ಸ್ಯಾನ್ ಫ್ರಾನ್ಸಿಸ್ಕೊ(ಅಮೆರಿಕ): ಗೂಗಲ್ ಮೀಟ್ ಆ್ಯಪ್ ಬಳಕೆದಾರರು ಇನ್ನು ಮುಂದೆ ತಮಗೆ ಬೇಕಾದ, ಗೂಗಲ್ನಲ್ಲಿ ಲಭ್ಯವಿರುವ ಫೋಟೋಗಳನ್ನು ಬ್ಯಾಕ್ಗ್ರೌಂಡ್(ಹಿನ್ನೆಲೆ) ಇಮೇಜ್ಗಳಾಗಿ ವಿಡಿಯೋ ಕಾಲ್ ಸಂದರ್ಭದಲ್ಲಿ ಬಳಸುಬಹುದಾಗಿದೆ ಎಂದು ಗೂಗಲ್ ಹೇಳಿದೆ.
ಗೂಗಲ್ ಕಂಪನಿಯು ಗೂಗಲ್ ಹ್ಯಾಂಗ್ಔಟ್ಸ್ ಮತ್ತು ಗೂಗಲ್ ಚಾಟ್ಗೆ ಪರ್ಯಾಯವಾಗಿ ಈ ಆ್ಯಪ್ನ ಈ ಹಿಂದೆ ಬಿಡುಗಡೆಗೊಳಿಸಿದ್ದರು. ಇದೀಗ ಈ ಆ್ಯಪ್ನ ಅಪಡೇಟೆಡ್ ವರ್ಷನ್ ಆಗಿ ಗೂಗಲ್ನಲ್ಲಿ ದೊರಕುವ ಕಚೇರಿಯ ಒಳಾಂಗಣ ಚಿತ್ರಗಳು, ಇನ್ನಿತರ ಲ್ಯಾಂಡ್ಸ್ಕೇಪ್ ಫೋಟೋಗಳು ಅಥವಾ ಅವರದ್ದೇ ಭಾವಚಿತ್ರಗಳನ್ನೂ ಸಹ ಪರದೆಯ ಹಿನ್ನೆಲೆಗೆ (ಸ್ಕ್ರೀನ್ ಬ್ಯಾಕ್ಗ್ರೌಂಡ್) ಬಳಸಬಹುದು. ಗೂಗಲ್ ಮೀಟ್ ಆ್ಯಪ್ನಲ್ಲಿಯೇ ಇವೆಲ್ಲವೂ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
-
In-browser background blur and replacement are now available in Google Meet, powered by Web ML and #MediaPipe — no extra software necessary! Learn more about how it works at https://t.co/b2trblgdwX pic.twitter.com/VBANbqSYDS
— Google AI (@GoogleAI) October 30, 2020 " class="align-text-top noRightClick twitterSection" data="
">In-browser background blur and replacement are now available in Google Meet, powered by Web ML and #MediaPipe — no extra software necessary! Learn more about how it works at https://t.co/b2trblgdwX pic.twitter.com/VBANbqSYDS
— Google AI (@GoogleAI) October 30, 2020In-browser background blur and replacement are now available in Google Meet, powered by Web ML and #MediaPipe — no extra software necessary! Learn more about how it works at https://t.co/b2trblgdwX pic.twitter.com/VBANbqSYDS
— Google AI (@GoogleAI) October 30, 2020
ಈ ನೂತನ ಫೀಚರ್ ವಿಂಡೋಸ್ನ ಕ್ರೋಮ್ ಓ-ಎಸ್, ಕ್ರೋಮ್ ಬ್ರೌಸರ್ನಲ್ಲಿ ಬಳಸಬಹುದಾಗಿದೆ ಹಾಗೂ ಮ್ಯಾಕ್ ಡೆಸ್ಕ್ಟಾಪ್ನಲ್ಲೂ ಸಹ ಇದು ಲಭ್ಯವಿದೆ. ಇನ್ನು, ಕೆಲವೇ ದಿನಗಳಲ್ಲಿ ಮೊಬೈಲ್ಗೂ ಸಹ ಸಪೋರ್ಟ್ ಆಗುವಂತಹ ಸಾಫ್ಟ್ವೇರ್ ಹಾಗೂ ಆ್ಯಪ್ಗಳನ್ನು ಸಿದ್ದಪಡಿಸುತ್ತಿದ್ದೇವೆ ಎಂದು ಗೂಗಲ್ ಹೇಳಿದೆ.
ಈ ವಿಶಿಷ್ಟ ಫೀಚರ್ ನಿಮ್ಮ ಹಿನ್ನೆಲೆ ಚಿತ್ರವನ್ನು ಆಕರ್ಷಕವಾಗಿ ತೋರಿಸುತ್ತದೆ ಹಾಗೂ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಮರೆಮಾಚಲು ಸಹಾಯ ಮಾಡುತ್ತದೆ. ಬ್ಯಾಕ್ಗ್ರೌಂಡ್ ಚಿತ್ರಗಳನ್ನು ಪಡೆಯಲು ನಿಮಗೆ ಇನ್ನಾವುದೇ ಸಾಫ್ಟ್ವೇರ್ಗಳ ಅವಶ್ಯಕತೆ ಇಲ್ಲ, ಗೂಗಲ್ ಮೀಟ್ನಲ್ಲಿಯೇ ಇವೆಲ್ಲವೂ ಲಭ್ಯವಿದೆ ಎಂದು ಇದೇ ವೇಳೆ ತಿಳಿಸಿದೆ.
ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿಕೆ ಪ್ರಕಾರ, ಗೂಗಲ್ ಮೀಟ್ನಲ್ಲಿ 235 ಮಿಲಿಯನ್ ದೈನಂದಿನ ಸಭೆಗಳು(ಮೀಟಿಂಗ್) ಹಾಗೂ 7.5 ಬಿಲಿಯನ್ ಜನರು ತಮ್ಮ ದೈನಂದಿನ ಬದುಕಿನಲ್ಲಿ ಈ ಆ್ಯಪ್ ಮೂಲಕ ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.