ಉದಯಪುರ (ರಾಜಸ್ಥಾನ): ಕೌಟುಂಬಿಕ ಕಲಹದಿಂದಾಗಿ ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಆರು ಮಂದಿಯ ಪ್ರಾಣಪಕ್ಷಿ ಹಾರಿಹೋಗಿದೆ.
ಉದಯಪುರ ಜಿಲ್ಲೆಯ ಖೇರ್ವಾರಾದ ರುಬಿಯಾ ಎಂಬ ಗ್ರಾಮದಲ್ಲಿ ವ್ಯಕ್ತಿಯೋರ್ವ ತನ್ನ ನಾಲ್ವರು ಮಕ್ಕಳು, ಪತ್ನಿಯನ್ನು ಕೊಲೆಗೈದು ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ.
ಓದಿ: ಕೌಟುಂಬಿಕ ಕಲಹ, ವ್ಯಾಪಾರದಲ್ಲಿ ನಷ್ಟ: ಕೆರೆಗೆ ಹಾರಿ ಪ್ರಾಣಬಿಟ್ಟ ಪತಿ
ಪತಿ-ಪತ್ನಿಯ ನಡುವೆ ರಾತ್ರಿ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.