ETV Bharat / science-and-technology

Upskill: ಕೌಶಲ್ಯಾಭಿವೃದ್ಧಿ ಮಾಡಿಕೊಳ್ಳಿ, ಇಲ್ಲವೇ ನೌಕರಿಗೆ ಬರುತ್ತೆ ಕುತ್ತು! - ಕೆಲವೊಮ್ಮೆ ಅವು ನಮ್ಮ ಉದ್ಯೋಗಕ್ಕೆ ಕುತ್ತು ತರುತ್ತದೆ

Upskill: ಇಂದಿನ ಕೃತಕ ಬುದ್ಧಿಮತ್ತೆಯ (AI) ಯುಗದಲ್ಲಿ ದಿನಕ್ಕೊಂದು ಹೊಸ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ಇದರೊಟ್ಟಿಗೆ ನಾವು ಸಾಗಲೇಬೇಕಾದ ಅನಿವಾರ್ಯತೆ, ಅವಶ್ಯಕತೆ ಇದೆ. ಇಲ್ಲದೇ ಇದ್ದರೆ ತುತ್ತಿನ ಚೀಲಕ್ಕೆ ಕುತ್ತು ಬರುತ್ತೆ.!

75percent of Indians fear losing their job if they do not develop their skills

author img

By

Published : Aug 7, 2023, 4:54 PM IST

ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳೊಂದಿಗೆ ಪ್ರತಿಯೊಬ್ಬರೂ ಸಾಗಲೇಬೇಕಿದೆ. ಇದಕ್ಕೆ ತಪ್ಪಿದಲ್ಲಿ ನಮ್ಮ ಉದ್ಯೋಗಕ್ಕೆ ಕುತ್ತು ಬರುತ್ತದೆ. ಇದೇ ವಿಚಾರ ಬಹುತೇಕ ಭಾರತೀಯರನ್ನು ಕಾಡುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳನ್ನು ಕಲಿಯುವ ಮೂಲಕ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಇಚ್ಚಿಸುವುದಾಗಿ ಪ್ರತಿ ನಾಲ್ವರಲ್ಲಿ ಮೂವರು ಭಾರತೀಯರು ಹೇಳುತ್ತಾರೆ ಎಂದು ವರದಿ ತಿಳಿಸಿದೆ.

ಎಮಿರಿಟ್ಯೂಸ್​ ಗ್ಲೋಬಲ್​ ವರ್ಕ್​ಪ್ಲೇಸ್​ ಕೌಶಲ್ಯ ಅಧ್ಯಯನ- 2023 ಎಂಬ ವರದಿಯಲ್ಲಿ ಈ ಕುರಿತು ವಿವರವಾಗಿ ತಿಳಿಸಲಾಗಿದೆ. ಹಣಕಾಸು ಮತ್ತು ವಿಮೆಯ (ಶೇ 72ರಷ್ಟು), ಸಾಫ್ಟ್​ವೇರ್​ ಮತ್ತು ಐಟಿ ಸರ್ವೀಸಸ್​ (ಶೇ 80 ರಷ್ಟು), ಹೆಲ್ತ್​​ಕೇರ್​ (81ರಷ್ಟು), ತಾಂತ್ರಿಕತೆ ಮತ್ತು ಆವಿಷ್ಕಾರ (ಶೇ 79ರಷ್ಟು) ಮತ್ತು ವೃತ್ತಿ ಸೇವೆ/ ಕನ್ಸಲ್ಟಿಂಗ್​ (ಶೇ 78ರಷ್ಟು) ಮಂದಿ ಉಳಿದ ಉದ್ಯಮಿಗಳಿಗಿಂತ ತಂತ್ರಜ್ಞಾನದಲ್ಲಿ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ತುಡಿತ ಹೊಂದಿದ್ದಾರೆ ಎಂಬ ಉಲ್ಲೇಖವಿದೆ.

