಮಾಡುವಾಗ ಬಳಕೆದಾರರು ಫ್ಲೋಟಿಂಗ್ ಆಕ್ಷನ್ ಮೆನುವಿನಿಂದ ಅಥವಾ Meet Chat ನಲ್ಲಿನ ಸಲಹೆಗಳ ಮೂಲಕ ಫೈಲ್ ಅನ್ನು ಹಂಚಿಕೊಳ್ಳಬಹುದು ಎಂದು ಗೂಗಲ್ ಕಂಪನಿಯು ವರ್ಕ್​ಸ್ಪೇಸ್ ಅಪ್ಡೇಟ್ಸ್​ ಬ್ಲಾಗ್ ಪೋಸ್ಟ್​​ನಲ್ಲಿ ತಿಳಿಸಿದೆ.

ಬಳಕೆದಾರರು ಮತ್ತೊಂದು ವಿಂಡೋಗೆ ಸ್ವಿಚ್ ಮಾಡದೇ ಮಂಡನೆ ಮಾಡುತ್ತಿರುವ ವಿಷಯ ವಸ್ತುವನ್ನು ಆ್ಯಕ್ಸೆಸ್ ಗ್ರ್ಯಾಂಟ್ ಮಾಡಲು ಮೀಟ್​ನ ಹೊಸ ಫೀಚರ್ ಅನುಕೂಲ ಮಾಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದು ಮೀಟ್​ನಲ್ಲಿ ಪಾಲ್ಗೊಳ್ಳುವವರಿಗೆ ನಿಮ್ಮ ಪ್ರಸೆಂಟೇಶನ್ ಫಾಲೋ ಮಾಡಲು, ನಂತರ ನಿಮ್ಮ ವಿಷಯ ವಸ್ತುವನ್ನು ಹುಡುಕಾಟ ನಡೆಸಲು ಮತ್ತು ಉಲ್ಲೇಖಿಸಲು ಮತ್ತು ಸಭೆಯಿಂದ ಕ್ರಿಯೆಯ ಐಟಂಗಳ ಮೇಲೆ ಕೆಲಸ ಮಾಡುವುದನ್ನು ಮುಂದುವರಿಸಲು ಸುಲಭಗೊಳಿಸುತ್ತದೆ ಎಂದು ಗೂಗಲ್ ತನ್ನ ಹೇಳಿಕೆಯಲ್ಲಿ ವಿವರಿಸಿದೆ.

ಇದಲ್ಲದೇ, ಬಳಕೆದಾರರು ಸಭೆಯ ಚಾಟ್‌ಗೆ ಲಿಂಕ್ ಅನ್ನು ಪೇಸ್ಟ್ ಮಾಡಿದಾಗ, ಅವರನ್ನು "ಫೈಲ್ ಆ್ಯಕ್ಸೆಸ್ ಡೈಲಾಗ್​ನೊಂದಿಗೆ ಪ್ರಾಂಪ್ಟ್ ಮಾಡಲಾಗುತ್ತದೆ ಎಂದು ಕಂಪನಿ ಘೋಷಿಸಿದೆ. ಅಲ್ಲಿಂದ, ಬಳಕೆದಾರರು ಅಗತ್ಯ ಇರುವಂತೆ ಆ್ಯಕ್ಸೆಸ್ ಅನ್ನು ಸರಿಹೊಂದಿಸಬಹುದು ಮತ್ತು ಕ್ಯಾಲೆಂಡರ್ ಈವೆಂಟ್‌ಗೆ ಫೈಲ್ ಅನ್ನು ಲಗತ್ತಿಸಲು ಆಯ್ಕೆ ಮಾಡಬಹುದು. ಈ ತಿಂಗಳ ಆರಂಭದಲ್ಲಿ ಗೂಗಲ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಘೋಷಿಸಿತ್ತು.

