ನೆಲಮಂಗಲ: ಉತ್ತರ ಪ್ರದೇಶ ಮೂಲದ ವಲಸಿಗ ಕಾರ್ಮಿಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತಾಲೂಕಿನ ಮಾಕೇನಹಳ್ಳಿಯ ಸ್ಟೋನ್ ಕ್ರಷರ್ನ ಶೆಡ್ನಲ್ಲಿ ನೇಣಿಗೆ ಶರಣಾದವ ಕೇಶವ್ (25) ಎಂದು ಗುರುತಿಸಲಾಗಿದೆ.
![secede](https://etvbharatimages.akamaized.net/etvbharat/prod-images/9264962_sucide.jpg)
ಸ್ಯಾಂಡ್ರಕ್ ಅಗ್ರಿಗೇಡ್ಸ್ ಪ್ರೈವೇಟ್ ಲಿಮಿಟೆಡ್ನ ಸ್ಟೋನ್ ಕ್ರಷರ್ನಲ್ಲಿ ಮೃತ ವ್ಯಕ್ತಿ ಕೆಲಸ ಮಾಡುತ್ತಿದ್ದ. ಈ ಕ್ರಷರ್ ಸಚಿವೆ ಶಶಿಕಲಾ ಜೊಲ್ಲೆಯವರ ಆಪ್ತರಿಗೆ ಸೇರಿದ್ದು ಎನ್ನಲಾಗುತ್ತಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.