ಲಂಡನ್: ಇಂಗ್ಲೆಂಡ್ನ ಹೊಸ ಪ್ರಧಾನಿಯಾಗಿ ಆಯ್ಕೆಯಾದ ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರಿಗೆ ರಾಣಿ ಎಲಿಜಬೆತ್ II ಮಂಗಳವಾರ ಅಧಿಕಾರ ಹಸ್ತಾಂತರಿಸಿದರು. ನಿರ್ಗಮಿತ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಔಪಚಾರಿಕವಾಗಿ ರಾಜೀನಾಮೆ ನೀಡಲು ರಾಣಿಯನ್ನು ಭೇಟಿಯಾದ ಸ್ವಲ್ಪ ಸಮಯದ ನಂತರ ಬ್ರಿಟನ್‌ನ ಮುಂದಿನ ಪ್ರಧಾನ ಮಂತ್ರಿಯಾಗಿ ಲಿಜ್ ಟ್ರಸ್ ಅವರನ್ನು ನೇಮಿಸಲಾಯಿತು.
ಮುರಿದ ಸಂಪ್ರದಾಯ: ರಾಣಿ ಎಲಿಜಬೆತ್ ಅವರ 70 ವರ್ಷಗಳ ಆಳ್ವಿಕೆಯಲ್ಲಿ ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಯಲ್ಲಿಯೇ ನೂತನ ಪ್ರಧಾನಿಗಳಿಗೆ ಅಧಿಕಾರ ಹಸ್ತಾಂತರಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಸ್ಕಾಟ್ಲೆಂಡ್ನ ಬಾಲ್ಮೋರಲ್ ಎಸ್ಟೇಟ್ನಲ್ಲಿ ಲಿಜ್ ಟ್ರಸ್ ಅವರಿಗೆ ಅಧಿಕಾರದ ಜವಾಬ್ದಾರಿ ನೀಡಿದರು. 96 ವರ್ಷದ ರಾಣಿ ಎಲಿಜಬೆತ್ ಆರೋಗ್ಯದ ಕಾರಣಕ್ಕಾಗಿ ಅವರು ಇಂಗ್ಲೆಂಡ್ನಲ್ಲಿನ ಬಕಿಂಗ್‌ಹ್ಯಾಮ್ ಅರಮನೆಗೆ ಬರಲಾಗಲಿಲ್ಲ.
ಭಾರತೀಯ ಮೂಲದ ರಿಷಿ ಸುನಕ್ ಅವರ ವಿರುದ್ಧ ನಡೆದ ಕಠಿಣ ಸ್ಪರ್ಧೆಯಲ್ಲಿ ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ 81,326 ಮತಗಳನ್ನು ಪಡೆದರು. ಸುನಕ್ 60,399 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಈ ಮೂಲಕ ಲಿಜ್ ಟ್ರಸ್ ಅವರು ಇಂಗ್ಲೆಂಡ್ನ ಮೂರನೇ ಮಹಿಳಾ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಓದಿ: ಲಿಜ್ ಟ್ರಸ್ ಇಂಗ್ಲೆಂಡ್ನ ನೂತನ ಪ್ರಧಾನಿ.. ಭಾರತದ ರಿಷಿ ಸುನಕ್ಗೆ ಸೋಲಿನ ನಿರಾಸೆ