ETV Bharat / jagte-raho

ಲಾಕ್​ಡೌನ್​ ವೇಳೆ ಗಾಂಜಾ ಸಿಗಲಿಲ್ಲವೆಂದು ಈ ವ್ಯಕ್ತಿ ಮಾಡಿದ್ದೇನು ನೋಡಿ! - ಹೆಬ್ಬಾಳ ಪೊಲೀಸರು ಬಂಧಿಸಿ

ಲಾಕ್​​ಡೌನ್ ವೇಳೆ ಗಾಂಜಾ ಸಿಗದ ಹಿನ್ನೆಲೆ ತಾನೇ ಬೆಳೆಯೋಕೆ ಮುಂದಾಗಿದ್ದ. ರಸ್ತೆಯಿಂದ ಟೆರೇಸ್ ನೋಡಿದವರಿಗೆ ಗಾರ್ಡನ್ ಥರ ಕಾಣುವಂತೆ ಮಾಡಿದ್ದ. ಪರಿಚಯಸ್ಥರು ಯಾರೇ ಬಂದರೂ ಗಾರ್ಡನ್​​ ಪ್ರವೇಶಿಸಲು ಬಿಡುತ್ತಿರಲಿಲ್ಲವಂತೆ.

More than 200 marijuana growers arrested on Terras
ಗಾಂಜಾ ಗಿಡ ಬೆಳೆಸಿದ್ದ ಆರೋಪಿ ಬಂಧನ
author img

By

Published : Dec 18, 2020, 4:12 PM IST

Updated : Dec 18, 2020, 4:36 PM IST

ಬೆಂಗಳೂರು: ಮನೆಯ ಟೆರೇಸ್ ಮೇಲೆ ಸುಮಾರು 200ಕ್ಕೂ ಹೆಚ್ಚು ಗಾಂಜಾ ಗಿಡಗಳನ್ನು ಬೆಳೆಸಿದ್ದ ಆರೋಪಿಯನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

ಟೆರೇಸ್ ಮೇಲೆ ಗಾಂಜಾ ಗಿಡ

ಆರ್‌.ಟಿ.ನಗರದ ಕೀರ್ತಿ ಚಕ್ರವರ್ತಿ ಬಂಧಿತ ಆರೋಪಿಯಾಗಿದ್ದು, ಈತ ಗಾಂಜಾ ವ್ಯಸ್ಯನಿಯಾಗಿದ್ದ. ರೇಸ್ ಕೋರ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಈತ, ಹೆಂಡತಿ-ಮಕ್ಕಳಿಂದ ದೂರವಾಗಿ ಹೆಬ್ಬಾಳದ ಮನೆಯಲ್ಲಿ ಉಳಿದುಕೊಂಡಿದ್ದ. ವೈಯಕ್ತಿಕ ಕಲಹ ಹಿನ್ನೆಲೆ ಹೆಂಡತಿ‌‌-ಮಕ್ಕಳು ದೂರವಾದಾಗಿನಿಂದ ಗಾಂಜಾಗೆ ಅಡಿಕ್ಟ್ ಆಗಿದ್ದನಂತೆ.

ಲಾಕ್​​ಡೌನ್ ವೇಳೆ ಗಾಂಜಾ ಸಿಗದ ಹಿನ್ನೆಲೆ ತಾನೇ ಬೆಳೆಯೋಕೆ ಮುಂದಾಗಿದ್ದ. ರಸ್ತೆಯಿಂದ ಟೆರೇಸ್ ನೋಡಿದವರಿಗೆ ಗಾರ್ಡನ್ ಥರ ಕಾಣುವಂತೆ ಮಾಡಿದ್ದ. ಪರಿಚಯಸ್ಥರು ಯಾರೇ ಬಂದರೂ ಗಾರ್ಡನ್​​ ಪ್ರವೇಶಿಸಲು ಬಿಡುತ್ತಿರಲಿಲ್ಲ. ಹೂ ಕುಂಡಗಳ ಮಧ್ಯೆಯೇ ಗಾಂಜಾ ಗಿಡಗಳನ್ನು ಬೆಳೆದಿದ್ದ ಚಕ್ರವರ್ತಿ, ಗಾಂಜಾ ಗಿಡಗಳನ್ನು ಒಣಗಿಸಿ ಅದನ್ನೇ ಪುಡಿ ಮಾಡಿ ಸೇವಿಸುವ ರೂಢಿ ಮಾಡಿಕೊಂಡಿದ್ದನಂತೆ.

ಓದಿ: ಕದ್ದ ಹೋರಿಗಳನ್ನು ಮಾಲೀಕನ ಜಮೀನು ಹತ್ತಿರ ಬಿಟ್ಟು ಹೋದ ಕಳ್ಳರು... ಯಾಕೆ ಗೊತ್ತಾ!?

ಇತ್ತೀಚೆಗೆ ಚಕ್ರವರ್ತಿ ಅಣ್ಣನ‌ ಮಗ ಬಂದು ನೋಡಿದಾಗ ಗಾಂಜಾ ಬೆಳೆದಿರೋದು ಪತ್ತೆಯಾಗಿದೆ‌. ಈ ವೇಳೆ ಅಣ್ಣನ ಮಗನಿಗೂ ಗಾಂಜಾ ಸೇದುವಂತೆ ಚಕ್ರವರ್ತಿ ಪ್ರೇರೇಪಿಸಿದ್ದನಂತೆ. ಗಾಂಜಾ ಗಿಡಗಳನ್ನು ನೋಡಿದ್ದೇ ಹೆಬ್ಬಾಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇದರ ಆಧಾರದ ಮೇರೆಗೆ ಸ್ಥಳಕ್ಕೆ‌ ತೆರಳಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಎನ್​​ಡಿ‌ಪಿಎಸ್ ಕಾಯ್ದೆ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪರಪ್ಪನ ಅಗ್ರಹಾರ‌ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Dec 18, 2020, 4:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.