ಬಹುತೇಕ ಭಾರತೀಯರು ಕೌಶಲ್ಯ ಅಂತರ ಎದುರಿಸುತ್ತಿದ್ದು, ಇದರ ಬಗ್ಗೆ ಅವರು ವಿಶೇಷ ಕಾಳಜಿ ಹೊಂದಿದ್ದಾರೆ. ಉದ್ಯೋಗ ಮಾರುಕಟ್ಟೆಯ ಶರವೇಗದ ಬದಲಾವಣೆಯು ಅವರ ಮೇಲೆ ತೀವ್ರ ಒತ್ತಡ ಮೂಡಿಸುತ್ತಿದೆ. ಡಿಜಿಟಲ್​ ಮಾರ್ಕೆಟಿಂಗ್​, ದತ್ತಾಂಶ ವಿಶ್ಲೇಷಣೆ, ಫೈನ್ಸಾನ್ಸ್‌​, ಮ್ಯಾನೇಜ್​ಮೆಂಟ್​ ಮತ್ತು ಕೃತಕ ಬುದ್ದಿಮತ್ತೆಯ ವೃತ್ತಿಪರರಿಗೆ ಹೆಚ್ಚು ಬೇಡಿಕೆ ಇದ್ದು, ಇದರಲ್ಲಿ ಕೌಶಲ್ಯ ಅವಶ್ಯಕತೆ ಇದೆ. ಈ ಕೌಶಲಗಳು ಉದ್ಯೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಕೆಲಸದ ಸುರಕ್ಷತೆಯನ್ನೂ ಇನ್ನೊಂದು ಹಂತಕ್ಕೆ ಕೊಂಡೊಯ್ಯುತ್ತದೆ.

ತಾಂತ್ರಿಕ ಅಡಚಣೆ ಹೆಚ್ಚಾಗುತ್ತಿರುವುದು ಕಾಳಜಿಯ ವಿಷಯವಾಗಿದ್ದು, ಭಾರತೀಯ ವೃತ್ತಿಪರರು ಅನೇಕ ಕ್ಷೇತ್ರಗಳಲ್ಲಿ ಕೌಶಲ್ಯ ಕಲಿಯುತ್ತಿದ್ದಾರೆ. ಆದಾಗ್ಯೂ ಶೇ 83ರಷ್ಟು ಮಂದಿ ವೃತ್ತಿಜೀವನದ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುವ ಮೂಲಕ ಪ್ರತಿಷ್ಠಿತ ಕಲಿಕಾ ಪೂರೈಕೆದಾರರ ಮೂಲಕ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಭಾರತ ಮತ್ತು ಎಪಿಎಸಿ ಸಿಇಒ ಮೋಹನ್ ಕಣ್ಣೇಗಲ್ ಹೇಳಿದರು.

ಈ ವರದಿಯನ್ನು 18 ದೇಶಗಳಲ್ಲಿ 18ರಿಂದ 65 ವರ್ಷಗಳ 6,600 ವೃತ್ತಿಪರರ ಸಮೀಕ್ಷೆ ನಡೆಸಿ ರಚಿಸಲಾಗಿದೆ. ಇದರಲ್ಲಿ ಭಾರತ, ಅಮೆರಿಕ, ಚೀನಾ, ಯುಕೆ, ಬ್ರೆಜಿಲ್​, ಮೆಕ್ಸಿಕೊ ಮತ್ತು ಯುಎಇ ದೇಶಗಳಿವೆ. ಜಾಗತಿಕ ಉದ್ಯೋಗ ಸ್ಥಳದಲ್ಲಿ ಅನಿಶ್ಚಿತ ಸಮಯದಲ್ಲಿ ಆನ್​ಲೈನ್​ ಶಿಕ್ಷಣವನ್ನು ಹೇಗೆ ಬಳಕೆ ಮಾಡಲಾಗುತ್ತಿತ್ತು ಎಂದು ಅರ್ಥ ಮಾಡಿಕೊಳ್ಳಲಾಗಿದೆ.

ಭಾರತದಲ್ಲಿ 21ರಿಂದ 65 ವರ್ಷದ ವಯೋಮಾನದ ಟೈರ್​ 1 ಮತ್ತು ಟೈರ್​ 2 ನಗರದಲ್ಲಿ 1,720 ಮಂದಿಯನ್ನು ಈ ಸಮೀಕ್ಷೆಗೆ ಬಳಕೆ ಮಾಡಲಾಗಿದೆ.

ಇದನ್ನೂ ಓದಿ: ನೋಕಿಯಾ ಪೇಟೆಂಟ್​ ಉಲ್ಲಂಘನೆ ಪ್ರಕರಣ; ಒಪ್ಪೊ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.