ಇದು ಗೂಗಲ್ ಸ್ಲೈಡ್‌ಗಳನ್ನು ಪ್ರಸ್ತುತಪಡಿಸುವಾಗ ಬಳಕೆದಾರರು ತಮ್ಮ ಸ್ಪೀಕರ್ ನೋಟ್ಸ್​​ಗಳನ್ನು ಗೂಗಲ್ ಮೀಟ್‌ನಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಬಳಕೆದಾರರು ತಮ್ಮ ಸ್ಪೀಕರ್ ನೋಟ್ಸ್​ಗಳನ್ನು ಕರೆಯೊಳಗೆ ಪ್ರದರ್ಶಿಸಲು Meet ನಲ್ಲಿನ ಸ್ಲೈಡ್‌ಗಳ ನಿಯಂತ್ರಣಗಳ ಬಾರ್‌ನಲ್ಲಿರುವ ಹೊಸ ಸ್ಪೀಕರ್ ನೋಟ್ಸ್​ಗಳ ಬಟನ್ ಅನ್ನು ಕ್ಲಿಕ್ ಮಾಡಬೇಕು.

ಬೈದು ಇಂಕ್ ತರಲಿದೆ ಚಾಟ್ ಜಪಿಟಿ ಮಾದರಿಯ AI: ಚೀನಾದ Baidu Inc. ಓಪನ್ ಎಐನ ಚಾಟ್‌ಜಿಪಿಟಿ ಮಾದರಿಯ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್ ಸೇವೆಯನ್ನು ಹೊರತರಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಚೀನಾದ ಅತಿದೊಡ್ಡ ಸರ್ಚ್ ಇಂಜಿನ್ ಕಂಪನಿಯು ಮಾರ್ಚ್‌ನಲ್ಲಿ ಚಾಟ್‌ಜಿಪಿಟಿ ಶೈಲಿಯ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಯೋಜಿಸಿದೆ. ಆರಂಭದಲ್ಲಿ ಅದನ್ನು ತನ್ನ ಮುಖ್ಯ ಸರ್ಚ್ ಸೇವೆಗಳಲ್ಲಿ ಎಂಬೆಡ್ ಮಾಡಲಿದೆ. ಇದರಲ್ಲಿ ಖಾಸಗಿ ಮಾಹಿತಿಯನ್ನು ಚರ್ಚಿಸುವಾಗ ಐಡೆಂಟಿಟಿಯನ್ನು ಮರೆಮಾಚುವ ಆಪ್ಷನ್ ಇದೆ. ಇನ್ನೂ ಹೆಸರಿಡದ ಈ ಟೂಲ್, ಬಳಕೆದಾರರು OpenAI ಪ್ಲಾಟ್‌ಫಾರ್ಮ್‌ನಂತೆ ಸಂಭಾಷಣೆ ಶೈಲಿಯ ಸರ್ಚ್ ಫಲಿತಾಂಶಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಬೈದು ಆನ್‌ಲೈನ್ ಮಾರ್ಕೆಟಿಂಗ್‌ನಿಂದ ಡೀಪರ್ ಟೆಕ್ನಾಲಜಿ ಕಂಪನಿಯಾಗಿ ಪರಿವರ್ತನೆಯಾಗುವ ತನ್ನ ಹಲವಾರು ವರ್ಷಗಳ ಪ್ರಯತ್ನದಲ್ಲಿ AI ಅನ್ನು ಸಂಶೋಧಿಸಲು ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಿದೆ. ಅದರ ಹಲವಾರು ವರ್ಷಗಳಿಂದ ಡೇಟಾದ ಮೇಲೆ ತರಬೇತಿ ಪಡೆದ ದೊಡ್ಡ ಪ್ರಮಾಣದ ಯಂತ್ರ ಕಲಿಕೆ ಮಾದರಿ ಎರ್ನೀ ಸಿಸ್ಟಮ್ ಮುಂಬರುವ ಚಾಟ್‌ಜಿಪಿಟಿ ರೀತಿಯ ಉಪಕರಣದ ಅಡಿಪಾಯವಾಗಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಮೈಕ್ರೋಸಾಫ್ಟ್​ನ ChatGPTಗೆ ಸ್ಪರ್ಧೆಯಾಗಿ ಗೂಗಲ್​ನಿಂದ ಚಾಟ್​ಬೂಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.