ETV Bharat / science-and-technology

ವಿಡಿಯೋ ಗೇಮ್​ನಿಂದ ಮಕ್ಕಳ ಬ್ರೈನ್ ಆಗುತ್ತೆ ಸೂಪರ್ ಆ್ಯಕ್ಟಿವ್ !

ವಿಡಿಯೋ ಗೇಮ್ ಆಡುವ ಮಕ್ಕಳ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎಂದು ವರ್ಮೊಂಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದು ಅಚ್ಚರಿ ಮೂಡಿಸಿದೆ. ತಮ್ಮ ಸಂಶೋಧನೆಯ ಭಾಗವಾಗಿ ವಿಜ್ಞಾನಿಗಳು ಎರಡು ಸಾವಿರ ಸಂಖ್ಯೆಯ 9 ಮತ್ತು 10 ವರ್ಷದ ಮಕ್ಕಳ ಮೆದುಳಿನ ಕಾರ್ಯವನ್ನು ಪರೀಕ್ಷಿಸಿದರು.

ವಿಡಿಯೋ ಗೇಮ್​ನಿಂದ ಮಕ್ಕಳ ಬ್ರೈನ್ ಆಗುತ್ತೆ ಸೂಪರ್ ಆ್ಯಕ್ಟಿವ್ !
Active brain in children who play video games!
author img

By

Published : Oct 27, 2022, 11:25 AM IST

ವಾಷಿಂಗ್ಟನ್​: ಮಕ್ಕಳು ಹೆಚ್ಚಾಗಿ ವಿಡಿಯೋ ಗೇಮ್ ಆಡಿದರೆ ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ ಮತ್ತು ಅವರು ಇತರರೊಂದಿಗೆ ಬೆರೆಯಲು ಕಷ್ಟವಾಗುತ್ತದೆ ಎಂಬುದು ಪೋಷಕರ ಆತಂಕವಾಗಿರುತ್ತದೆ. ಆದರೆ, ವರ್ಮೊಂಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ವಿಡಿಯೋ ಗೇಮ್​ನಿಂದ ಮಕ್ಕಳಿಗೆ ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ ಎಂಬ ವಿಚಾರವನ್ನು ತಳ್ಳಿಹಾಕಿದ್ದಾರೆ.

ವಿಡಿಯೋ ಗೇಮ್ ಆಡುವ ಮಕ್ಕಳ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎಂದು ವರ್ಮೊಂಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದು, ಅಚ್ಚರಿ ಮೂಡಿಸಿದೆ. ತಮ್ಮ ಸಂಶೋಧನೆಯ ಭಾಗವಾಗಿ ವಿಜ್ಞಾನಿಗಳು ಎರಡು ಸಾವಿರ ಸಂಖ್ಯೆಯ 9 ಮತ್ತು 10 ವರ್ಷದ ಮಕ್ಕಳ ಮೆದುಳಿನ ಕಾರ್ಯವನ್ನು ಪರೀಕ್ಷಿಸಿದರು.

ಮಕ್ಕಳ ಮೆದುಳಿನ ಸ್ಕ್ಯಾನ್‌ಗಳನ್ನು ವಿಶ್ಲೇಷಿಸಿ ಅವನ್ನು ಇತರ ಮಕ್ಕಳಿಗೆ ಹೋಲಿಸಿದರು. ಈ ಸಂಶೋಧನೆಯ ನಂತರ ಅಚ್ಚರಿಯ ವಿಷಯಗಳು ಬೆಳಕಿಗೆ ಬಂದಿವೆ. ನಿತ್ಯ ಮೂರು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿಡಿಯೋ ಗೇಮ್‌ಗಳನ್ನು ಆಡುವ ಮಕ್ಕಳ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎಂದು ಸಂಶೋಧಕ ಬಾಡರ್ ಚಾರನಿ ಹೇಳಿದ್ದಾರೆ.

ಇದನ್ನೂ ಓದಿ: ಚೀನಾದ 'ಪಬ್ಜಿ'ಗೆ 'ಫೌಜ್' ಟಕ್ಕರ್​: ಜಾಗತಿಕ ಮಟ್ಟಕ್ಕೇರಿದ ಇಂಡಿಯಾ ಮೇಡ್​ 'FAU-G' ವಿಡಿಯೋ ಗೇಮ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.