ಕ್ವಿಟೊ, ಈಕ್ವೆಡಾರ್: ಭ್ರಷ್ಟಾಚಾರ ಮತ್ತು ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಧ್ವನಿ ಎತ್ತಿದ್ದ ಈಕ್ವೆಡಾರ್ ಅಧ್ಯಕ್ಷೀಯ ಅಭ್ಯರ್ಥಿ ಫರ್ನಾಂಡೊ ವಿಲ್ಲಾವಿಸೆನ್ಸಿಯೋ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಚುನಾವಣಾ ರ‍್ಯಾಲಿ ಮುಗಿಸಿಕೊಂಡು ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದು ದಕ್ಷಿಣ ಅಮೆರಿಕದ ದೇಶದಲ್ಲಿ ಸಂಚನಲ ಮೂಡಿಸಿದೆ.
-
Indignado y consternado por el asesinato del candidato presidencial Fernando Villavicencio. Mi solidaridad y mis condolencias con su esposa y sus hijas. Por su memoria y por su lucha, les aseguro que este crimen no va a quedar impune.
— Guillermo Lasso (@LassoGuillermo) August 10, 2023 " class="align-text-top noRightClick twitterSection" data="
El Gabinete de Seguridad se reunirá en…
">Indignado y consternado por el asesinato del candidato presidencial Fernando Villavicencio. Mi solidaridad y mis condolencias con su esposa y sus hijas. Por su memoria y por su lucha, les aseguro que este crimen no va a quedar impune.
— Guillermo Lasso (@LassoGuillermo) August 10, 2023
El Gabinete de Seguridad se reunirá en…Indignado y consternado por el asesinato del candidato presidencial Fernando Villavicencio. Mi solidaridad y mis condolencias con su esposa y sus hijas. Por su memoria y por su lucha, les aseguro que este crimen no va a quedar impune.
— Guillermo Lasso (@LassoGuillermo) August 10, 2023
El Gabinete de Seguridad se reunirá en…
ದಕ್ಷಿಣ ಅಮೆರಿಕ ದೇಶವಾದ ಈಕ್ವೆಡಾರ್ನಲ್ಲಿ ಸದ್ಯ ಹಿಂಸಾಚಾರ, ಮಾದಕವಸ್ತು ಕಳ್ಳಸಾಗಣೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದರ ವಿರುದ್ಧ ಮಾತನಾಡುತ್ತಿದ್ದ ಅಧ್ಯಕ್ಷೀಯ ಅಭ್ಯರ್ಥಿಯನ್ನು ಹತ್ಯೆ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಚುನಾವಣಾ ರ‍್ಯಾಲಿ ಬಳಿಕ ಶೂಟೌಟ್: ಈಕ್ವೆಡಾರ್ ರಾಷ್ಟ್ರಪತಿ ಸ್ಥಾನಕ್ಕೆ ಇದೇ ಆಗಸ್ಟ್ 20 ರಂದು ಚುನಾವಣೆ ನಡೆಯಲಿದೆ. ಹತ್ಯೆಗೀಡಾದ ಅಭ್ಯರ್ಥಿ ಫರ್ನಾಂಡೊ ಅವರು ಮಾದಕವಸ್ತು ಕಳ್ಳಸಾಗಣೆ ವಿರುದ್ಧ ತೀವ್ರ ಧ್ವನಿ ಎತ್ತಿದ್ದರು. ಚುನಾವಣೆಯ ಹಿನ್ನೆಲೆಯಲ್ಲಿ ರ‍್ಯಾಲಿ ಮುಗಿಸಿಕೊಂಡು ಕಾರು ಹತ್ತುತ್ತಿರುವಾಗ ದುಷ್ಕರ್ಮಿಗಳು ತೀರಾ ಹತ್ತಿರದಲ್ಲಿ ಬಂದು ಶೂಟೌಟ್ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಫರ್ನಾಂಡೊ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ವಿಲ್ಲಾವಿಸೆನ್ಸಿಯೊ ಅವರ ಪ್ರಚಾರ ಸಲಹೆಗಾರ ಪ್ಯಾಟ್ರಿಸಿಯೊ ಜುಕ್ವಿಲಾಂಡಾ ಹೇಳಿದಂತೆ, ಗುಂಡು ಹಾರಿಸುವ ಮೊದಲು ಅಭ್ಯರ್ಥಿ ಫೆರ್ನಾಂಡೊ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು. ಇದರ ಹಿಂದೆ ಮಾದಕವಸ್ತು ಕಳ್ಳಸಾಗಣೆದಾರರ ಕೈವಾಡವಿದೆ. ಹಂತಕರ ವಿರುದ್ಧ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದರು.
ದೇಶದಲ್ಲಿ ಹಿಂಸಾಚಾರ ತೀವ್ರವಾಗಿದೆ. ಜನರು ಪ್ರಾಣ ಭೀತಿಯಲ್ಲಿ ಬದುಕುವಂತಾಗಿದೆ. ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಮಾತನಾಡಿದವರ ಹತ್ಯೆಯಾಗುತ್ತಿದೆ. ಸರ್ಕಾರ ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂಬ ಕೂಗು ಕೇಳಿ ಬಂದಿದೆ. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಇತರ ಅಭ್ಯರ್ಥಿಗಳು ಕೂಡ ಒಕ್ಕೊರಲಿನಿಂದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಾಜಿ ಉಪಾಧ್ಯಕ್ಷ ಒಟ್ಟೊ ಸೊನ್ನೆನ್‌ಹೋಲ್ಜರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಸಾಯುತ್ತಿದ್ದೇವೆ. ಕಣ್ಣೀರಿನಲ್ಲೇ ಜೀವನ ಕಳೆಯುವಂತಾಗಿದೆ. ಪರಿಸ್ಥಿತಿ ಶೋಚನೀಯವಾಗಿದ್ದು, ಬದುಕುವುದೇ ದುಸ್ಥರವಾಗಿದೆ. ಸರ್ಕಾರ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
2007 ರಿಂದ 2017 ರವರೆಗಿನ ಮಾಜಿ ಅಧ್ಯಕ್ಷ ರಾಫೆಲ್ ಕೊರಿಯಾ ಅವರ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಕಳ್ಳಸಾಗಣೆ ವಿರುದ್ಧ ವಿಲವಿಸೆನ್ಸಿಯೊ ಅವರು ಕಠಿಣ ನಿಂದಕರಾಗಿದ್ದರು. ಮಾಜಿ ಅಧ್ಯಕ್ಷರ ವಿರುದ್ಧ ಹಲವು ಆರೋಪಗಳನ್ನು ಹೊರಿಸಿದ್ದರು.
ಕಾನೂನು ಕ್ರಮ: ಫರ್ನಾಂಡೊ ವಿಲ್ಲಾವಿಸೆನ್ಸಿಯೊ ಹತ್ಯೆಯನ್ನು ಖಂಡಿಸಿರುವ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಅವರು ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದರು. ಹತ್ಯೆಯ ಹಿಂದೆ ಸಂಘಟಿತ ಅಪರಾಧವಿದೆ ಎಂದು ಕಂಡು ಬಂದಿದೆ. ಸಂಘಟಿತ ವ್ಯವಸ್ಥೆಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಜೋ ಬೈಡನ್ಗೆ ಕೊಲೆ ಬೆದರಿಕೆ.. ಶಂಕಿತನನ್ನು ಹೊಡೆದುರುಳಿಸಿದ ಎಫ್ಬಿಐ