ETV Bharat / jagte-raho

ಚಾಲಕನ ಅಜಾಗರೂಕತೆಯಿಂದ ಪಲ್ಟಿ ಹೊಡೆದ ಬುಲೆರೋ: ಓರ್ವ ಸಾವು - vehicle palty

ಚಾಲಕನ ಅಜಾಗರೂಕತೆಯಿಂದ ವಾಹನವೊಂದು ಪಲ್ಟಿಯಾಗಿದೆ. ಪರಿಣಾಮ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದು 15 ಜನರು ಗಾಯಗೊಂಡಿದ್ದಾರೆ.

ಚಾಲಕನ ಅಜಾಗರೂಕತೆಯಿಂದ ಪಲ್ಟಿ ಹೊಡೆದ ಬುಲೆರೋ
author img

By

Published : May 27, 2019, 10:05 PM IST

ಶಿರಸಿ : ಬುಲೆರೋ ವಾಹನವೊಂದು ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು 15 ಜನರು ಗಾಯಗೊಂಡ ಘಟನೆ ಶಿರಸಿಯ ಬನವಾಸಿ ಬಳಿ ನಡೆದಿದೆ.

ಈರಣ್ಣ ಹೊಸಗಟ್ಟಿ ಕುರಸಾಪುರ ಶಿಗ್ಗಾಂವ (25) ಮೃತ ದುರ್ದೈವಿ. ಸೋಮಣ್ಣ ವಡ್ಡರ, ಸುದೀಪ, ಸಂತೋಷ ಜವಳಗಿ, ತುಕಾರಾಮ,‌ ತಳಹಳ್ಳಿ, ಜ್ಯೋತ್ಯಪ್ಪ, ವಿಶ್ವನಾಥ, ವಾಲ್ಮೀಕಿ, ಈರಣ್ಣ, ಪರಶುರಾಮ ಹಾಗೂ ಗಣೇಶ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನ ಅಜಾಗರೂಕತೆಯಿಂದ ಪಲ್ಟಿ ಹೊಡೆದ ಬುಲೆರೋ

ಎಲ್ಲರೂ ಕುರಸಾಪುರದವರಾಗಿದ್ದು, ದಿನಗೂಲಿ ಕಾರ್ಮಿಕರಾಗಿದ್ದಾರೆ. ವಿದ್ಯುತ್ ತಂತಿ ಎಳೆಯುವ ಕೆಲಸ ಮುಗಿಸಿಕೊಂಡು ಮರಳಿ ಬರುವಾಗ ಚಾಲಕನ ಅಜಾಗರೂಕತೆ ಮತ್ತು ಅತಿ ವೇಗದಿಂದ ವಾಹನ ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Intro:ಶಿರಸಿ :
ನಿರ್ಲಕ್ಷ್ಯ ಚಾಲನೆಯಿಂದ ಬುಲೆರೋ ವಾಹನ ಪಲ್ಟಿಯಾಗಿ ಓರ್ವ ಸ್ಥಳದಲ್ಲೆ ಮೃತಪಟ್ಟು 15 ಜನರು ಗಾಯಗೊಂಡ ಘಟನೆ ಉತ್ತರ ಕನ್ನಡದ ಶಿರಸಿಯ ಬನವಾಸಿ ಬಳಿ ನಡೆದಿದೆ. Body:ಈರಣ್ಣ ಹೊಸಗಟ್ಟಿ ಕುರಸಾಪುರ ಶಿಗ್ಗಾಂವ (25) ಮೃತ ದುರ್ದೈವಿ. ಸೋಮಣ್ಣವಡ್ಡರ, ಸುದೀಪ, ಸಂತೋಷ ಜವಳಗಿ, ತುಕಾರಾಮ,‌ತಳಹಳ್ಳಿ , ಜ್ಯೋತ್ಯಪ್ಪ, ವಿಶ್ವನಾಥ, ವಾಲ್ಮೀಖಿ, ಈರಣ್ಣ, ಪರಶುರಾಮ ಹಾಗೂ ಗಣೇಶ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
Conclusion:ಎಲ್ಲರೂ ಶಿಗ್ಗಾಂವ ತಾಲೂಕಿನ ಕುರಸಾಪುರದವರಾಗಿದ್ದು, ದಿನಗೂಲಿ ಕಾರ್ಮಿಕರು. ವಿದ್ಯುತ್ ತಂತಿ ಎಳೆಯುವ ಕೆಲಸದ ನಿಮಿತ್ತ ಬರುವಾಗ ಚಾಲಕನ ಅಜಾಗರೂಕತೆ ಮತ್ತು ಅತಿ ವೇಗದಿಂದ ವಾಹನ ಪಲ್ಟಿಯಾಗಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
........
ಸಂದೇಶ ಭಟ್ ಶಿರಸಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.