ಜೈಪುರ್: ದುಬೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಜೈಪುರ್ ಪೊಲೀಸರು ಬರೋಬ್ಬರಿ 4.19 ಕೋಟಿ ರೂ. ವಶಕ್ಕೆ ಪಡೆದುಕೊಂಡಿದ್ದಾರೆ.
ದುಬೈನಿಂದಲೇ ಈ ದಂಧೆ ನಡೆಸಲಾಗುತ್ತಿತ್ತು. ವಿವಿಧ ವ್ಯಾಟ್ಸನ್ ಗ್ರೂಪ್ ಬಳಕೆ ಮಾಡಿಕೊಂಡು ಆನ್ಲೈನ್ ಮೂಲಕ ಬೆಟ್ಟಿಂಗ್ನಲ್ಲಿ ಭಾಗಿಯಾಗುವಂತೆ ಹೇಳಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದೀಗ ಜೈಪುರ್ ಪೊಲೀಸರು ನಾಲ್ವರು ಆರೋಪಿಗಳ ಬಂಧನ ಮಾಡಿದ್ದಾರೆ.
ಈ ದಂಧೆಯಲ್ಲಿ ಭಾಗಿಯಾಗಿರುವ ಜನರು ವ್ಯಾಟ್ಸಪ್ ಗ್ರೂಪ್ ರಚನೆ ಮಾಡಿಕೊಂಡಿದ್ದರು. ಬೆಟ್ಟಿಂಗ್ ಕ್ರಿಕೆಟ್ನ ಐಡಿ ಮತ್ತು ಪಾಸ್ವರ್ಡ್ ಜತೆಗೆ ಕೋಡ್ವರ್ಡ್ ಬಳಕೆ ಮಾಡಿ ದಂಧೆಯಲ್ಲಿ ಭಾಗಿಯಾಗುತ್ತಿದ್ದರು. ಕೊಟ್ವಾಲಿ ಪೊಲೀಸ್ ಠಾಣರ ಮತ್ತು ಕಮಿಷನರೇಟ್ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಕಿಶನ್ಪೋಲ್ ಮಾರುಕಟ್ಟೆಯಲ್ಲಿ 4.19 ಕೋಟಿ ರೂ ಹಾಗೂ ನಾಲ್ವರ ಬಂಧನ ಮಾಡಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಚಂದ್ ಮೀನಾ ತಿಳಿಸಿದ್ದಾರೆ.
ರಣಬೀರ್ ಸಿಂಗ್, ಕೃಪಾಲ್ ಸಿಂಗ್, ತೋಡರ್ಮಲ್ ರಾಥೋಡ್, ಮತ್ತು ಈಶ್ವರ್ ಸಿಂಗ್ ಬಂಧಿತರು. ನೆಟ್ವರ್ಕ್ನ ಮಾಸ್ಟರ್ ಮೈಂಡ್ ದುಬೈನಲ್ಲಿ ಕುಳಿತುಕೊಂಡು ದಂಧೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ವಿಶೇಷವೆಂದರೆ ದೇವಾಲಯದ ಹೆಸರಗಳ ಆಧಾರದ ಮೇಲೆ ಬೆಟ್ಟಿಂಗ್ ದಂಧೆ ನಡೆಸಲು ಗುಂಪು ರಚನೆ ಮಾಡಲಾಗಿತ್ತು. ಆರೋಪಿಗಳಿಂದ ವಶಪಡಿಸಿಕೊಂಡ 9 ಮೊಬೈಲ್ ಫೋನ್ಗಳಲ್ಲಿ 30ಕ್ಕೂ ಹೆಚ್ಚು ವ್ಯಾಟ್ಸಾಪ್ ಗ್ರೂಪ್ ಪತ್ತೆಯಾಗಿವೆ.