ನವದೆಹಲಿ : ಬೃಹತ್ ಸ್ಪರ್ಧೆಯಲ್ಲಿ ನಷ್ಟ ಅನುಭವಿಸಿದ ಬಳಿಕ ಎಲ್ಜಿ ಕಂಪನಿಯೂ ಮೊಬೈಲ್ ಫೋನ್ಗಳ ಉತ್ಪಾದನೆ ಮಾಡುವುದಿಲ್ಲ ಎಂದು ಘೋಷಿಸಿದೆ. ಇನ್ಮುಂದೆ ಮಾರುಕಟ್ಟೆಗೆ ಹೊಸ ಮೊಬೈಲ್ ಫೋನ್ ಬಿಡುಗಡೆ ಮಾಡುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಿದೆ.
ದಕ್ಷಿಣ ಕೊರಿಯಾ ಮೂಲದ ಕಂಪನಿಯೂ ಟೆಕ್ ಪವರ್ಹೌಸ್ ರೆಗ್ಯುಲೇಟರಿ ಫೈಲಿಂಗ್ನಲ್ಲಿ ತನ್ನ ಮೊಬೈಲ್ ಉತ್ಪಾದನಾ ಘಟಕವು ಜುಲೈ 31ರ ಬಳಿಕ ಹ್ಯಾಂಡ್ಸೆಟ್ಗಳ ಉತ್ಪಾದನೆ ಮಾಡುವುದಿಲ್ಲ ಮತ್ತು ಮಾರಾಟ ಮಾಡುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಭವಿಷ್ಯದ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಎಲ್ಲಾ ಅವಕಾಶಗಳ ಕುರಿತು ಯೋಚಿಸಿದ ಬಳಿಕವೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಘಟಕ ತಿಳಿಸಿದೆ. 2015ರಿಂದ ಈಚೆಗೆ ಮೊಬೈಲ್ ತಯಾರಿಕಾ ಘಟಕವು ನಷ್ಟ ಅನುಭವಿಸಿತ್ತು. ಕಳೆದ 1 ವರ್ಷದ ಅಂತರದಲ್ಲಿ ಸುಮಾರು 5 ಟ್ರಿಲಿಯನ್ ಡಾಲರ್ ನಷ್ಟ ಅನುಭವಿಸಿತ್ತು.
ಇದಕ್ಕೂ ಮೊದಲು ವಿಶ್ವದ 3ನೇ ಅತಿದೊಡ್ಡ ಹ್ಯಾಂಡ್ಸೆಟ್ ಉತ್ಪಾದನಾ ಕಂಪನಿ ಎಂಬ ಹೆಗ್ಗಳಿಕೆಗೆ ಎಲ್ಜಿ ಪಾತ್ರವಾಗಿತ್ತು. ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಾಗದೆ ಸೋತಿತ್ತು.
ಈ ನಡುವೆ ಜರ್ಮನಿಯ ವೋಲ್ಸ್ವ್ಯಾಗನ್, ವಿಯೇಟ್ನಾಂದ ಕಂಪನಿಯೊಂದರ ಜೊತೆ ಮೊಬೈಲ್ ಉತ್ಪಾದನೆ ಘಟಕ ಮಾರಾಟ ಸಂಬಂಧ ಒಪ್ಪಂದಕ್ಕೆ ಮುಂದಾಗಿತ್ತು ಎನ್ನಲಾಗಿದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಅಲ್ಲದೆ ನಷ್ಟದಲ್ಲಿರುವ ಮೊಬೈಲ್ ಉತ್ಪಾದನೆಯಿಂದ ಹಿಂದೆ ಸರಿದಿರುವುದರಿಂದ ಎಲ್ಜಿ ಕಂಪನಿ ವಾರ್ಷಿಕವಾಗಿ 1 ಟ್ರಿಲಿಯನ್ ಡಾಲರ್ ಲಾಭವಾಗಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.